»   » ವಯಸ್ಕರ ಚಿತ್ರಗಳ ಅನುಭವ ಸನ್ನಿಗೆ ದಾರಿದೀಪ

ವಯಸ್ಕರ ಚಿತ್ರಗಳ ಅನುಭವ ಸನ್ನಿಗೆ ದಾರಿದೀಪ

Posted By:
Subscribe to Filmibeat Kannada
ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಈಗ 'ಜಿಸ್ಮ್ 2' ಚಿತ್ರೀಕರಣದಲ್ಲಿ ಬಹಳ ಬಿಜಿ. ಇದೀಗ ಶ್ರೀಲಂಕಾದಲ್ಲಿ ಈ ಚಿತ್ರದ ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್, "ನಾನು ಈ ಮೊದಲು ಮಾಡಿದ್ದ ವಯಸ್ಕರ ಚಿತ್ರಗಳ ಅನುಭವ ನನಗೆ ಇಲ್ಲಿ ದಾರಿದೀಪವಾಯ್ತು" ಎಂದಿದ್ದಾರೆ. ಆ ಅನುಭವದಲ್ಲಿ ಮಾಡಿದ ದೃಶ್ಯಗಳು ಹೇಗಿರಬಹುದು, ಹಾಗೇ ಊಹಿಸಿ...

ಜನಪ್ರಿಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸನ್ನಿ ಲಿಯೋನ್ "ನನ್ನ ಅಭಿಮಾನಿಗಳು ಈ ಚಿತ್ರದಲ್ಲಿ ನನ್ನೆಲ್ಲ ಪ್ರತಿಭೆ (?)ಯನ್ನು ನೋಡಲಿದ್ದಾರೆ. ಈ ಚಿತ್ರ ಪ್ರಬುದ್ಧವಾಗಿ ಯೋಚಿಸುವವರಿಗೆ ಖಂಡಿತ ಇಷ್ಟವಾಗುವಂತಿದೆ. ಜಿಸ್ಮ್ 2 ಮೂಲಕ ನನ್ನೆಲ್ಲಾ ಕನಸುಗಳು ನನಸಾಗಲಿವೆ. ವಯಸ್ಕರ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಅನುಭವವಿದ್ದ ನನಗೆ ಈ ಚಿತ್ರದ ಅಪರೂಪದ ದೃಶ್ಯಗಳಲ್ಲಿ ನಟಿಸುವುದು ಕಷ್ಟವಾಗಲಿಲ್ಲ" ಎಂದಿದ್ದಾರೆ.

"ಈ ಚಿತ್ರದಲ್ಲಿ ನನ್ನ ಮೊದಲಿನ ಅನುಭವ ನೆರವಾದ್ದರಿಂದ ನನಗೆ ನನ್ನ 'ದಿ ಬೆಸ್ಟ್' ನೀಡಲು ಸಾಧ್ಯವಾಗಿದೆ. ನನ್ನ ದೇಹ ನನ್ನೆಲ್ಲಾ ಪ್ರತಿಭೆಗೆ ಸಂಪೂರ್ಣ ಸಹಕಾರ ನೀಡಿದೆ" ಎಂದು ಸನ್ನಿ ಹೇಳಿದ್ದಾರೆ. ಇತ್ತೀಚಿನ ಅವರ ಕಾಂಡೋಮ್ ಜಾಹೀರಾತಿನ ಬಗ್ಗೆ "ಯುವಜನತೆ ಸುರಕ್ಷಿತ ಅನುಭವ ಹೊಂದುವುದು ನನ್ನ ಉದ್ದೇಶ" ಎಂದಿದ್ದಾರೆ. ಒಟ್ಟಿನಲ್ಲಿ ಸನ್ನಿ ಲಿಯೋನ್ ರ 'ದಿ ಬೆಸ್ಟ್' ಚಿತ್ರವಾಗಿರುವ ಜಿಸ್ಮ್ 2 ತೆರೆಗೆ ಬರುವುದನ್ನೇ ಅವರ ಅಭಿಮಾನಿಗಳು ಕಾಯುವಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Sunny Leone is all set to burn the screen with her debut film Jism 2. The actor says that her audience will see a very different Sunny in Jism 2.
 
Please Wait while comments are loading...