»   » ಗಂಡನೊಂದಿಗೆ ಬಂದ ನೀಲಿ ತಾರೆ ಸನ್ನಿ ಲಿಯೋನ್

ಗಂಡನೊಂದಿಗೆ ಬಂದ ನೀಲಿ ತಾರೆ ಸನ್ನಿ ಲಿಯೋನ್

Posted By:
Subscribe to Filmibeat Kannada

ಮಾದಕ ಮೈಮಾಟದ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ಮುಂಬೈಗೆ ಬಂದಿಳಿದಿದ್ದಾರೆ. ತಮ್ಮ ಮೊದಲ ಚಿತ್ರ 'ಜಿಸ್ಮ್ -2' ಪ್ರಚಾರಕ್ಕಾಗಿ ಆಗಮಿಸಿರುವ ಸನ್ನಿ ಲಿಯೋನ್, ತಮ್ಮ ಗಂಡ ಡೇನಿಯಲ್ ವೆಬರ್ ಜೊತೆಗೆ ಬಂದಿದ್ದಾರೆ. ಪೂಜಾ ಭಟ್ ಅವರ ಬಹುನಿರೀಕ್ಷೆಯ ಚಿತ್ರ ಜಿಸ್ಮ್-2 ಮೇಲೆ ಸ್ವತಃ ಸನ್ನಿಗೆ ಭಾರಿ ಭರವಸೆಯಿದೆ. ಹೀಗಾಗಿ, ಸಖತ್ ಖುಷಿಯಿಂದಲೇ ಪ್ರಮೋಶನ್ ಮಾಡಲಿದ್ದಾರೆ ಸನ್ನಿ ಲಿಯೋನ್.

ಇಡೀ ದೇಶವೇ ನೀಲಿ ತಾರೆಯೊಬ್ಬರು ಮೊದಲಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಜಿಸ್ಮ್-2 ಚಿತ್ರವನ್ನು ಕಾತರದಿಂದ ಕಾಯುತ್ತಿದೆ. ಈ ಚಿತ್ರದಲ್ಲಿ ತಾವು ಅಭಿನಯಿಸುವ ಮೂಲಕ ನೀಲಿ ತಾರೆಗಳಿಗೂ ಬಾಲಿವುಡ್ ನಟಿಯರ ಸಾಲಿನಲ್ಲಿ ಜಾಗವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಸನ್ನಿ ಲಿಯೋನ್.

Sunny Leone

ಈ ಚಿತ್ರದಲ್ಲಿ ಸನ್ನಿ ಲಿಯೋನ್ ಪಾರ್ನ್ ಸ್ಟಾರ್ ಪಾತ್ರವನ್ನೇ ಮಾಡಿದ್ದು, ನಟರಾದ ರಣದೀಪ್ ಹೂಡ ಹಾಗೂ ಅರುಣೋದಯ್ ಸಿಂಗ್ ಅವರೊಂದಿಗೆ ರೊಮಾನ್ಸ್ ಮಾಡಿದ್ದಾರೆ. ಚಿತ್ರದ ಟ್ರೈಲರ್ ಗಳೂ ಕೂಡ ಭಾರಿ ಹಾಟ್ ಎನ್ನಲಾಗುತ್ತಿದೆ. ಪೂಜಾ ಭಟ್ ನಿರ್ದೇಶನದಲ್ಲಿ ಸನ್ನಿ ಸಾಕಷ್ಟು ಬಿಂದಾಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನೀಲಿ ತಾರೆ ಸನ್ನಿ ಲಿಯೋನ್ ಅವರಿಗೆ ಬಾಲಿವುಡ್ ಬಾಗಿಲು ತೆರೆದಿದ್ದೇ ತಡ, ಆಯೆಷಾ ಕಾರ್ಮೆಲಾ ಎಂಬ ಇನ್ನೊಬ್ಬ ನೀಲಿ ತಾರೆ ಕೂಡ ಅವಕಾಶಕ್ಕಾಗಿ ಬಾಲಿವುಡ್ ಬಾಗಿಲಲ್ಲಿ ಕಾಯುತ್ತಿದ್ದಾರೆ. ಬಂದಿರುವ ವರ್ತಮಾನದ ಪ್ರಕಾರ ಆಯೆಷಾ ಬರುವುದು ಹೆಚ್ಚುಕಡಿಮೆ ಖಾತ್ರಿಯಾಗಿದೆ. "ಸನ್ನಿ ಲಿಯೋನ್ ನಮ್ಮಂಥವರಿಗೆ ಮಾದರಿ" ಎಂದಿದ್ದಾರೆ ಆಯೆಷಾ.

ಒಟ್ಟಿನಲ್ಲಿ ಸೆನ್ಸಾರ್ ಕಡೆಯಿಂದ 'A' ಪ್ರಮಾಣಪತ್ರ ಪಡೆದಿರುವ ಜಿಸ್ಮ್ 2, ಬರುವ ಶುಕ್ರವಾರ ಅಂದರೆ ಆಗಸ್ಟ್ 02, 2012 ರಂದು ತೆರೆಕಾಣಲಿದೆ. ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಂತೂ ಇದೆ. ಅದು ನಿಜವಾಗಬಹುದೇ ಎಂಬುದಷ್ಟೇ ಕಾದು ನೋಡಬೇಕಾದ ಸಂಗತಿ. ಅಂದಹಾಗೆ, ಸನ್ನಿ ಈಗಾಗಲೇ ಇನ್ನೊಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್)

English summary
Sunny came down to Mumbai, to promote her high profile debut film 'Jism 2' with husband Daniel Weber. Leone, who supposedly plays the role of a porn star in Jism 2, looks super hot and beautiful in the trailers. Sunny Leone will be seen romancing with Randeep Hooda and Arunoday Singh in the film. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada