For Quick Alerts
  ALLOW NOTIFICATIONS  
  For Daily Alerts

  ಪ್ರೇಯಸಿ ರಿಯಾ ಚಕ್ರವರ್ತಿಗಾಗಿ ಸುಶಾಂತ್ ಖರ್ಚು ಮಾಡಿದ ಹಣ ಎಷ್ಟು? ಬ್ಯಾಂಕ್ ಖಾತೆಯ ವಿವರ ಇಲ್ಲಿದೆ

  |

  ಕಳೆದ ಕೆಲವು ದಿನಗಳಿಂದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ತುಂಬಾ ಸದ್ದು ಮಾಡುತ್ತಿದೆ. ಸುಶಾಂತ್ ನಿಧನ ಹೊಂದಿ ಎರಡು ತಿಂಗಳಾಗುತ್ತಾ ಬಂತು. ಆದರೆ ಇನ್ನೂ ವಿಚಾರಣೆ ಮುಗಿದಿಲ್ಲ. ಸುಶಾಂತ್ ಪ್ರಕರಣವನ್ನು ಜಾಲಾಡುತ್ತಿರುವ ಪೊಲೀಸರಿಗೆ ಸಾಕಷ್ಟು ಮಾಹಿತಿಗಳು ಸಿಗುತ್ತಿದೆ. ಸುಶಾಂತ್ ಕುಟುಂಬದವರು ರಿಯಾ ಚಕ್ರವರ್ತಿ ವಿರುದ್ಧ ತಿರುಗಿ ಬಿದ್ದಿದ್ದು, ಸುಶಾಂತ್ ಆತ್ಮಹತ್ಯೆ ಹಿಂದೆ ರಿಯಾ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ.

  ಅಲ್ಲದೆ ರಿಯಾ ವಿರುದ್ಧ ಸುಶಾಂತ್ ಹಣ ಬಳಸಿಕೊಂಡ ಆರೋಪವಿದೆ. ಸುಶಾಂತ್ ಹಣಕಾಸಿನ ವಹಿವಾಟು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸುಶಾಂತ್ ಸಿಂಗ್ ಖಾತೆಯಿಂದ ಎಷ್ಟು ಹಣ ಖರ್ಚಾಗಿದೆ, ರಿಯಾ ಚಕ್ರವರ್ತಿ ಎಷ್ಟು ಹಣ ಉಪಯೋಗಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಲೀಕ್ ಆಗಿದೆ.

  ವಿಡಿಯೋ: ಕಣ್ಣೀರು ಹಾಕಿದ ಸುಶಾಂತ್ ಸಿಂಗ್ ಪ್ರೇಯಸಿ ರಿಯಾವಿಡಿಯೋ: ಕಣ್ಣೀರು ಹಾಕಿದ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ

  ಸುಶಾಂತ್ ಸಿಂಗ್ ಹಣವನ್ನು ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಗೆ ಭಾರಿ ಮೊತ್ತದ ಹಣ ವರ್ಗಾವಣೆಯಾಗಿದೆ ಎನ್ನುವುದು ಬಹಿರಂಗವಾಗಿದೆ. ಸುಶಾಂತ್ ಖಾತೆಯಿಂದ ರಿಯಾ ಮತ್ತು ಸಹೋದರ ಶೋಯಿಕ್ ಗೆ ವಿಮಾನ ಟಿಕೆಟ್, ಹೋಟೆಲ್ ಬಿಲ್ ನಲ್ಲಿ ಉಳಿದುಕೊಂಡಿರುವ ಬಿಲ್, ಶಾಪಿಂಗ್ ಸೇರಿದ್ದಂತೆ ಸಾಕಷ್ಟು ಹಣ ಸುಶಾಂತ್ ಖಾತೆಯಿಂದ ಲಕ್ಷಾಂತರ ಹಣ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.

  2019 ನವೆಂಬರ್ ನಲ್ಲಿ ಸುಶಾಂತ್ ಬ್ಯಾಂಕ್ ಖಾತೆಯಲ್ಲಿ 4 ಕೋಟಿ 62 ಲಕ್ಷ ಹಣ ಇತ್ತು. ಆದರೆ 2020 ಫೆಬ್ರವರಿಯಲ್ಲಿ 1 ಕೋಟಿ ರೂಗೆ ಕುಸಿದಿದೆ. ರಿಯಾ ಅವರ ಹೇರ್ ಸ್ಟೈಲ್, ಮೇಕಪ್, ಶಾಪಿಂಗ್ ಪಾರ್ಲರ್ ಖರ್ಚು ಸೇರಿದ್ದಂತೆ ಲಕ್ಷಕ್ಕಿಂತ ಹೆಚ್ಚು ಹಣ ಸುಶಾಂತ್ ಖಾತೆಯಿಂದ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ರಿಯಾ ಸಹೋದರ ಶೋಯಿಕ್ ವಿಮಾನ ಟಿಕೆಟ್ ಗೆ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಸುಶಾಂತ್ ಅಕೌಂಟ್ ನಿಂದ ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  ಸುಶಾಂತ್ ಸಾಯುವ ಮುನ್ನ ರಿಯಾ 15 ಕೋಟಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ.

  English summary
  Sushant Singh bank details reveals massive money spend on Rhea Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X