For Quick Alerts
  ALLOW NOTIFICATIONS  
  For Daily Alerts

  ಕೇರಳ ಜನರ ಪರಿಹಾರಕ್ಕೆ ಸುಶಾಂತ್ ನೀಡಿದ ಹಣ ಎಷ್ಟು?

  By Naveen
  |

  ಕೇರಳ ಜನತೆ ನೆರವಿಗೆ ಸಾಮಾನ್ಯ ಜನರ ಜೊತೆಗೆ ದೊಡ್ಡ ದೊಡ್ಡ ನಟರು ಸಹ ಕೈ ಜೋಡಿಸುತ್ತಿದ್ದಾರೆ. ಇದೀಗ ಬಾಲಿವುಡ್ ಚಿತ್ರರಂಗದ ಮತ್ತೊಬ್ಬ ನಟ ಸುಶಾಂತ್ ಸಿಂಗ್ ರಜಪೂತ್ ಕಷ್ಟದಲ್ಲಿ ಇರುವ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.

  ಸುಶಾಂತ್ ಸಿಂಗ್ ರಜಪೂತ್ ಕೇರಳ ಜನರ ಸಹಾಯಕ್ಕಾಗಿ 1 ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಈ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮಾ ಮಾಡಿದ್ದಾರೆ. ಈ ವಿಷಯವನ್ನು ತನ್ನ ಇನ್ಟಾಗ್ರಾಮ್ ಖಾತೆಯ ಮೂಲಕ ತಿಳಿಸಿರುವ ಅವರು ಹಣ ಜಮಾ ಮಾಡಿದ ವಿವರದ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

  ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು ಕೊಡಗಿನ ಮಕ್ಕಳಿಗೆ ಹೃದಯಪೂರ್ವಕವಾಗಿ ನೆರವಾದ ಕನ್ನಡ ಸಿನಿತಾರೆಯರು

  ವಿಶೇಷ ಅಂದರೆ, ಈ ಹಣವನ್ನು ಸುಶಾಂತ್ ತಮ್ಮ ಅಭಿಮಾನಿಗಳ ಪರವಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಹಾಗೂ ಪೂನಂ ಪಾಂಡೆ ಕೂಡ ಸಂತ್ರಸ್ಥರಿಗೆ ನೆರವು ನೀಡಿದ್ದರು.

  ಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆ ಕೇರಳ ಜನತೆಯ ನೆರವಿಗೆ ಬಂದ ನಟಿ ಪೂನಂ ಪಾಂಡೆ

  'ಧೋನಿ ದಿ ಅನ್ ಟೋಲ್ಡ್ ಸ್ಟೋರಿ' ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದ ನಟ ಸುಶಾಂತ್ ಸಿಂಗ್ ರಜಪೂತ್ ಈಗ ನಾಲ್ಕು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

  English summary
  Bollywood actor Sushant Singh Rajput donates 1 crore rupees to kerala flood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X