For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ: ಸುಬ್ರಹ್ಮಣಿಯನ್ ಸ್ವಾಮಿ

  |

  ಇನ್ನು ನಾಲ್ಕು ದಿನ ಕಳೆದರೆ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಒಂದು ತಿಂಗಳಾಗುತ್ತದೆ. ಜೂನ್ 14 ರಂದು ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು.

  Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

  ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನಿತ್ತು ಎಂಬುದನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

  ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್ಸುಶಾಂತ್ ಸಿಂಗ್ ಸಾವಿಗೆ ಸೋಲು ಕಾರಣವಲ್ಲ, ಬೇರೇನೋ ಇದೆ: ಕಿಚ್ಚ ಸುದೀಪ್

  ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್‌ನ ಸ್ವಜನಪಕ್ಷಪಾತ, ಬಾಲಿವುಡ್ ಗುಂಪುಗಾರಿಕೆಗಳ ಬಗ್ಗೆ ದೊಡ್ಡ ಮಟ್ಟದ ಪ್ರತಿರೋಧ ಕೇಳಿಬರುತ್ತಿದೆ. ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಮಾಡುತ್ತಿದ್ದಾರೆ. ಸುಶಾಂತ್ ಸಿಬ್ಬಂದಿ, ಗೆಳೆಯರು, ಗೆಳತಿಯರು ಸೇರಿದಂತೆ ಕೆಲವು ನಿರ್ದೇಶಕರನ್ನು ಸಹ ವಿಚಾರಣೆ ನಡೆಸಿದ್ದಾರೆ.

  ಸಿಬಿಐಗೆ ಒಪ್ಪಿಸಬೇಕು ಎಂಬ ದೊಡ್ಡ ಒತ್ತಾಯ

  ಸಿಬಿಐಗೆ ಒಪ್ಪಿಸಬೇಕು ಎಂಬ ದೊಡ್ಡ ಒತ್ತಾಯ

  ಆದರೆ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ದೊಡ್ಡ ಮಟ್ಟದ ಒತ್ತಾಯ ಕೇಳಿ ಬರುತ್ತಿದೆ. ದೇಶದ ಜನಪ್ರಿಯ ರಾಜಕಾರಣಿ, ಮಾಜಿ ಕೇಂದ್ರ ಮಂತ್ರಿ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ.

  ಹಾಲಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ

  ಹಾಲಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ

  ಮಾಜಿ ಕೇಂದ್ರ ಮಂತ್ರಿ , ಹಾಲಿ ರಾಜ್ಯಸಭಾ ಸದಸ್ಯ ಸಹ ಸುಬ್ರಹ್ಮಣಿಯನ್ ಸ್ವಾಮಿ ಅವರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ್ದು, ಸುಶಾಂತ್ ಸಿಂಗ್ ಪ್ರಕರಣವನ್ನು ತನಿಖೆಗೆ ಸಿಬಿಐ ಗೆ ಒಪ್ಪಿಸಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

  ಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್, ಏಕ್ತಾ ಕಪೂರ್‌ ನಿರಾಳ!ಸುಶಾಂತ್ ಸಿಂಗ್ ಸಾವು: ಸಲ್ಮಾನ್ ಖಾನ್, ಕರಣ್ ಜೋಹರ್, ಏಕ್ತಾ ಕಪೂರ್‌ ನಿರಾಳ!

  ಸಿಬಿಐ ತನಿಖೆ ಅಗತ್ಯವಿದೆಯೇ ಪರಿಶೀಲಿಸಲು ಸೂಚನೆ

  ಸಿಬಿಐ ತನಿಖೆ ಅಗತ್ಯವಿದೆಯೇ ಪರಿಶೀಲಿಸಲು ಸೂಚನೆ

  ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಸುಶಾಂತ್ ಸಿಂಗ್ ಪ್ರಕರಣ ಸತ್ಯಾಸತ್ಯತೆಗಳ ಬಗ್ಗೆ ಗಮನಿಸಿ ಪ್ರಕರಣವು ಸಿಬಿಐ ತನಿಖೆಗೆ ಅರ್ಹವೇ ಪರಿಶೀಲಿಸುವಂತೆ ಖ್ಯಾತ ವಕೀಲ ಇಶ್‌ಕರಣ್ ಗೆ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.

  ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್ಸತತ ಟ್ರೋಲ್‌ಗಳಿಂದ ಮಾನಸಿಕವಾಗಿ ಕುಗ್ಗಿ ಅಳುತ್ತಿದ್ದಾರೆ ಕರಣ್ ಜೋಹರ್

  ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಯಿತೆ?

  ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಯಿತೆ?

  ಭಾರತೀಯ ದಂಡ ಸಂಹಿತೆಯ 306 ಮತ್ತು 308 ನೇ ಸೆಕ್ಷನ್‌ಗಳು ಪ್ರಕರಣಕ್ಕೆ ಅನ್ವಯವಾಗುತ್ತವೆಯೇ ಎಂಬುದನ್ನು ಇಶ್‌ಕರಣ್ ಪರಿಶೀಲಿಸುತ್ತಿದ್ದಾರೆ. ಪೊಲೀಸರು ಹೇಳುವಂತೆ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಸ್ವಾಮಿ ಟ್ವೀಟ್ ಮೂಲಕ ಎತ್ತಿದ್ದಾರೆ.

  ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿ

  English summary
  MP Subramanian Swamy demand to handover Sushant Singh case to CBI if its investigation requires.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X