»   » ಬಾಕ್ಸಾಫೀಸ್ ಸನ್ನಿ ಲಿಯೋನ್ ಜಿಸ್ಮ್ 2 ಭರ್ಜರಿ ಬೆಳೆ

ಬಾಕ್ಸಾಫೀಸ್ ಸನ್ನಿ ಲಿಯೋನ್ ಜಿಸ್ಮ್ 2 ಭರ್ಜರಿ ಬೆಳೆ

Posted By:
Subscribe to Filmibeat Kannada

ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರ 'ಜಿಸ್ಮ್ 2' ಬಾಕ್ಸಾಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕಾಮಪ್ರಚೋದಕ ಥ್ರಿಲ್ಲರ್ ಆದ ಈ ಸಿನೆಮಾದ ಮೊದಲ ವಾರದ ಸರಾಸರಿ ಗಳಿಕೆ ರು.29.91 ಕೋಟಿ ಎನ್ನುತ್ತದೆ ಬಾಕ್ಸಾಫೀಸ್ ರಿಪೋರ್ಟ್.

ಆದರೆ ಮಹೇಶ್ ಭಟ್ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಜಿಸ್ಮ್ 2' ಚಿತ್ರದ ಗಳಿಕೆ ನಿರಾಶಾದಾಯಕ ಎನ್ನಬಹುದು. ಭಟ್ ಅವರ ಹಿಂದಿನ ಚಿತ್ರಗಳಾದ 'ಜನ್ನತ್ 2' ಹಾಗೂ 'ಮರ್ಡರ್ 2' ಚಿತ್ರಗಳ ಮೊದಲ ವಾರದ ಗಳಿಕೆ ಕ್ರಮವಾಗಿ ರು. 35.50 ಕೋಟಿ ಹಾಗೂ ರು. 36.5 ಕೋಟಿ ಗಳಿಸಿದ್ದವು.

ಪೂಜಾ ಭಟ್ ಆಕ್ಷನ್ ಕಟ್ ಹೇಳಿರುವ 'ಜಿಸ್ಮ್ 2' ಚಿತ್ರ ಬಾಕ್ಸಾಫೀಸಲ್ಲಿ ಇನ್ನೂ ಹೆಚ್ಚಿಗೆ ಸದ್ದು ಮಾಡಬಹುದಾಗಿತ್ತು. ಆದರೆ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ ಎಂದು ಚಿತ್ರ ವಿಮರ್ಶೆಗಳು ಪ್ರೇಕ್ಷಕರಿಗೆ ಸಂದೇಶ ರವಾನಿಸಿದವು. ಚಿತ್ರ ವಿಮರ್ಶೆಗಳಿಗೆ ನೀಡಿದ ರೇಟಿಂಗ್ ಕೂಡ ಮೂರುವರೆ ಸ್ಟಾರ್ ಮುಟ್ಟಿರಲಿಲ್ಲ. ಇವೆಲ್ಲ ಅಂಶಗಳು ಚಿತ್ರಕ್ಕೆ ಮುಳುವಾಯಿತು ಎನ್ನಲಾಗಿದೆ.

ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾದ 'ಜಿಸ್ಮ್ 2' ಚಿತ್ರದ ಮೊದಲ ದಿನದ ಗಳಿಕೆ ರು. 7.99 ಕೋಟಿ. ನಂತರದ ದಿನಗಳಲ್ಲಿ ಕಲೆಕ್ಷನ್ ಶೇ.20 ರಿಂದ 30ರಷ್ಟು ಕುಸಿಯಿತು. ಶನಿವಾರ ಮತ್ತು ಭಾನುವಾರ ರಜಾದಿನಗಳಾದ ಕಾರಣ ಕ್ರಮವಾಗಿ ರು.6.24ಕೋಟಿ ಹಾಗೂ ರು. 6.54 ಕೋಟಿ ಕಲೆಕ್ಷನ್ ಮಾಡಿತು.

ಇದುವರೆಗಿನ ಚಿತ್ರದ ಗಳಿಕೆ ನಿರ್ಮಾಪಕರಿಗೆ ಖುಷಿ ಕೊಡದಿದ್ದರೂ ಸನ್ನಿ ಲಿಯೋನ್ ಮಾತ್ರ ಸಖತ್ ಜಾಲಿ ಮೂಡಲ್ಲಿದ್ದಾರೆ. ತಮ್ಮ ಮೊದಲ ಚಿತ್ರ ಈ ಪಾಟಿ ಸದ್ದು ಮಾಡಿದೆಯಲ್ಲಾ ಎಂಬುದೇ ಇದಕ್ಕೆ ಕಾರಣ. ಸನ್ನಿಗೆ ಬಾಲಿವುಡ್ ನಲ್ಲಿ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಹಾಗಾಗಿ ಇನ್ನು ಎರಡು ವರ್ಷ ಯಾವುದೇ ನೀಲಿ ಚಿತ್ರಗಳಲ್ಲಿ ಅಭಿನಯಿಸಲ್ಲ ಎಂದಿದ್ದಾರೆ. ನೋಡೋಣ. (ಏಜೆನ್ಸೀಸ್)

English summary
Sunny Leone's debut Bollywood movie Jism 2 has done a superb business at the Box Office in India. The erotic thriller has concluded the first week with a decent collection of Rs 29.91 crores nett. But the Pooja Bhatt directed flick has failed to break the record of Mahesh Bhatt's previous movies Jannat 2 and Murder 2, which had raked in Rs 35.50 crores and Rs 36.5 crores respectively in the first week.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada