»   » ಒಳ ಉಡುಪುಗಳ ಹರಾಜಿಗೆ ಸನ್ನಿ ಲಿಯೋನ್ ಸಿಡಿಮಿಡಿ

ಒಳ ಉಡುಪುಗಳ ಹರಾಜಿಗೆ ಸನ್ನಿ ಲಿಯೋನ್ ಸಿಡಿಮಿಡಿ

Posted By:
Subscribe to Filmibeat Kannada
ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋನ್ ಪಿತ್ತ ಕೆರಳಿದೆ. ಅಕೆಯ ಪಿತ್ತ ನೆತ್ತಿಗೇರಲು ಕಾರಣವಾಗಿರುವುದು ಒಳ ಉಡುಪುಗಳ ಹರಾಜು ವ್ಯವಹಾರ. ಪೂಜಾ ಭಟ್ ನಿರ್ದೇಶಿಸುತ್ತಿರುವ ಜಿಸ್ಮ್ 2 ಚಿತ್ರದಲ್ಲಿ ಸನ್ನಿ ಲಿಯೋನ್ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಳಸಿರುವ ಒಳ ಉಡುಪುಗಳನ್ನು ಹರಾಜು ಹಾಕುವುದಾಗಿ ಪೂಜಾ ತಿಳಿಸಿದ್ದರು.

ಆದರೆ ಈ ವಿಷಯವನ್ನು ತಮ್ಮ ಗಮನಕ್ಕೆ ತರದೆ ಹರಾಜು ಹಾಕುತ್ತಿದ್ದಾರೆ ಎಂದು ಸನ್ನಿ ಬೇಸರಿಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಬಳಿ ಏನೂ ಚರ್ಚಿಸದೆ ಏಕಾಏಕಿ ಈ ನಿರ್ಧಾರಕ್ಕೆ ಬಂದಿರುವುದು ಸನ್ನಿಯ ಸಿಡಿಮಿಡಿಗೆ ಕಾರಣವಾಗಿದೆ.

ಒಳ ಉಡುಪುಗಳನ್ನು ಹರಾಜಿಗೆ ಹಾಕುವುದರಲ್ಲಿ ಆಕೆಯದೇನು ಅಭ್ಯಂತರವಿಲ್ಲವಂತೆ. ಆದರೆ ಆಕೆಗೆ ಒಂದು ಮಾತು ತಿಳಿಸಿದ್ದಿದ್ದರೆ ಇದಕ್ಕಾಗಿ ತಾನು ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬಹುದಿತ್ತು ಎಂಬುದು ಸನ್ನಿ ಸಂದೇಶ.

ಈ ಬಗ್ಗೆ ಟ್ವೀಟಿಸಿರುವ ಸನ್ನಿ ಲಿಯೋನ್, "ನನ್ನ ಬಳಿ ಯಾವುದೇ ಒಳ ಉಡುಪುಗಳಿಲ್ಲ. ಜಿಸ್ಮ್ 2 ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಉಡುಪುಗಳನ್ನು ನಾನು ಮಾರಾಟ ಮಾಡುತ್ತಿಲ್ಲ" ಎಂದಿದ್ದಾರೆ.

ಸನ್ನಿ ಲಿಯೋನ್ ಒಳ ಉಡುಪುಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕಲಾಗುತ್ತದೆ ಎಂದು ಪೂಜಾ ಪ್ರಕಟಿಸಿದ್ದರು. ಇದರಿಂದ ಬಂದಂತಹ ಹಣವನ್ನು ಧರ್ಮಾರ್ಥ ಸಂಸ್ಥೆಗೆ ನೀಡಲಾಗುತ್ತದಂತೆ. ಈ ಬಗ್ಗೆ ವಿವರ ನೀಡಿದ್ದ 'ಜಿಸ್ಮ್ 2' ಚಿತ್ರದ ನಿರ್ಮಾಪಕಿ ಪೂಜಾ ಭಟ್, "ಈಗಾಗಲೆ ಸನ್ನಿ, ರಣದೀಪ್ ಹಾಗೂ ಅರುಣೋದಯ್ ಅವರ ಒಳ ಉಡುಪುಗಳನ್ನು ಹರಾಜಿಗೆ ಹಾಕಲಾಗಿದೆ" ಎಂದಿದ್ದರು.

ಇದೆಲ್ಲಾ ಒಳ್ಳೆಯ ಕೆಲಸಕ್ಕಾಗಿ. ನೊಂದವರ ಕಣ್ಣೀರೊರೆಸುವ ಸಲುವಾಗಿ. ಒಳ ಉಡುಪುಗಳನ್ನೇ ಯಾಕೆ ಹರಾಜಿಗೆ ಇಡಬೇಕು ಎಂಬ ಪ್ರಶ್ನೆಗೆ ಪೂಜಾ ಭಟ್ ಉತ್ತರ ಹೀಗಿದೆ, "ಹಾಲಿವುಡ್ ತಾರೆಗಳ ಮಾದರಿಯಲ್ಲಿ ಇದೊಂದು ಹೊಸ ಪ್ರಯತ್ನ. ನನಗೂ ಚಾನ್ಸ್ ಸಿಕ್ಕಿದರೆ ಹಾಲಿವುಡ್ ನಟ ಜಾವೆರ್ ಬರ್ಡಮ್ಸ್‌ನ ಒಳ ಉಡುಪುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳುತ್ತೇನೆ" ಎಂದಿದ್ದಾರೆ.

ತಮ್ಮ ಮಹತ್ವಾಕಾಂಕ್ಷಿ ಜಿಸ್ಮ್ 2 ಚಿತ್ರ ಬಿಡುಗಡೆಯಾವುದಕ್ಕೂ ಮುನ್ನ ಆ ಚಿತ್ರದಲ್ಲಿ ಬಳಸಿಕೊಂಡಿರುವ ಸಮಸ್ತ ಉಡುಗೆ ತೊಡುಗೆಗಳನ್ನು ಹರಾಜಾಕುವುದಾಗಿ ಪೂಜಾ ತಿಳಿಸಿದ್ದರಿ. ಪ್ರತಿ ಐಟಂ ಮೇಲೂ ತಾರೆಗಳ ಹಸ್ತಾಕ್ಷರ ಇರುತ್ತದೆ. ಹಾಗೆಯೇ ಇದು ಒರಿಜಿನಲ್ ಎಂಬುದಕ್ಕೆ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ ಎಂದಿದ್ದರು ಪೂಜಾ!

ಕನ್ನಡಕ್ಕೆ ಸನ್ನಿ ಲಿಯೋನ್: ಸನ್ನಿ ಲಿಯೋನ್ ಪ್ರೇಮ್ 'ಅಡ್ಡ' ಚಿತ್ರದಲ್ಲಿ ಐಟಂ ಹಾಡಿನಲ್ಲಿ ಮೈ ಕುಣಿಸಲು ಒಪ್ಪಿದ್ದಾರೆ. ಪ್ರೇಮ್ ಹಾಗೂ ಮಹೇಶ್ ಬಾಬು ಸಂಗಮದ 'ಪ್ರೇಮ್ ಅಡ್ಡ' ಚಿತ್ರ ತಮಿಳಿನ 'ಸುಬ್ರಮಣ್ಯಪುರಂ'ನ ರೀಮೇಕ್. ಇಲ್ಲಿಯ ನೆಟಿವಿಟಿಗೆ ತಕ್ಕಂತೆ ಕೆಲವೊಂದು ದೃಶ್ಯಗಳನ್ನು ಬದಲಾಯಿಸಿ 'ಅಡ್ಡ' ಹೆಸರಿನಿಂದ ಬರುತ್ತಿದೆ. (ಏಜೆನ್ಸೀಸ್)

English summary
It seems that Pooja Bhatt did not tell Sunny Leone about her plans to auction the costumes of the lead actors of Jism 2, which includes Sunny Leone's lingerie. When Sunny heard this news she became very upset.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada