For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಅಭಿಮಾನಿಗಳಿಂದ ಮಾಜಿ ಪ್ರೇಯಸಿ ಅಂಕಿತಾ ಸಿಕ್ಕಾಪಟ್ಟೆ ಟ್ರೋಲ್

  |

  ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ 5 ತಿಂಗಳ ಮೇಲಾಗಿದೆ. ಸುಶಾಂತ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ತನಿಖೆ ಇನ್ನು ನಡೆಯುತ್ತಿದೆ. ಸದ್ಯ ಸುಶಾಂತ್ ಪ್ರಕರಣ ಸಿಬಿಐ ಅಂಗಳಲ್ಲಿದೆ. ಅಂತಿಮ ವರದಿಯಾವಾಗ ಬರುತ್ತೆ ಎಂದು ಸುಶಾಂತ್ ಅಭಿಮಾನಿಗಳು ಕಾಯುತ್ತಿದ್ದಾರೆ.

  ಆದರೆ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗೆ ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  ಹ್ಯಾಪಿ ವಿಡಿಯೋಗಳನ್ನು ಶೇರ್ ಮಾಡುತ್ತಿರುವ ಅಂಕಿತಾ ವಿರುದ್ಧ ಸುಶಾಂತ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ಮೊದಲು ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಕೇಳುತ್ತಿದ್ದ ಅಂಕಿತಾ ಇದೀಗ ಸೈಲೆಂಟ್ ಆಗಿದ್ದಾರೆ. ಅಲ್ಲದೆ ಖುಷಿಯಾಗಿದ್ದಾರೆ, ಸುಶಾಂತ್ ಸಿಂಗ್ ನನ್ನು ಮರೆತು ಬಿಟ್ಟಿದ್ದೀರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ನ್ಯಾಯದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಇತ್ತೀಚಿಗೆ ಒಂದಿಷ್ಟು ವಿಡಿಯೋ ಶೇರ್ ಮಾಡಿರುವ ಅಂಕಿತಾಗೆ, ನೆಟ್ಟಿಗರು ಸುಶಾಂತ್ ಸಿಂಗ್ ನೆನಪಿದ್ದಾರಾ? ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಸಂತೋಷದ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅಂಕಿತಾಗೆ ನೆಗೆಟಿವ್ ಕಾಮಂಟ್ಸ್ ಗಳ ಸುರಿಮಳೆಯ ಬರುತ್ತಿದೆ.

  'ನೀವು ಪ್ರತೀದಿನ ಹೊಸ ಫೋಟೋ ಅಥವಾ ವಿಡಿಯೋವನ್ನು ಅಪ್ ಲೋಡ್ ಮಾಡಿದಾಗ ಪ್ರತಿದಿನ ನಿಮಗೆ ಸುಶಾಂತ್ ಅವರನ್ನು ನೆನಪಿಸುತ್ತೇವೆ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ಸ್ ಮಾಡಿದ್ದಾರೆ. ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ ಅಂಕಿತಾ ಸಂತೋಷವಾಗಿಯೇ ಜೀವನ ನಡೆಸುತ್ತಿದ್ದಾರೆ.

  ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು ಮಠ ಸಿನಿಮಾ | Elldelu Manjunatha | Filmibeat Kannada

  ಸುಶಾಂತ್ ಸಿಂಗ್ ಪ್ರಕರಣ ತನಿಖೆ ವೇಳೆಯೇ ಡ್ರಗ್ಸ್ ಪ್ರಕರಣ ಕೂಡ ಬಯಲಿಗೆ ಬಂದಿದ್ದು, ಬಾಲಿವುಡ್ ನ ಘಟಾನುಘಟಿಗಳಿಗೆ ಡ್ರಗ್ಸ್ ಪ್ರಕರಣ ಉರುಳಾಗಿದೆ. ಅನೇಕ ಸ್ಟಾರ್ ಕಲಾವಿದರ ಹೆಸರು ಡ್ರಗ್ಸ ಪ್ರಕರಣದಲ್ಲಿ ಕೇಳಿಬಂದಿದ್ದು, ಎನ್ ಸಿ ಬಿ ವಿಚಾರಣೆ ಎದುರಿಸಿದ್ದಾರೆ.

  English summary
  Bollywood late Actor Sushant Singh Rajput fans trolled His Ex girlfriend Ankita Lokhande.Fans say You Have forgotten him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X