»   » ಮತ್ತೆ ಸಮಸ್ಯೆಯಲ್ಲಿ ಸಿಲುಕಿದ ಸನ್ನಿ ಲಿಯೋನ್

ಮತ್ತೆ ಸಮಸ್ಯೆಯಲ್ಲಿ ಸಿಲುಕಿದ ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ ನಟಿ ಸನ್ನಿ ಲಿಯೋನ್ ಗೆ ಕಾಂಡೋಮ್ ಜಾಹೀರಾತು ಕರ್ಮಕಾಂಡ ಮಗಿಯದ ಸಮಸ್ಯೆಯಾಗಿದೆ. ಈಗೇನಪ್ಪಾ ಆಯ್ತು ಅಂದದ್ದು ಅಂತಿರಾ?.. ನಟಿ ಸನ್ನಿ ಲಿಯೋನ್ ಪ್ರಚಾರ ಮಾಡಿರುವ ಕಾಂಡೋಮ್ ಬ್ರ್ಯಾಂಡ್ ನಿಷೇದಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಇಂಡಿಯನ್ ರಿಪಬ್ಲಿಕನ್ ಪಾರ್ಟಿಯ ಮಹಿಳಾ ವಿಭಾಗ ಮನವಿ ಮಾಡಿದೆ.[ಪೊಲೀಸರ ಆತಂಕದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್]

"ಸನ್ನಿ ಲಿಯೋನ್ ನೀಡಿರುವ ಕಾಂಡೋಮ್ ಜಾಹೀರಾತು ಮಹಿಳೆಯರಿಗೆ ಸಂಪೂರ್ಣ ಕಿರಿಕಿರಿ ಉಂಟುಮಾಡುತ್ತದೆ. ಅಲ್ಲದೇ ಅಸಹ್ಯವಾದ ದೃಶ್ಯಗಳನ್ನು ಹೊಂದಿದ್ದು, ವೀಕ್ಷಕರಿಗೆ ವಿಭಿನ್ನವಾದ ಸಂದೇಶ ರವಾನೆ ಮಾಡುತ್ತದೆ" ಎಂದು 'ಇಂಡಿಯಾ ರಿಪಬ್ಲಿಕನ್ ಪಕ್ಷ'ದ ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಗಂಗುರ್ದೆ ಎಂಬುವವರು ಐಎಎನ್‌ಎಸ್ ಗೆ ಹೇಳಿದ್ದಾರೆ.

Sunny Leone is in Troble again due to her Advertisements

'ಕಾಂಡೋಮ್ ಜಾಹೀರಾತನ್ನು ಹಲವು ಚಾನೆಲ್ ಗಳಲ್ಲಿ ತೋರಿಸಲಾಗಿದೆ. ಇದು ವಿಚಿತ್ರಕರವಾಗಿದ್ದು ಮನೆಯಲ್ಲಿ ಕುಟುಂಬದ ಎಲ್ಲಾ ಮಹಿಳೆಯರು ಒಟ್ಟಿಗೆ ಕುಳಿತು ದೂರದರ್ಶನ ವೀಕ್ಷಿಸಿದರೆ ಅಸಹ್ಯ ಹುಟ್ಟಿಸುತ್ತದೆ. ಇದರಿಂದ ಭಾರತೀಯ ವೀಕ್ಷಕರಿಗೆ ಅನೈತಿಕ ಅಭ್ಯಾಸಗಳ ರವಾನೆ ಆಗುತ್ತಿದ್ದು, ಇಲ್ಲಿನ ಜನರ ನೈತಿಕ ತತ್ವಗಳು ಮತ್ತು ಧಾರ್ಮಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ  ಹಲವು ಮಹಿಳಾ ವೀಕ್ಷಕರಿಂದ ದೂರುಗಳನ್ನು ಸ್ವೀಕರಿಸಿದ್ದು, ಕಾಂಡೋಮ್ ಜಾಹೀರಾತುಗಳು ಮತ್ತು ಗರ್ಭನಿರೋಧಕಗಳ ಪ್ರಚಾರ ಕಡ್ಡಾಯವಾಗಿ ಬ್ಯಾನ್ ಆಗಬೇಕಿದೆ" ಎಂದು ಶೀಲಾ ಗಂಗುರ್ದೆ ಹೇಳಿದ್ದಾರೆ.[ವಿಡಿಯೋ: ಸನ್ನಿ ಲಿಯೋನ್ ರ ವಿವಾದಿತ ಕಾಂಡೋಮ್ ಜಾಹೀರಾತು!]

Sunny Leone is in Troble again due to her Advertisements

ಇನ್ನೂ ಇದೇ ಪಕ್ಷದ ಕೇಂದ್ರ ಸಚಿವರಾದ ರಾಮ್ ದಾಸ್ ಅಥವಲೇ ಅವರು ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು ನಿಷೇಧಕ್ಕೆ ಸರ್ಕಾರಕ್ಕೆ ಅಂತಿಮ ಮನವಿ ಸಲ್ಲಿಸಿದ್ದಾರೆ.

ಈ ಹಿಂದೆ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದ ಮ್ಯಾನ್ ಫೋರ್ಸ್ ಸಂಸ್ಥೆಯ ಕಾಂಡೋಮ್ ಜಾಹೀರಾತು ನಿಷೇಧಕ್ಕೆ ಗೋವಾದ ಮಹಿಳಾ ಸಂಘಟನೆಯೊಂದು ಆಗ್ರಹಿಸಿತ್ತು.

English summary
The women’s wing of the Republican Party of India demanded the yanking of an advertisement featuring former adult entertainer and Bollywood actress Sunny Leone promoting a condom brand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada