»   » ಮುದ್ದು ಮುಖದ ಮಾದಕ ನಟಿ ಆತ್ಮಕಥನ ತೆರೆಗೆ?

ಮುದ್ದು ಮುಖದ ಮಾದಕ ನಟಿ ಆತ್ಮಕಥನ ತೆರೆಗೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಆತ್ಮಕಥನಗಳ ಸರಣಿ ಇನ್ನಷ್ಟು ಕಾಲ ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ. ಒಂದೆಡೆ ಕ್ರೀಡಾಪಟುಗಳ ಜೀವನಚರಿತ್ರೆ ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿದ್ದರೆ ಮತ್ತೊಂದೆಡೆ ಗತಕಾಲದ ಸ್ಟಾರ್ ನಟ, ನಟಿಯರ ಆತ್ಮಕಥೆಯನ್ನು ತೆರೆಗೆ ತರಲು ಸಿದ್ಧತೆಗಳು ನಡೆದಿವೆ, ಸಿಲ್ಕ್ ಸ್ಮಿತಾ ಕಥನ ನಂತರ 90 ರ ದಶಕದ ಮುದ್ದು ಮುಖದ ಮಾದಕ ನಟಿ ಮಮತಾ ಕುಲಕರ್ಣಿ ಕಥೆ ತೆರೆಗೆ ಬರುವ ಸಾಧ್ಯತೆ ಕಂಡು ಬಂದಿದೆ.

90ರ ದಶಕದಲ್ಲಿ ಬಾಲಿವುಡ್ ನ ಟಾಪ್ ಹೀರೋಗಳ ಜೊತೆ ನಟಿಸಿದ್ದ ಮಾದಕ ನಟಿ ಮಮತಾ ಕುಲಕರ್ಣಿ ಈಗ ಕೀನ್ಯಾದಲ್ಲಿ ಮಾದಕ ದ್ರವ್ಯ ಕಳ್ಳ ಸಾಗಾಟ ಕೇಸಿನಲ್ಲಿ ಜೈಲು ಪಾಲಾಗಿರುವ ಸುದ್ದಿ ಎಲ್ಲೆಡೆ ಬಂದಿದೆ. [ಮಮತಾ ಬಂಧನದ ಹಿಂದೆ 'ಡಿ' ಕರಿನೆರಳು]

ಮಮತಾ ಬಂಧನದ ಹಿಂದೆ ದಾವೂದ್ ಇಬ್ರಾಹಿಂ ಗ್ಯಾಂಗ್ ಕೈವಾಡವಿದೆ ಎಂಬ ಸುದ್ದಿಯೂ ಹಬ್ಬಿದೆ. ಮಮತಾ ಬದುಕು ಹತ್ತು ಹಲವು ರೋಚಕ ಅಂಶಗಳನ್ನು ಒಳಗೊಂಡಿದ್ದು ಇದನ್ನು ಪಾಸಿಟಿವ್ ಆಗಿ ತೋರಿಸುವ ಹೊಣೆ ನಮ್ಮದು ಎಂದು ಖ್ಯಾತ ಫೋಟೋಗ್ರಾಫರ್ ಜಯೇಶ್ ಸೇಠ್ ಹೇಳಿದ್ದಾರೆ. [ರಾಗಿಣಿ ಎಂಎಂಎಸ್ ಸನ್ನಿ 'ಹಾರರ್' ಕಾಮಿಡಿ]

Sunny Leone to play Mamta Kulkarni in a movie?

ಒಂದು ಕಾಲದ ಪೋರ್ನ್ ತಾರೆ ಸನ್ನಿ ಲಿಯೋನ್ ಬಾಲಿವುಡ್ ಗೆ ಬಂದು ಸೊಂಟ ಬಳುಕಿಸುವುದನ್ನು ಕಲಿತ ಮೇಲೆ ಆಕೆಗೆ ಎಲ್ಲಿಲ್ಲದ ಬೇಡಿಕೆ ಹುಟ್ಟುಕೊಂಡಿದೆ. ಮಮತಾ ಪಾತ್ರಕ್ಕೆ ತಕ್ಕಂತೆ ಸನ್ನಿ ಇದ್ದಾಳೆ. ಇಬ್ಬರಿಗೂ ಮುದ್ದು ಮುಖ ಮಾದಕತೆಯೇ ಬಂಡವಾಳ ಎಂದು ಜಯೇಶ್ ಗುಣಗಾನ ಮಾಡಿದ್ದಾಳೆ. ಚಿತ್ರದಲ್ಲಿ ನಟಿಸಲು ಸನ್ನಿ ಒಪ್ಪಿದ್ದಾಳಾ? ಇಲ್ಲವಾ? ಗೊತ್ತಿಲ್ಲ. [ಸೇಸಮ್ಮ ಸನ್ನಿ ಜಿಂಗ್ ಚಾಕ್ ಸ್ಟೆಪ್]

ಉತ್ತುಂಗಕ್ಕೇರಿದ ನಟಿಯೊಬ್ಬಳು ಕಡೆಗೆ ಹೇಗೆ ಅವಸಾನದ ಹಾದಿ ಹಿಡಿಯುತ್ತಾಳೆ. ಭೂಗತ ಜಗತ್ತು ಹೇಗೆ ನಿರ್ಮಾಪಕರನ್ನು ಆಳುತ್ತದೆ ನಟಿಯರನ್ನು ಆಯುಧವಾಗಿ ಹೇಗೆ ಬಳಸಿಕೊಳ್ಳುತ್ತದೆ ಎಂಬೆಲ್ಲಾ ಅಂಶಗಳನ್ನು ಒಟ್ಟುಗೂಡಿಸಿ ಸ್ಕ್ರಿಪ್ಟ್ ತಯಾರಿಸಿದ್ದಾರಂತೆ ಜಯೇಶ್.

ಮುಂದಿನ ವರ್ಷ ಚಿತ್ರ ಸೆಟ್ಟೇರಲಿದ್ದು, ಸನ್ನಿ ಲಿಯೋನ್ ನಟಿಸುತ್ತಾಳಾ ಎಂಬುದೇ ಅನುಮಾನ. ಸದ್ಯಕ್ಕೆ ಚಿತ್ರಗಳಲ್ಲಿ ನಟನೆಗಿಂತ ಐಟಂ ಡ್ಯಾನ್ಸ್ ಮಾಡುವುದೇ ಸುಲಭದ ಕೆಲಸ ಎಂಬ ಅರಿವು ತನ್ನ ನಟನಾ ಸಾಮರ್ಥ್ಯದ ಬಗ್ಗೆ ಸನ್ನಿಗಿದೆ. ಹೀಗಾಗಿ ಮಮತಾ ಪಾತ್ರದಲ್ಲಿ ಸನ್ನಿ ನೋಡಲು ಕಷ್ಟಸಾಧ್ಯ.

English summary
Mamta Kulkarni, the diva of the 90s, recently ran into controversy regarding the alleged drug cartel bust in Kenya. The actress is now again in news, as photographer Jayesh Sheth has announced plans of making a film inspired by her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada