For Quick Alerts
  ALLOW NOTIFICATIONS  
  For Daily Alerts

  ವಾಸುಗೆ ಕೈ ಕೊಟ್ಟು, ಮಣಿಗೆ ಒಪ್ಪಿಗೆಯಿತ್ತ ಐಶೂ

  By ಜೇಮ್ಸ್ ಮಾರ್ಟಿನ್
  |

  ಐಶ್ವರ್ಯಾ ರೈ ಬಚ್ಚನ್ ದಕ್ಷಿಣ ಮುಖಿಯಾಗಿರುವುದೇನೋ ನಿಜ. ಆದರೆ, ಅವರ ಬಳಿ ಬಂದಿದ್ದ ಎರಡು ಆಫರ್ ಗಳಲ್ಲಿ ಒಂದನ್ನು ಮಾತ್ರ ಒಪ್ಪಿಕೊಂಡಿದ್ದಾರೆ ಎಂದು ಐಶ್ವರ್ಯಾ ರೈ ಬಚ್ಚನ್ ಅವರ ಆಪ್ತ ಸಹಾಯಕರು ಘೋಷಿಸಿದ್ದಾರೆ. ಹೀಗಾಗಿ ಆಪ್ತಮಿತ್ರ ಖ್ಯಾತಿಯ ಪಿ.ವಾಸು ಅವರ ಮಹತ್ವದ ಕನಸು ನುಚ್ಚುನೂರಾಗಿದೆ. ವಾಸು ಚಿತ್ರವನ್ನು ಐಶ್ವರ್ಯಾ ನಿರಾಕರಿಸಿದ್ದೇಕೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರದಲ್ಲಿ ಆಕೆ ನಟಿಸುವುದಿಲ್ಲ ಎಂಬುದಷ್ಟೆ ಸದ್ಯಕ್ಕೆ ಸಿಕ್ಕಿರುವ ಖಚಿತ ಮಾಹಿತಿ.

  ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಇರುವರ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಐಶ್ವರ್ಯಾ ಅವರು ಈಗ ಮತ್ತೊಮ್ಮೆ ತಮಿಳು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಐಶ್ವರ್ಯಾ ರೈ ಸಿನಿರಸಿಕರನ್ನು ರಂಜಿಸಲು ಭರ್ಜರಿ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಶುಭ ಸಂಗತಿಯನ್ನು ಬಹಿರಂಗಗೊಳಿಸಿದ್ದ ನಿರ್ದೇಶಕ ಪಿ ವಾಸು ಅವರ ಚಿತ್ರವನ್ನೆ ಐಶ್ವರ್ಯಾ ನಿರಾಕರಿಸಿದ್ದಾರೆ.

  ಆಪ್ತಮಿತ್ರ ಸರಣಿ ಖ್ಯಾತಿಯ ಪಿ. ವಾಸು ಅವರ ತೆಲುಗು, ತಮಿಳು ದ್ವಿಭಾಷಾ ಚಿತ್ರಕ್ಕೆ ಐಶ್ವರ್ಯಾ ರೈ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಐಶ್ವರ್ಯಾ ಅವರಿಗೆ ಈಗಾಗಲೇ ನಾನು ಕಥೆ ಓದಿ ಹೇಳಿದ್ದೇನೆ. ಕಥೆ ಕೇಳಿ ಅವರು ಥ್ರಿಲ್ ಆಗಿದ್ದಾರೆ. ನಮ್ಮ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಾಹಸಪ್ರಧಾನ ಪಾತ್ರದಲ್ಲಿ ಐಶ್ವರ್ಯಾ ರೈ ಕಾಣಿಸಿಕೊಳ್ಳಲಿದ್ದಾರೆ ಎಂದು ವಾಸು ಹೇಳಿದ್ದರು. ಚಿತ್ರದ ಫಸ್ಟ್ ಲುಕ್ ಕೂಡಾ ರಿಲೀಸ್ ಆಗಿತ್ತು.. ಈ ನಡುವೆ ಆದ ಬದಲಾವಣೆ ಏನು? ಮಣಿರತ್ನಂ ಚಿತ್ರದ ಕಥೆಯೇನು? ಮುಂದೆ ಓದಿ....

  ದಕ್ಷಿಣಕ್ಕೆ ಬಂದ ಐಶ್ವರ್ಯಾ ರೈ ವಾಸುಗೆ ನೋ ಅಂದಿದ್ದೇಕೆ?

  ದಕ್ಷಿಣಕ್ಕೆ ಬಂದ ಐಶ್ವರ್ಯಾ ರೈ ವಾಸುಗೆ ನೋ ಅಂದಿದ್ದೇಕೆ?

  ತಮಿಳು, ತೆಲುಗು ಭಾಷೆಯಲ್ಲಿ ಗ್ಲೋಬಲ್ ಒನ್ ಸ್ಟುಡಿಯೋಸ್ ನ ಕೆ ರಮೇಶ್ ನಿರ್ಮಿಸುತ್ತಿರುವ ಪಿ.ವಾಸು ನಿರ್ದೇಶನ ಇನ್ನೂ ಹೆಸರಿಡದ ಈ ಚಿತ್ರವನ್ನು ಹಿಂದಿ ಭಾಷೆಗೂ ಡಬ್ ಮಾಡಲಾಗುತ್ತದೆ.

  ಚಿತ್ರದ ಕಥೆಗೆ ಐಶ್ವರ್ಯಾ ಅವರು ಒಪ್ಪಿಗೆ ಸೂಚಿಸಿದ ಮೇಲೆ ನಾವು ಫಸ್ಟ್ ಲುಕ್ ತಯಾರಿಸಿ ಬಿಡುಗಡೆ ಮಾಡಿದ್ದೆವು ಎಂದು ಕಳೆದವಾರ(ಫೆ.16) ವಾಸು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಚಿತ್ರದ ಕಥೆಯ ಮುಖ್ಯ ಪಾತ್ರಕ್ಕೆ ಐಶ್ವರ್ಯಾ ಅವರೇ ಸೂಕ್ತ. ಹೀಗಾಗಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಎರಡು ವರ್ಷಗಳಿಂದ ಕಥೆ ರಚಿಸಿದ್ದೇನೆ ಎಂದು ವಾಸು ಹೇಳಿದ್ದರು.

  ಸೂಚನೆ: ಇಲ್ಲಿರುವ ಚಿತ್ರಕ್ಕೂ ಸ್ಲೈಡ್ ನಲ್ಲಿರುವ ಚಿತ್ರಕ್ಕೂ ಸಂಬಂಧವಿಲ್ಲ. ಇದು ಸಾಂದರ್ಭಿಕ ಚಿತ್ರ

  ಪಿ ವಾಸು ಮಹತ್ವಾಕಾಂಕ್ಷಿ ಚಿತ್ರ ಇದಾಗಲಿದೆ

  ಪಿ ವಾಸು ಮಹತ್ವಾಕಾಂಕ್ಷಿ ಚಿತ್ರ ಇದಾಗಲಿದೆ

  ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆ ಕಂಡ ಡಾ. ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಚಿತ್ರವನ್ನು ನಿರ್ದೇಶಿಸಿರುವ ಪಿ. ವಾಸು ಅವರು ಸುಮಾರು 50 ಕ್ಕೂ ಅಧಿಕ ಚಿತ್ರಗಳನ್ನು ತೆರೆ ತಂದಿರುವ ಅನುಭವಿ. ಹಿಂದಿಯಲ್ಲಿ ಹೋಗಿ ಪ್ಯಾರ್ ಕಿ ಜೀತ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ದಕ್ಷಿಣದಲ್ಲಿ ಐಶ್ವರ್ಯಾ ರೈಗಾಗಿ ಹೊಸಕಥೆ ತಯಾರಿಸಲು ಸುಮಾರು 2 ವರ್ಷಗಳ ತೆಗೆದುಕೊಂಡು ಕಲಾರಿ ಫೈಟರ್ ಕಥೆ ಬರೆದಿದ್ದಾರೆ.

  ಚಿತ್ರದ ಚಿತ್ರೀಕರಣಕ್ಕಾಗಿ ಕಾಂಬೋಡಿಯಾ ಸೇರಿದಂತೆ ಉತ್ತರ ಭಾರತದ ಪ್ರಮುಖ ಧಾರ್ಮಿಕ ತಾಣಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.

  ಐಶ್ವರ್ಯಾ ರೈ PR ನೀಡಿರುವ ಪತ್ರಿಕಾ ಹೇಳಿಕೆ

  ಐಶ್ವರ್ಯಾ ರೈ PR ನೀಡಿರುವ ಪತ್ರಿಕಾ ಹೇಳಿಕೆ

  ಪಿ.ವಾಸು ಅವರ ಚಿತ್ರದ ಸ್ಕ್ರಿಪ್ಟ್ ನಮಗೆ ತಲುಪಿದ್ದು ನಿಜ ಆದರೆ, ಐಶ್ವರ್ಯಾ ಅವರು ದಕ್ಷಿಣ ಭಾರತದ ಯಾವುದೇ ಚಿತ್ರಕ್ಕೂ ಸಹಿ ಹಾಕಿಲ್ಲ ಎಂದು ಐಶ್ವರ್ಯಾ ಅವರ ಪಿಆರ್ ಹೇಳಿದ್ದಾರೆ. ಅದರ ಇಂಗ್ಲೀಷ್ ಪ್ರತಿ ಇಂತಿದೆ:

  "With due respect to all the professionals concerned, I would like to state that this was one among the several scripts/ideas she has been approached for but there have been no confirmations at all."

  ಫಸ್ಟ್ ಲುಕ್ ನಲ್ಲೇ ಪಿ ವಾಸು ಕನಸು ಭಗ್ನ

  ಫಸ್ಟ್ ಲುಕ್ ನಲ್ಲೇ ಪಿ ವಾಸು ಕನಸು ಭಗ್ನ

  ಪಿ. ವಾಸು ನಿರ್ದೇಶನದ ಹೊಸ ಚಿತ್ರದ ಗ್ರಾಫಿಕ್ಸ್,ಅನಿಮೇಷನ್ ಗಾಗಿ ಫ್ರಾನ್ಸ್ ದೇಶದ ವಿಶೇಷ ತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸಿನ ಅನಿಮ್ಯಾಟ್ರಾನಿಕ್ಸ್ ತಜ್ಞರು ಈ ಚಿತ್ರಕ್ಕೆ ವಿಷ್ಯುವಲ್ ಎಫೆಕ್ಟ್ ನೀಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಕುದುರೆ ಏರಿರುವ ಐಶ್ವರ್ಯಾ ರೈ ಚಿತ್ರ ನೋಡಿ ಆನಂದಿಸಿ.. ಐಶ್ವರ್ಯಾ ಅವರೇನಾದರೂ ಮನಸ್ಸು ಬದಲಾಯಿಸಿದರೆ ಇದೇ ಕುದುರೆ ಮುಂದೆ ಓಡಿ ಚಿತ್ರದ ಪೋಸ್ಟರ್ ಅಚ್ಚಾಗಿ ಟೀಸರ್, ಟ್ರೇಲರ್ ಹಂತ ತಲುಪುತ್ತದೆ.

  ಮತ್ತೆ ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯಾ ರೈ ನಟನೆ?

  ಮತ್ತೆ ಮಣಿರತ್ನಂ ಚಿತ್ರದಲ್ಲಿ ಐಶ್ವರ್ಯಾ ರೈ ನಟನೆ?

  ಇರುವರ್ ಚಿತ್ರದ ನಂತರ ಮತ್ತೊಮ್ಮೆ ಐಶ್ವರ್ಯಾ ರೈ ಬಚ್ಚನ್ ಮಣಿರತ್ನಂ ನಿರ್ದೇಶನ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಖಚಿತ ಎಂದು ತಿಳಿದು ಬಂದಿದೆ. ಬಹು ತಾರಾಗಣದ ಈ ಚಿತ್ರ ತೆಲುಗಿನಲ್ಲೂ ಏಕಕಾಲಕ್ಕೆ ಚಿತ್ರೀಕರಣ ಕಾಣಲಿದೆ.

  ಮುಂದಿನ ಚಿತ್ರದಲ್ಲಿ ನಾಗಾರ್ಜುನ, ಮಹೇಶ್ ಬಾಬು ಹಾಗೂ ಶ್ರುತಿ ಹಾಸನ್ ಜತೆ ಐಶ್ವರ್ಯಾ ರೈ ನಟಿಸುವ ಸಾಧ್ಯತೆ ಹೆಚ್ಚಿದೆ.

  English summary
  In what could be a huge embarrassment for P Vasu and his team, Aishwarya Rai Bachchan has denied the reports, which claimed that she had signed his forthcoming movie. Through her PR, the actress has clarified that she has not signed the project, but has admitted that the filmmaker had offered the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X