For Quick Alerts
  ALLOW NOTIFICATIONS  
  For Daily Alerts

  ರಾಜೇಶ್ ಖನ್ನ ಕೊನೆಯಾಸೆ ಉದ್ಯಮಿ ಶೆಟ್ಟಿ ಪಾಲು

  By * ಜೇಮ್ಸ್ ಮಾರ್ಟಿನ್
  |

  ಮೇರಾ ಫ್ಯಾನ್ಸ್ ಕೋ ಕೋಯಿ ನಹೀ ಚೀನ್ ಸಕ್ತಾ' (ನನ್ನ ಅಭಿಮಾನಿಗಳನ್ನು ಯಾರೂ ಕಿತ್ತುಕೊಳ್ಳಲಿಕ್ಕಾಗಲ್ಲ)...ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ ತಮ್ಮ ಕೊನೆ ಡೈಲಾಗ್ ಹೇಳಿ ನಮ್ಮಗಲಿದ್ದರು. ಅವರ ಮಾತಿನಂತೆ ಅವರ ಅಭಿಮಾನಿಗಳನ್ನು ಯಾರೂ ಕಿತ್ತುಕೊಳ್ಳಲಾಗುವುದಿಲ್ಲ. ಆದರೆ, ಅವರ ಕೊನೆಯಾಸೆಯಾಗಿದ್ದ ಆಶೀರ್ವಾದ್ ಬಂಗಲೆ ಈಗ ಉದ್ಯಮಿಯೊಬ್ಬರ ಪಾಲಾಗಿದೆ.

  ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರ ಕನಸಿನ ಬಂಗಲೆ ಆಶೀರ್ವಾದ್ ಹೆಸರನ್ನು ವರ್ಧನ್ ಆಶೀರ್ವಾದ್ ಎಂದು ಹೆಸರಿಸಲು ತಮ್ಮ ಜೀವಾತಾವಧಿಯಲ್ಲಿ ತುಂಬಾ ಶ್ರಮ ಪಟ್ಟರು. 2012ರಲ್ಲಿ ರಾಜೇಶ್ ಖನ್ನಾ ಅವರ ನಿಧನ ನಂತರವೂ ಈ ಬಂಗಲೆ ಉಳಿಸಿಕೊಳ್ಳುವ ಯತ್ನ ಸಫಲವಾಗಲಿಲ್ಲ.

  ಬೃಹನ್ ಮುಂಬೈ ಪಾಲಿಕೆಯು ಇದನ್ನು ತನ್ನ ವಶಕ್ಕೆ ತೆಗೆದುಕೊಂಡು ನವೀಕರಣ ಮಾಡುವ ಯೋಜನೆ ಹೊಂದಿತ್ತು. ಆದರೆ ಆಸ್ತಿ ವಿವಾದ ಹಂಚಿಕೆಯಲ್ಲಿ ಕಾನುನು ಸಮರ ಉಂಟಾಗಿದ್ದರಿಂದ ಮ್ಯೂಸಿಯಂ ಕನಸು ಕೊನೆಗೂ ಈಡೇರಲಿಲ್ಲ. ಇದೀಗ ರಾಜೇಶ್ ಖನ್ನಾ ಬಾಳಿ, ಬದುಕಿ ಕೊನೆಯುಸಿರೆಳೆದ ಮನೆ ಅನ್ಯರ ಪಾಲಾಗಿದೆ.

  ಮುಂಬೈನ ಕಾರ್ಟರ್ ರಸ್ತೆಯಲ್ಲಿರುವ ರಾಜೇಶ್ ಖನ್ನಾ ಅವರಿಗೆ ಸೇರಿದ ಬಂಗಲೆಯನ್ನು ಸ್ಥಳೀಯ ಕೈಗಾರಿಕೋದ್ಯಮಿ ಶಶಿಧರ್ ಶೆಟ್ಟಿ 90 ಕೋಟಿಗೆ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಶಶಿಕಿರಣ್ ಶೆಟ್ಟಿ ಎಂಬ ಉದ್ಯಮಿ ಈ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ರಾಜೇಶ್ ಖನ್ನಾ ಅವರ ಇಬ್ಬರು ಪುತ್ರಿಯರಾದ ಟ್ವಿಂಕಲ್ ಖನ್ನಾ ಹಾಗೂ ರಿಂಕಿ ಖನ್ನಾ ಅವರು ಆಸ್ತಿಯ ವಾರಸುದಾರರೆಂದು ಹೇಳಲಾಗಿದೆ.[ರಾಜೇಶ್ ಖನ್ನಾ ಅಂತಿಮ ಆಸೆ]

  ಆಶೀರ್ವಾದ್ ಎಂಬ ಹೆಸರಿನ ಈ ಮನೆಯನ್ನು ಸುಮಾರು 603 ಚ.ಮೀಯಲ್ಲಿ ಕಟ್ಟಲಾಗಿದ್ದು, ನಿರ್ಮಿಸಲಾಗಿತ್ತು. ಬಾಲಿವುಡ್‌ನ ಅನೇಕ ದಿಗ್ಗಜರು ರಾಜೇಶ್ ಖನ್ನಾ ಜೊತೆ ಇಲ್ಲಿ ಸಮಯ ಕಳೆದಿದ್ದರು. ಸಮುದ್ರಕ್ಕೆ ಹೊಂದಿಕೊಂಡಿರುವ ಈ ಮನೆ ಒಂದು ಪ್ರವಾಸಿ ತಾಣವಾಗುವ ಲಕ್ಷಣಗಳು ಕಂಡು ಬಂದಿತ್ತು. ಆದರೆ ಪುತ್ರಿಯರು ನವೀಕರಣ ಮಾಡುವುದರ ಬಗ್ಗೆ ಉದಾಸೀನ ತೋರಿದ್ದರು ಎನ್ನಲಾಗಿದೆ.

  ತಮ್ಮ ಮನೆಯನ್ನು ಮ್ಯೂಸಿಯಂ ಮಾಡಲು ಬಯಸಿದ್ದ ರಾಜೇಶ್ ಖನ್ನಾ ಅವರ ಕೊನೆ ಆಸೆ ಈಡೇರಲಿಲ್ಲ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಸಿನಿಮಾ ನಟನೊಬ್ಬ ಬದುಕಿದ್ದ ಮನೆಯನ್ನು ಮ್ಯೂಸಿಯಂ ಮಾಡಬೇಕೆಂಬುದು ಅವರ ಬಹುದಿನಗಳ ಕನಸಾಗಿತ್ತು. ಕ್ಯಾನ್ಸರ್ ರೋಗಕ್ಕೆ ತುತ್ತಾದ ರಾಜೇಶ್ ಖನ್ನಾ ಅವರ ಕನಸು ಕೊನೆಗೂ ಈಡೇರಲೇ ಇಲ್ಲ. ತಂದೆಯ ನಿಧನದ ನಂತರ ಪುತ್ರಿಯರು ಕೂಡ ಇತ್ತ ಸುಳಿಯಲಿಲ್ಲ.

  English summary
  Hindi Cinema's first superstar Rajesh Khanna's Carter Road bungalow in Mumbai may no longer be a tourist attraction. If reports are to be believed, the property, popularly known as 'Aashirvaad' is being sold to a city businessman. The property is reportedly being sold for Rs 90 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X