Just In
Don't Miss!
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Finance
3 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಬೆಂಗಳೂರಿನಲ್ಲಿ 94 ರೂ. ಗಡಿ ದಾಟಿದೆ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Automobiles
ಮಾರ್ಚ್ 3ರಿಂದ ಕಿಗರ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ವಿತರಣೆಗೆ ಸಜ್ಜಾದ ರೆನಾಲ್ಟ್
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆದಿಪುರುಷ್'ನಲ್ಲಿ ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಯಾರು? ಇಲ್ಲಿದೆ ಮಾಹಿತಿ
ನಟ ಪ್ರಭಾಸ್ ಈಗಾಗಲೇ 'ಆದಿಪುರುಷ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಆದಿಪುರುಷ್' ಸಿನಿಮಾ ಭಾರತದ ಅತಿ ಹೆಚ್ಚು ಬಜೆಟ್ ನ ಸಿನಿಮಾ ಎಂಬ ಖ್ಯಾತಿಯನ್ನು ಗಳಿಸಲಿದೆ.
'ಆದಿಪುರುಷ್' ಸಿನಿಮಾ ಮೂಲಕ ರಾಮಾಯಣದ ಕತೆಯನ್ನು ಮತ್ತೊಮ್ಮೆ ಭಾರಿ ಅದ್ಧೂರಿ ಹಿನ್ನೆಲೆ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಓಂ ರಾವತ್. ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಪರದೆ ದಾಟಿ ಬಂತು 'ಸ್ಟಾರ್ ನಟರ ರೌಡಿಸಂ'
ಪ್ರಭಾಸ್ ರಾಮನಾಗಿ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಿನಿಮಾ ತಂಡ ಈಗಾಗಲೇ ಮಾಹಿತಿ ನೀಡಿದೆ. ಆದರೆ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸೀತೆಯ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಈಗ ಆ ಮಾಹಿತಿ ಹೊರಬಿದ್ದಿದೆ.

ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸನ್ನಿ ಸಿಂಗ್
ಲಕ್ಷ್ಮಣನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಸಿಂಗ್ ನಟಿಸುವುದು ಖಾತ್ರಿಯಾಗಿದೆ. ಸನ್ನಿ ಸಿಂಗ್ ಇಂದಿನಿಂದ ಆದಿಪುರುಷ್ ತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಭಾಸ್ ಜೊತೆ ಮೊದಲ ಬಾರಿಗೆ ಸನ್ನಿ ಸಿಂಗ್ ತೆರೆ ಹಂಚಿಕೊಳ್ಳಲಿದ್ದಾರೆ.

ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸನ್ನಿ ಸಿಂಗ್
'ಆದಿಪುರುಷ್' ಓಂ ರಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಸಿಂಗ್ ಅನ್ನು ಆದಿಪುರುಷ್ ತಂಡಕ್ಕೆ ಸ್ವಾಗತಿಸಿ ಪೋಸ್ಟ್ ಹಾಕಿದ್ದಾರೆ. ಸನ್ನಿ ಸಿಂಗ್ ಈ ಹಿಂದೆ 'ಸೋನು ಕಿ ಟಿಟ್ಟು ಕಿ ಸ್ವೀಟಿ', 'ಪ್ಯಾರ್ ಕೆ ಪಂಚ್ ನಾಮಾ' ಸಿನಿಮಾಗಳಲ್ಲಿ ನಟಿಸಿದ್ದರು.
ಬಾಹುಬಲಿ, ಕುರುಕ್ಷೇತ್ರ ನಂತರ 'ಕರ್ಣ'ನ ಸಿನಿಮಾ: ಐದು ಭಾಷೆಯಲ್ಲಿ ರಿಲೀಸ್

ಸೀತೆ ಪಾತ್ರದಲ್ಲಿ ಯಾರು?
'ಸೀತೆ' ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲವಾದರೂ ಈಗಾಗಲೇ ಕೆಲವು ಹೆಸರುಗಳು ಹರಿದಾಡುತ್ತಿವೆ. ಕ್ರಿತಿ ಸೆನನ್ ಹಾಗೂ ಕಿಯಾರಾ ಅಡ್ವಾಣಿ ಹೆಸರು ಮುಂಚೂಣಿಯಲ್ಲಿದೆ. ಜೊತೆಗೆ ಶ್ರದ್ಧಾ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಹೆಸರೂ ಸಹ ಕೇಳಿಬರುತ್ತಿದೆ.

ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾ
'ಆದಿಪುರುಷ್' ಸಿನಿಮಾವು ಭಾರತದ ಅತಿ ಹೆಚ್ಚು ಬಜೆಟ್ ನ ಸಿನಿಮಾ ಎಂಬ ದಾಖಲೆ ನಿರ್ಮಿಸಲಿದ್ದು, ಸುಮಾರು 600 ಕೋಟಿಗೂ ಹೆಚ್ಚು ಹಣ ಸಿನಿಮಾಕ್ಕಾಗಿ ವ್ಯಯವಾಗಲಿದೆ. ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಭೂಷಣ್ ಕುಮಾರ್. ಸಿನಿಮಾದಲ್ಲಿ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ.