For Quick Alerts
  ALLOW NOTIFICATIONS  
  For Daily Alerts

  ಕಂಗನಾ ವಿರುದ್ಧ ಅಸಮಾಧಾನ ಹೊರಹಾಕಿದ ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್

  By ಫಿಲ್ಮ್ ಡೆಸ್ಕ್
  |

  ಸುಶಾಂತ್ ಸಿಂಗ್ ಸಾವಿನ ಬಳಿಕ ನಟಿ ಕಂಗನಾ ರಣಾವತ್ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನೆಪೋಟಿಸಂ ವಿರುದ್ಧ ಕಿಡಿ ಕಾರುತ್ತ, ಸುಶಾಂತ್ ಸಾವಿಗೆ ಬಾಲಿವುಡ್ ಮಾಫಿಯ ಕಾರಣ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಕರಣ್ ಜೊಹರ್, ಆದಿತ್ಯಾ ಚೋಪ್ರಾ, ಮಹೇಶ್ ಭಟ್ ಸೇರಿದ್ದಂತೆ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ನೆಪೋಟಿಸಂ ಆರೋಪ ಮಾಡಿದ್ದಾರೆ. ಅಲ್ಲದೆ ಹೊರಗಿನಿಂದ ಬಂದ ಪ್ರತಿಭೆಯನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಸುಶಾಂತ್ ಸಾವಿನ ಬಳಿಕ ಕಂಗನಾ ಹೇಳಿಕೆಗಳು ಬಾಲಿವುಡ್ ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿದೆ. 'ಸುಶಾಂತ್ ಸಿಂಗ್ ಅವರನ್ನು ಬಾಲಿವುಡ್ ನಿಂದ ಬಹಿಷ್ಕರಿಸಲಾಗಿತ್ತು, ಇದು ಸುಶಾಂತ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಸುಶಾಂತ್ ಸಾವಿಗೆ ಪ್ರಮುಖ ಕಾರಣ ಇದೆ' ಎಂದು ಕಂಗನಾ ಹೇಳಿದ್ದರು. ಇದೀಗ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಕಂಗನಾ ಬಗ್ಗೆ ಅಸಮಾಧಾನ ಹೊರಹಾಕಿ, ಕಂಗನಾ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ.

  ಸಾರಾ-ಸುಶಾಂತ್ ಲವ್ ಬ್ರೇಕ್ ಅಪ್: ಆಸೆ ತೋರಿಸಿ, ಬಿಸಾಡಿ ಹೋಗುತ್ತಾರೆ ಸ್ಟಾರ್ ಮಕ್ಕಳು ಎಂದ ಕಂಗನಾಸಾರಾ-ಸುಶಾಂತ್ ಲವ್ ಬ್ರೇಕ್ ಅಪ್: ಆಸೆ ತೋರಿಸಿ, ಬಿಸಾಡಿ ಹೋಗುತ್ತಾರೆ ಸ್ಟಾರ್ ಮಕ್ಕಳು ಎಂದ ಕಂಗನಾ

  ಈ ಬಗ್ಗೆ ವೆಬ್ ಪೋರ್ಟಲ್ ಜೊತೆ ಮಾತನಾಡಿದ ವಿಕಾಸ್ ಸಿಂಗ್ "ಕಂಗನಾ ತನ್ನ ಅಜೆಂಡವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ವೈಯಕ್ತಿಕ ಸಮಸ್ಯೆ ಹೊಂದಿರುವ ವ್ಯಕ್ತಿಗಳ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಕಂಗನಾ ತನ್ನದೆ ಆದ ದಾರಿಯಲ್ಲದ್ದಾರೆ. ಸುಶಾಂತ್ ಕುಟುಂಬದ ಎಫ್ ಐ ಆರ್ ಗೆ ಅವರ ಆರೋಪಗಳಿಗೆ ಯಾವುದೆ ಸಂಬಂಧವಿಲ್ಲ" ಎಂದು ಹೇಳಿದ್ದಾರೆ.

  ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಮಾತ್ರ ಎಫ್ ಐ ಆರ್ ದಾಖಲಿಸಿದ್ದಾರೆ. ಸುಶಾಂತ್ ಸಾವಿಗೂ ಉದ್ಯಮದ ಇತರ ವ್ಯಕ್ತಿಗಳಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಕಂಗನಾ ಆದರೆ ವಯಕ್ತಿಕ ಸಮಸ್ಯೆ ಹೊಂದಿರುವ ವ್ಯಕ್ತಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ ಎಂದು ವಿಕಾಶ್ ಸಿಂಗ್ ಹೇಳಿದ್ದಾರೆ.

  English summary
  Sushant Singh Rajput family lawyer Vikas Singh says that Kangana in her own trip.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X