For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್, ಏಕ್ತಾ ಕಪೂರ್‌ ನಿರಾಳ!

  |

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಬಾಲಿವುಡ್‌ನ ಹಲವು ದಿಗ್ಗಜ ನಟ, ನಿರ್ಮಾಪಕ, ನಿರ್ದೇಶಕರ ನಿದ್ದೆಗೆಡಿಸಿದೆ.

  ಸುಶಾಂತ್ ಸಿಂಗ್ ಸಾವು ಆದ ಬೆನ್ನಲ್ಲೆ ಸಲ್ಮಾನ್ ಖಾನ್, ಕರಣ್ ಜೋಹರ್, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ ಅವರುಗಳು ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಾಲಿವುಡ್ ದೊಡ್ಡ ವ್ಯಕ್ತಿಗಳಿಂದಲೇ ಸುಶಾಂತ್ ಸಿಂಗ್ ಮಾನಸಿಕ ಹಿಂಸೆ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು.

  ಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್ ಮೇಲೆ ದೂರುಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್ ಮೇಲೆ ದೂರು

  ಪ್ರಕರಣ ದಾಖಲಾಗಿದ್ದ ಎಲ್ಲಾ ಬಾಲಿವುಡ್ ಖ್ಯಾತ ನಾಮರೂ ನಿರಾಳದ ಉಸಿರು ಬಿಡುವಂತಾಗಿದೆ. ಅವರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯವು ತಳ್ಳಿ ಹಾಕಿದೆ.

  ಪ್ರಕರಣ ದಾಖಲಿಸಿದ್ದ ಸುಧೀರ್ ಕುಮಾರ್ ಓಜಾ

  ಪ್ರಕರಣ ದಾಖಲಿಸಿದ್ದ ಸುಧೀರ್ ಕುಮಾರ್ ಓಜಾ

  ಬಿಹಾರ ನ್ಯಾಯಾಲಯದಲ್ಲಿ ವಕೀಲ ಸುಧೀರ್ ಕುಮಾರ್ ಓಜಾ ಎಂಬುವರು ಸಲ್ಮಾನ್ ಖಾನ್, ಏಕ್ತಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

  ಅರ್ಜಿ ತಳ್ಳಿಹಾಕಿದ ನ್ಯಾಯಮೂರ್ತಿ

  ಅರ್ಜಿ ತಳ್ಳಿಹಾಕಿದ ನ್ಯಾಯಮೂರ್ತಿ

  ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮುಖೇಶ್ ಕುಮಾರ್ ಅರ್ಜಿಯನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣವು ನ್ಯಾಯಾಲಯದ ಸುಪರ್ದಿಯ ಒಳಗೆ ಬರುವುದಿಲ್ಲವೆಂದು ಹೇಳಿ ಅರ್ಜಿಯನ್ನು ರದ್ದು ಮಾಡಲಾಗಿದೆ.

  ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್

  ಸಾಕ್ಷಿಯಾಗಿ ಕಂಗನಾ ರಣಾವತ್ ಹೆಸರು ನಮೂದು

  ಸಾಕ್ಷಿಯಾಗಿ ಕಂಗನಾ ರಣಾವತ್ ಹೆಸರು ನಮೂದು

  ಈ ಅರ್ಜಿಯ ವಿಶೇಷವೆಂದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ಸಾಕ್ಷ್ಯವಾಗಿ ಕಂಗನಾ ರಣಾವತ್ ಹೆಸರನ್ನು ವಕೀಲ ಸುಧೀರ್ ಕುಮಾರ್ ಓಜಾ ನಮೂದಿಸಿದ್ದರು. ಸುಶಾಂತ್ ಸಾವಿನ ಬಳಿಕ ಬಾಲಿವುಡ್‌ ಖ್ಯಾತನಾಮರ ವಿರುದ್ಧ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು.

  ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

  ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಸುಶಾಂತ್ ಸಿಂಗ್ ನ ಗೆಳೆಯರು, ಮನೆ ಗೆಲಸದ ಸಿಬ್ಬಂದಿ, ಗೆಳತಿಯರನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ನಿನ್ನೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು.

  ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿ

  English summary
  A Case filed in Bihar against Salman, Karan Johar, Bansali, Ekta Kapoor in relation with Sushant Singh Rajput death. Case has been ruled out by court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X