»   » ಮಹಾ ಚಾಲಾಕಿ ಸನ್ನಿ ಲಿಯೋನ್; ರಟ್ಟಾಯ್ತು ಗುಟ್ಟು!

ಮಹಾ ಚಾಲಾಕಿ ಸನ್ನಿ ಲಿಯೋನ್; ರಟ್ಟಾಯ್ತು ಗುಟ್ಟು!

Posted By:
Subscribe to Filmibeat Kannada
ಹಿಂದೊಮ್ಮೆ ನಿರ್ದೇಶಕ ಮಹೇಶ್ ಭಟ್ ತಮ್ಮ ಮಗಳು ಪೂಜಾ ಭಟ್ ನಿರ್ದೇಶನದ 'ಜಿಸ್ಮ್- 2' ನಟಿ ಸನ್ನಿ ಲಿಯೋನ್ ಬಗ್ಗೆ ಒಂದು ಮಾತು ಹೇಳಿದ್ದರು. "ಸನ್ನಿ ಲಿಯೋನ್ ಅನಗತ್ಯವಾಗಿ ಮಾತನಾಡುವುದಿಲ್ಲ, ಹೆಚ್ಚು ಶೋಕಿಯೂ ಅಲ್ಲ. ಜೊತೆಗೆ ಸಾಕಷ್ಟು ಸಂಪ್ರದಾಯಗಳನ್ನು ಆಚರಣೆ ಮಾಡುವವರು". ನೀಲಿ ಚಿತ್ರಗಳ ನಾಯಕಿಯಾಗಿದ್ದ ಸನ್ನಿ ಬಗ್ಗೆ ಅವರು ಹೇಳಿದ್ದ ಮಾತನ್ನು ಕೇಳಿ ಸಾಕಷ್ಟು ಜನ ಮುಸುಮುಸಿ ನಕ್ಕಿದ್ದರು.

ಆದರೆ, ಮಹೇಶ್ ಭಟ್ ಸುಳ್ಳೇನು ಹೇಳಿರಲಿಲ್ಲ. ಸಾಕಷ್ಟು ಸಂಪ್ರದಾಯಗಳನ್ನು ಆಚರಿಸುತ್ತಿದ್ದರೂ ವಾಸ್ತವವನ್ನೂ ಅರಿತಿದ್ದ ಸನ್ನಿ ಲಿಯೋನ್, ಅಮೆರಿಕಾದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಬಾಚಿಕೊಂಡಿದ್ದರು ಅಷ್ಟೇ. ಪಾಲಿಗೆ ಬಂದಿದ್ದು ಪಂಚಾಮೃತವೆಂಬಂತೆ ಬದುಕುತ್ತಿದ್ದರು ಸನ್ನಿ ಲಿಯೋನ್. ಭಾರತದಲ್ಲಿ ನಡೆದ 'ಬಿಗ್ ಬಾಸ್' ಶೋ ಸನ್ನಿಗೆ ಹೊಸ ದಾರಿ ತೋರಿಸಿತು. 'ಬಿಗ್ ಬಾಸ್' ಮೂಲಕ ಗಮನಸೆಳೆದ ಸನ್ನಿ ಭಾರತದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿದರು.

ಈ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕ ಮಹೇಶ್ ಭಟ್ ಗಮನಸೆಳೆಯಲು ಸಫಲರಾದರು ಸನ್ನಿ ಲಿಯೋನ್. ನಂತರ ಮಹೇಶ್ ಭಟ್ ಮಗಳು ಪೂಜಾ ಭಟ್ ನಿರ್ದೇಶನದ ಚಿತ್ರ 'ಜಿಸ್ಮ್-2' ಮೂಲಕ ಇದೀಗ ಬಾಲಿವುಡ್ ಪ್ರವೇಶ ಪಡೆದ ಸನ್ನಿ, ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ಸಂಬಂಧಪಟ್ಟಂತೆ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಅದು, ಸನ್ನಿ ನಟಿಸುವ ಎಲ್ಲಾ ಚಿತ್ರಗಳ ಸ್ಕ್ರಿಪ್ಟ್ ಗಳನ್ನು 'ಓಕೆ' ಮಾಡುವವರು ಅವರ ಪತಿ ಡೇನಿಯಲ್ ವೆಬರ್ ಎಂಬ ಸಂಗತಿ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಮಾತನ್ನು ಸ್ಪಷ್ಟವಾಗಿ ಹೇಳಿರುವ ಸನ್ನಿ " ನಾನು ನಟಿಸುವ ಯಾವುದೇ ಚಿತ್ರದ ಸ್ಕ್ರಿಪ್ಟ್, ನನ್ನ ಗಂಡ ನೋಡಿ ಪರ್ಮಿಷನ್ ಕೊಟ್ಟ ಮೇಲೆಯೇ ಓಕೆ ಆಗುವುದು. ನನ್ನ ಪತಿಯ ಪರ್ಮಿಷನ್ ಇಲ್ಲದೇ ನಾನು ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಇಲ್ಲಿಯವರೆಗೂ ನಾನು ಒಪ್ಪಿ ಸಹಿ ಮಾಡಿದ ಎಲ್ಲಾ ಚಿತ್ರಗಳನ್ನು ಅನುಮೋದಿಸಿದ್ದು ನನ್ನ ಪತಿ ಡೇನಿಯಲ್" ಎಂದಿದ್ದಾರೆ.

ಸನ್ನಿ ಲಿಯೋನ್ ಸುಳ್ಳು ಹೇಳುವುದಿಲ್ಲ ಎಂಬುದನ್ನು ಮಹೇಶ್ ಭಟ್ ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ,ಜಿಸ್ಮ್- 2, ಬಿಡುಗಡೆ ಹಂತದಲ್ಲಿರುವಾಗ ಸ್ವತಃ ಡೇನಿಯಲ್ ಈ ಚಿತ್ರದ ಪ್ರಚಾರಕಾರ್ಯದಲ್ಲಿ ಭಾಗಿಯಾಗಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಜೊತೆಗೆ ಸನ್ನಿ ಲಿಯೋನ್ ಈ ಮೊದಲು ಕೆಲವು ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದರು ಕೂಡ. ಅವೆಲ್ಲಕ್ಕೂ ಪತಿಯ ಪರ್ಮಿಷನ್ ಇತ್ತು ಎಂಬುದು ವಿಶೇಷ. ಒಟ್ಟಿನಲ್ಲಿ ಸನ್ನಿ ಲಿಯೋನ್ ಅವರನ್ನು ಕೇವಲವಾಗಿ ಪರಿಗಣಿಸುವಂತಿಲ್ಲ. ಎಲ್ಲರೂ ಅಂದುಕೊಂಡತಿಲ್ ಈ ಸನ್ನಿ ಲಿಯೋನ್! (ಏಜೆನ್ಸೀಸ್)

English summary
Sunny Leone's husband Daniel Weber approves all her scripts. He is very protective about Sunny.
 
Please Wait while comments are loading...