»   » ಭಜರಂಗದಳಕ್ಕೆ ನೀಲಿಚಿತ್ರ ತಾರೆಯ ನೀತಿಪಾಠ

ಭಜರಂಗದಳಕ್ಕೆ ನೀಲಿಚಿತ್ರ ತಾರೆಯ ನೀತಿಪಾಠ

Posted By:
Subscribe to Filmibeat Kannada

ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಹಿಂದೂ ಸಂಘಟನೆ ಭಜರಂಗದಳಕ್ಕೆ ನೀತಿಪಾಠ ಭೋಧಿಸಿದ್ದಾರೆ. ತನ್ನ ಮೇಲೆ ಸದಾ ದ್ವೇಷ ಸಾಧಿಸುವ ಬದಲು ಭಜರಂಗದಳ ಸಮಾಜಕ್ಕೆ ಒಳ್ಳೆದಾಗುವ ಕೆಲಸಕ್ಕೆ ಮುಂದಾಗಲಿ ಎಂದು ಹೇಳಿದ್ದಾರೆ.

ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸಗಳು ಮಾಡಲು ಬೇಕ್ಕಾದಷ್ಟಿವೆ, ಅದು ಬಿಟ್ಟು ಭಜರಂಗದಳ ನನ್ನ ಮೇಲೆ ಕೆಂಡಕಾರುವುದನ್ನೇ ಕಾಯಕ ಮಾಡಿಕೊಂಡಿದೆ. ಅದರಿಂದ ಅವರಿಗೆ ಏನು ಲಾಭವಾಗುತ್ತಿದೆಯೋ ನನಗೆ ತಿಳಿಯುತ್ತಿಲ್ಲ.

ಕಾರಣವಿಲ್ಲದೇ ನನ್ನ ಮೇಲೆ ತಿರುಗಿ ಬೀಳುವ ಬದಲು ಗಿಡ ನೆಡುವ, ಅನಾಥಾಶ್ರಮ ನಿರ್ಮಾಣದಂತಹ ಉತ್ತಮ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಸನ್ನಿ ಲಿಯೋನ್ ಭಜರಂಗದಳಕ್ಕೆ ಸಲಹೆ ನೀಡಿದ್ದಾರೆ.

Sunny Leone message to Hindu outfit Bajarang Dal

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನನ್ನ ಕಾರ್ಯಕ್ರಮಕ್ಕೆ ಭಜರಂಗದಳದ ಕಾರ್ಯಕರ್ತರು ತಡೆಯೊಡ್ಡಿದರು. ನಾನು ಅವರನ್ನು ಕೇಳಬಯಸುತ್ತೇನೆ, ಇದರಿಂದ ನಿಮಗಾದ ಲಾಭವೇನು ಎಂದು ಸನ್ನಿ ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ತೆರೆಕಂಡ 'ರಾಗಿಣಿ ಎಂಎಂಎಸ್ 2' ಚಿತ್ರದ ಪ್ರಮೋಷನ್ ಅನ್ನು ಇಂದೋರ್ ನಗರದ ಮಾಲ್ ನಲ್ಲಿ ಚಿತ್ರದ ಹಂಚಿಕೆದಾರರು ಆಯೋಜಿಸಿದ್ದರು. ಇದಕ್ಕೆ ಚಿತ್ರದ ನಾಯಕನಟಿ ಸನ್ನಿ ಲಿಯೋನ್ ಬರುವ ಕಾರ್ಯಕ್ರಮವಿತ್ತು. (ರಾಗಿಣಿ ಎಂಎಂಎಸ್ ಚಿತ್ರ ವಿಮರ್ಶೆ)

ಆದರೆ ಭಜರಂಗದಳದ ಕಾರ್ಯಕರ್ತರು ಮಾಲ್ ಮತ್ತು ನಗರದ ಪ್ರಮುಖ ಹೊಟೇಲಿಗೆ ತೆರಳಿ ಸನ್ನಿ ಲಿಯೋನ್ ಭಾಗವಹಿಸುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಮಾಲೀಕರಿಗೆ ಎಚ್ಚರಿಸಿದ್ದರು ಎನ್ನಲಾಗುತ್ತಿದೆ.

ಇಂದೋರ್ ನಗರದಿಂದ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ರಾಜ್ಯದ ರಾಜಧಾನಿ ಭೋಪಾಲ್ ನಲ್ಲಿ ಮಾತನಾಡುತ್ತಿದ್ದ ಸನ್ನಿ ಲಿಯೋನ್, ಮಕ್ಕಳು ಮತ್ತು ಪೋಷಕರು ನನ್ನ ಜೊತೆ ಫೋಟೋ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ.

ನಾನು ಕೆಟ್ಟವಳಾಗಿದ್ದರೆ ನನ್ನ ಜೊತೆ ಫೋಟೋ ತೆಗೆಸಿಕೊಳ್ಳುತ್ತಿರಲಿಲ್ಲ. ಇದನ್ನು ಭಜರಂಗದಳದ ಸಂಘಟನೆ ಮೊದಲು ಅರ್ಥಮಾಡಿಕೊಳ್ಳಲಿ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

English summary
Porn star turned actress Sunny Leone message to Hindu outfit Bajarang Dal. She appealed Bajarang Dal to use its energy to constructive work.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada