For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಡ್ರಗ್ಸ್ ಪ್ರಕರಣ: ಮತ್ತೆ ಮೂವರ ಬಂಧನ

  |

  ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯು ಮತ್ತೆ ಮೂವರನ್ನು ಬಂಧಿಸಿದೆ.

  ಡ್ರಗ್ಸ್ ಪ್ರಕರಣದ ಜೊತೆಗೆ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಈ ಮೂವರ ಬಂಧನವಾಗಿದೆ ಎನ್ನಲಾಗುತ್ತಿದೆ.

  ಬ್ರಿಟಿಷ್ ನಾಗರೀಕ ಮತ್ತು ಉದ್ಯಮಿ ಆಗಿರುವ ಕರಣ್ ಸಂಜ್ನಾನಿ, ಸೆಲೆಬ್ರಿಟಿ ಮ್ಯಾನೇಜರ್ ರಹೀಲಾ ಫರ್ನೀಚರ್‌ವಾಲಾ ಮತ್ತು ಜಗದೀಪ್ ಸಿಂಗ್ ಆನಂದ್ ಎಂಬುವರನ್ನು ಎನ್‌ಸಿಬಿ ಬಂಧಿಸಿದೆ.

  ಕರಣ್ ಸಂಜ್ನಾನಿ ಮತ್ತು ರಹೀಲಾ ಫರ್ನೀಚರ್‌ವಾಲಾ ಅವರನ್ನು ಕಳೆದ ತಿಂಗಳೇ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಪ್ರಸ್ತುತ ಅವರಿಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದರು. ಈ ನಡುವೆ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಈ ಇಬ್ಬರನ್ನು ಎನ್‌ಸಿಬಿ ವಶಕ್ಕೆ ಪಡೆದಿದೆ.

  ಇನ್ನು ಬಂಧಿತ ಮೂರನೇ ವ್ಯಕ್ತಿ ಜಗದೀಪ್ ಸಿಂಗ್, ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ ಕರಮ್‌ಜೀತ್ ಸಿಂಗ್ ನ ಸಹೋದರನೇ ಆಗಿದ್ದು, ಡ್ರಗ್ಸ್ ವ್ಯವಹಾರದಲ್ಲಿ ಜಗದೀಪ್ ಸಿಂಗ್ ಸಹ ಪಾಲುದಾರಿಕೆ ಹೊಂದಿದ್ದ ಎನ್ನಲಾಗಿದೆ. ಈ ಮೂವರ ನಡುವೆ ಸಾಕಷ್ಟು ಹಣಕಾಸು ವ್ಯವಹಾರ ನಡೆದಿರುವುದನ್ನು ಎನ್‌ಸಿಬಿ ಪತ್ತೆ ಮಾಡಿದೆ.

  ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯು ಈ ವರೆಗೆ 33 ಜನರನ್ನು ಬಂಧಿಸಿದೆ. ಹಲವರಿಗೆ ಈಗಾಗಲೇ ಜಾಮೀನು ದೊರೆತಿದೆ. ಇನ್ನು ಕೆಲವರಿಗೆ ಜಾಮೀನು ದೊರೆತಿಲ್ಲ.

  ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಹಾಗೂ ಆಕೆಯ ಸಹೋದರನ್ನು ಎನ್‌ಸಿಬಿ ಬಂಧಿಸಿತ್ತು. ಇಬ್ಬರಿಗೂ ಷರತ್ತು ಬದ್ಧ ಜಾಮೀನು ನೀಡಲಾಗಿದೆ.

  English summary
  NCB arrested three people in releated to drugs case and Sushant Singh death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X