For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್

  |

  ನಟಿ ಕಂಗನಾ ರಣಾವತ್ ವಿರುದ್ಧ ಬಾಲಿವುಡ್ ನ ಬಹುತೇಕ ಮಂದಿ ತಿರುಗಿಬಿದ್ದಿದ್ದಾರೆ. ಕಂಗನಾ ಹೇಳಿಕೆಗಳು ಮತ್ತು ಚಿತ್ರರಂಗದ ವಿರುದ್ಧ ಕಂಗನಾ ಆಡುತ್ತಿರುವ ಮಾತುಗಳು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚಿಗೆ ಕಂಗನಾ, ನಟಿ ಊರ್ಮಿಳಾ ಮಾತೋಂಡ್ಕರ್ 'ನೀಲಿ ಚಿತ್ರಗಳ ನಟಿ' ಎಂದು ಹೇಳುವ ಮೂಲಕ ಊರ್ಮಿಳಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಊರ್ಮಿಳಾ ಮತ್ತು ಕಂಗನಾ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ನಡೆಯುತ್ತಿದೆ. ಇವರ ನಡುವೆ ಈಗ ಸನ್ನಿ ಲಿಯೋನ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕಂಗನಾ, ಊರ್ಮಿಳಾ ಬಗ್ಗೆ ಮಾತನಾಡುತ್ತ ನಟಿ ಸನ್ನಿ ಲಿಯೋನ್ ಹೆಸರನ್ನು ಉಲ್ಲೇಖಿಸಿದ್ದರು. 'ಪೋರ್ನ್ ಸ್ಟಾರ್ ಆಗಿದ್ದ ನಟಿ ಸನ್ನಿ ಲಿಯೋನ್ ಅವರನ್ನು ಕಲಾವಿದೆ ಎಂದು ಬಾಲಿವುಡ್ ಮತ್ತು ಇಡೀ ಭಾರತ ಒಪ್ಪಿಕೊಂಡಿದೆ' ಎಂದು ಹೇಳಿದ್ದರು.

  'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್

  ಈ ಬಗ್ಗೆ ನಟಿ ಸನ್ನಿಲಿಯೋನ್ ಪ್ರತಿಕ್ರಿಯಿಸಿ, ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಸೆಲ್ಫಿ ಹಂಚಿಕೊಳ್ಳುವ ಜೊತೆಗೆ ಸನ್ನಿ, " ತಮಾಷೆಯ ವಿಚಾರವೆಂದರೆ ನಮ್ಮ ಬಗ್ಗೆ ಯಾರಿಗೆ ಜಾಸ್ತಿ ಗೊತ್ತಿರುವುದಿಲ್ಲವೋ ಅವರೇ ನಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ." ಎಂದು ಹೇಳಿದ್ದಾರೆ. ಸನ್ನಿಯ ಈ ಪೋಸ್ಟ್ ಕಂಗನಾಗೆ ಪರೋಕ್ಷವಾಗಿ ತಿರುಗೇಟು ನೀಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ ಊರ್ಮಿಳಾ ವಿರುದ್ಧ ಗುಡುಗಿದ್ದರು. "ನಾನು ಟಿಕೆಟ್ ಗಾಗಿ ಬಿಜೆಪಿಯ ಪರ ವಹಿಸುತ್ತೇನೆ ಎಂದು ಹೇಳಿದ್ದರು. ಊರ್ಮಿಳಾ ಒಬ್ಬರು ಸಾಫ್ಟ್ ನೀಲಿ ತಾರೆ. ಅವರು ನಟನೆಯಿಂದ ಹೆಸರು ಮಾಡಿದವರಲ್ಲ. ಅವರು ಯಾವುದಕ್ಕೆ ಹೆಸರುವಾಸಿಯಾಗಿದ್ದಾರೆ? ಸಾಫ್ಟ್ ನೀಲಿ ತಾರೆ ಅವರು." ಎಂದು ಹೇಳಿದ್ದರು. ಜೊತೆಗೆ ಸನ್ನಿ ಹೆಸರನ್ನು ಉಲ್ಲೇಖಿಸಿದ್ದಾರೆ.

  Sunny Leone Shares Cryptic Post After Kangana Ranaut Drags Her Into Spat With Urmila Matondkar
  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಸನ್ನಿ ಪ್ರಸ್ತುತ ತನ್ನ ಪತಿ ಮತ್ತು ಮೂವರು ಮಕ್ಕಳೊಂದಿಗೆ ಯು ಎಸ್ ನಲ್ಲಿ ನೆಲೆಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಬಿರುಗಾಳಿಯೇ ಎದ್ದಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸನ್ನಿ ಅಮೆರಿಕದಲ್ಲಿ ಆರಾಮಾಗಿ ಇದ್ದಾರೆ. ಇತ್ತೀಚಿಗೆ ಸನ್ನಿ ದುಬಾರಿ ಕಾರನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಕಂಗನಾಗೆ ಪರೋಕ್ಷವಾಗಿ ತಿರುಗೇಟು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

  English summary
  Sunny leone indirect dig at kangana ranaut for unnecessary dragging her into Urmila Matondkar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X