For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಸಾವಿನ ಹಿಂದೆ ದಾವೂದ್ ಗ್ಯಾಂಗ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ರಾ ಅಧಿಕಾರಿ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಕಾರಣ ಏನಿರಬಹುದು ಎನ್ನುವ ಹುಡುಕಾಟ ನಡೆಯುತ್ತಿದೆ. ಈಗಾಗಲೆ ಬಾಲಿವುಡ್ ನಲ್ಲಿ ಸಾಕಷ್ಟು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಸುಶಾಂತ್ ಆತ್ಮಹತ್ಯೆಗೆ ಶರಣಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಜೂನ್ 14ರಂದು ಸುಶಾಂತ್ ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

  ಅಭಿಮಾನಿಗೆ ಧೈರ್ಯ ತುಂಬಿದ Kiccha Sudeep | Filmibeat Kannada

  ಸುಶಾಂತ್ ಸಾವಿನ ನಂತರ ಬಾಲಿವುಡ್ ನ ಕರಾಳ ಮುಖ ಬಯಲಾಗಿದ್ದು, ಸ್ವಜನಪಕ್ಷಪಾತದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬಾಲಿವುಡ್ ನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ಸ್ಟಾರ್ ನಟರು ಮತ್ತು ನಟಿಯರ ವಿರುದ್ಧ ನೆಪೋಟಿಸಂ ಆರೋಪ ಕೇಳಿಬರುತ್ತಿದೆ. ಈ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬರುತ್ತಿದೆ. ಮಾಜಿ ರಾ ಅಧಿಕಾರಿ ಎನ್ ಕೆ ಸೂದ್ ಸುಶಾಂತ್ ಸಾವಿನ ಹಿಂದೆ ದಾವೂದ್ ಗ್ಯಾಂಗ್ ನ ಕೈವಾಡವಿದೆ ಎಂದು ಹೇಳಿದ್ದಾರೆ. ಮುಂದೆ ಓದಿ..

  ಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ: ಸುಬ್ರಹ್ಮಣಿಯನ್ ಸ್ವಾಮಿಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ: ಸುಬ್ರಹ್ಮಣಿಯನ್ ಸ್ವಾಮಿ

  ಸುಶಾಂತ್ ಸಾವಿನ ಹಿಂದೆ ದಾವೂದ್

  ಸುಶಾಂತ್ ಸಾವಿನ ಹಿಂದೆ ದಾವೂದ್

  ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಒದಗಿಸುವಂತೆ ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. ಈ ನಡುವೆ ಮಾಜಿ ರಾ ಅಧಿಕಾರಿ ಎನ್ ಕೆ ಸೂದ್ ಬಿಚ್ಚಿಟ್ಟ ಮಾಹಿತಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸುಶಾಂತ್ ಸಾವಿನ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಕೈವಾಡವಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

  ದಾವೂದ್ ಗ್ಯಾಂಗ್ ಕರೆ ಮಾಡಿ ಬೆದರಿಕೆ ಹಾಕುತಿತ್ತು

  ದಾವೂದ್ ಗ್ಯಾಂಗ್ ಕರೆ ಮಾಡಿ ಬೆದರಿಕೆ ಹಾಕುತಿತ್ತು

  ಸುಶಾಂತ್ ಸಿಂಗ್ ಸಾವಿಗೂ ದಾವೂದ್ ಇಬ್ರಾಹಿಂಗೂ ಎಲ್ಲಿಯ ಸಂಬಂಧ ಎಂದು ಅಚ್ಚರಿಯಾಗಬಹುದು. ಆದರೆ ಈ ವಿಚಾರವಾಗಿ ಎನ್ ಕೆ ಸೂದ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. "ಸುಶಾಂತ್ ಸಿಂಗ್ ಅವರನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಕೊಲೆ ಮಾಡಿದೆ ಬೇರೆ ಯಾರು ಅಲ್ಲ. ದಾವೂದ್ ಗ್ಯಾಂಗ್ ಸುಶಾಂತ್ ಸಿಂಗ್ ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಆ ಕಾರಣದಿಂದ ಸುಶಾಂತ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದಾವೂದ್ ಗ್ಯಾಂಗ್ ಜೊತೆಗೆ ಸುಶಾಂತ್ ಅವರ ಕೆಲವು ಆಪ್ತರು ಸಹ ಭಾಗಿಯಾಗಿದ್ದಾರೆ" ಎಂದು ಹೇಳಿದ್ದಾರೆ.

  ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್

  ಸುಶಾಂತ್ ಅವರದ್ದು ಯೋಜಿತ ಕೊಲೆ

  ಸುಶಾಂತ್ ಅವರದ್ದು ಯೋಜಿತ ಕೊಲೆ

  "ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ. ಯೋಜಿತ ಕೊಲೆ. ಸುಶಾಂತ್ ಆತ್ಮಹತ್ಯೆಗೂ ಒಂದು ದಿನ ಮುಂಚೆ ಸಿಸಿಟಿವಿ ಕ್ಯಾಮರಾಗಳು ಆಫ್ ಆಗಿದ್ದವು. ದಾವೂದ್ ಗ್ಯಾಂಗ್ ನಿಂದ ಫೋನ್ ಕರೆ ತಪ್ಪಿಸಿಕೊಳ್ಳಲು ಸುಶಾಂತ್ ಸಿಂಗ್ 50 ಸಿಮ್ ಕಾರ್ಡ್ ಗಳನ್ನು ಬದಲಾಯಿಸಿದ್ದರು. ಅಲ್ಲದೆ ಎಷ್ಟೋ ಬಾರಿ ಸುಶಾಂತ್ ಮನೆಯಲ್ಲಿ ಮಲಗದೆ ಕಾರಿನಲ್ಲಿಯೆ ಮಲಗುತ್ತಿದ್ದರು" ಎಂದು ಹೇಳಿದ್ದಾರೆ.

  ಸುಶಾಂತ್ ಆಪ್ತರಿಗೆ ಎಲ್ಲಾ ಗೊತ್ತಿದೆ

  ಸುಶಾಂತ್ ಆಪ್ತರಿಗೆ ಎಲ್ಲಾ ಗೊತ್ತಿದೆ

  "ಸುಶಾಂತ್ ಸಿಂಗ್ ಸಮಸ್ಯೆ ಅವರ ಆಪ್ತರಿಗು ಗೊತ್ತಿತ್ತು. ರಿಯಾ ಚಕ್ರವರ್ತಿ, ಸಂದೀಪ್ ಸಿಂಗ್, ಮನೆ ಕೆಲಸದವರಿಗೆಗೊತ್ತಿತ್ತು ಆದರೆ ಅವರ್ಯಾರು ಸುಶಾಂತ್ ಸಹಾಯಕ್ಕೆ ಬಂದಿಲ್ಲ. ಈ ಪ್ರಕರಣ ಸುಶಾಂತ್ ಅವರ ಆಪ್ತರು ಮತ್ತು ಬಾಲಿವುಡ್ ನ ದೊಡ್ಡ ದೊಡ್ಡ ವ್ಯಕ್ತಿಗಳ ಕಡೆ ಬೆರಳು ಮಾಡಿ ತೋರಿಸುತ್ತಿದೆ. ಮುಂಬೈ ಪೊಲೀಸರು ವಿಚಾರಣೆ ಮಾಡುತ್ತಿರುವ ಹಾಗೆ ನಟಿಸುತ್ತಿದ್ದಾರೆ. ಆದರೆ ನಿಜವಾದ ಅಪರಾಧಿಗಳನ್ನು ಬಚಾವ್ ಮಾಡುತ್ತಿದ್ದಾರೆ" ಎಂದು ಸೂದ್ ಆರೋಪಿಸಿದ್ದಾರೆ.

  English summary
  Bollywood Actor Sushant Singh Rajput murdered by Dawood Ibrahim Gang claims Ex RAW officers NK Sood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X