For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ಚಿತ್ರಮಂದಿರಗಳಲ್ಲಿ 'ದಿಲ್ ಬೇಚಾರಾ'

  |

  ಬಾಲಿವುಡ್ ನಲ್ಲಿ ಕೆಲವೇ ಕೆಲವು ಸಿನಿಮಾಗಳ ಮೂಲಕ ಜನಪ್ರಿಯ ನಟನಾಗಿ ಹೊರಹೊಮ್ಮಿದ ಪ್ರತಿಭೆ ಸುಶಾಂತ್ ಸಿಂಗ್ ರಜಪೂತ್. ಇನ್ನು ಅದ್ಭುತ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕಿದ್ದ ಸುಶಾಂತ್, ಸಿನಿ ಪಯಣವನ್ನು ಅರ್ಧದಲ್ಲೇ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಸುಶಾಂತ್ ಇನ್ನಿಲ್ಲ, ಮತ್ತೆ ಸಿನಿಮಾ ಮಾಡಲ್ಲ ಎನ್ನುವ ಸತ್ಯವನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

  ಸುಶಾಂತ್ ಅಭಿನಯದ ಕೊನೆಯ ಸಿನಿಮಾ 'ದಿ ಬೇಚಾರಾ' ಇತ್ತೀಚಿಗೆ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸಿನಿಮಾ ಚಿತ್ರಮಂದಿರದ ಬದಲು ಆನ್ ಲೈನ್ ನಲ್ಲಿ ಬಿಡುಗಡೆಯಾಗಿರುವುದರಿಂದ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದೆ. ಆದರೀಗ ಸಿನಿಮಾ ಚಿತ್ರಮಂದಿರಕ್ಕೂ ಎಂಟ್ರಿ ಕೊಡುತ್ತಿದೆ. ಮುಂದೆ ಓದಿ...

  ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರು

  ಜುಲೈ 24ಕ್ಕೆ ಒಟಿಟಿಯಲ್ಲಿ ರಿಲೀಸ್

  ಜುಲೈ 24ಕ್ಕೆ ಒಟಿಟಿಯಲ್ಲಿ ರಿಲೀಸ್

  'ದಿಲ್ ಬೇಚಾರಾ' ಸಿನಿಮಾ ಜುಲೈ 24ರಂದು ಆನ್ ಲೈನ್ ನಲ್ಲಿ ರಿಲೀಸ್ ಆಗಿದೆ. ಲಾಕ್ ಡೌನ್ ಇದ್ದಿದ್ದರಿಂದ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿಲ್ಲ. ಇದೀಗ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಅಂದ್ಹಾಗೆ ಇದು ಖುಷಿಯ ವಿಚಾರವಾದರು ಭಾರತೀಯ ಅಭಿಮಾನಿಗಳಿಗೆ ಮತ್ತದೆ ಬೇಸರ.

  ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗುತ್ತಿದೆ ದಿಲ್ ಬೇಚಾರಾ

  ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗುತ್ತಿದೆ ದಿಲ್ ಬೇಚಾರಾ

  ದಿಲ್ ಬೇಚಾರಾ ಸಿನಿಮಾ ವಿದೇಶದಲ್ಲಿ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಲಾಕ್ ಡೌನ್ ಸಡಿಲಿಕೆ ಆಗಿದೆ. ಕೆಲವು ದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದೆ. ಆಸ್ಟ್ರೇಲಿಯಾದಲ್ಲಿಯೂ ಸಿನಿಮಾ ಪ್ರದರ್ಶನವಾಗುತ್ತಿದೆ. ಆಸ್ಟ್ರೇಲಿಯಾದ ಅನೇಕ ಕಡೆ ಸಿನಿಮಾ ರಿಲೀಸ್ ಆಗುತ್ತಿದೆ. ಸುಶಾಂತ್ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಿ ಆನಂದಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕುರಿತು ಸಿದ್ಧವಾಗುತ್ತಿದೆ ಬಯೋಪಿಕ್

  ಸಡಕ್-2, ಲಕ್ಷ್ಮಿ ಬಾಂಬ್ ಸಿನಿಮಾ ರಿಲೀಸ್ ಆಗುತ್ತಿದೆ

  ಸಡಕ್-2, ಲಕ್ಷ್ಮಿ ಬಾಂಬ್ ಸಿನಿಮಾ ರಿಲೀಸ್ ಆಗುತ್ತಿದೆ

  'ದಿಲ್ ಬೇಚಾರಾ' ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳು ಆಸ್ಟ್ರೇಲಿಯಾದಲ್ಲಿ ತೆರೆ ಕಾಣುತ್ತಿವೆ. 'ಸಡಕ್-2', 'ಲಕ್ಷ್ಮಿ ಬಾಂಬ್' ಸಿನಿಮಾ ರಿಲೀಸ್ ಆಗುತ್ತಿವೆ. ಅಕ್ಟೋಬರ್ 15ರಂದು 'ದಿಲ್ ಬೇಚಾರಾ' ಪ್ರದರ್ಶನವಾಗಲಿದೆ. ಆಕ್ಟೋಬರ್ 22ಕ್ಕೆ ಸಡಕ್-2 ಸಿನಿಮಾ ರಿಲೀಸ್ ಆಗುತ್ತಿದೆ.

  ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಮುಂಚೆ ಈ ಸ್ಟೋರಿ ನೋಡಿ | Filmibeat Kannada
  ಭಾರತದ ಚಿತ್ರಮಂದಿರಗಳಲ್ಲಿಯೂ ರಿಲೀಸ್ ಆಗುವ ಸಾಧ್ಯತೆ

  ಭಾರತದ ಚಿತ್ರಮಂದಿರಗಳಲ್ಲಿಯೂ ರಿಲೀಸ್ ಆಗುವ ಸಾಧ್ಯತೆ

  ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಕೊರೊನಾ ಲಾಕ್ ಡೌನ್ ಬಳಿಕ ಮುಚ್ಚಿದ ಚಿತ್ರಮಂದಿರಗಳು ಇನ್ನೂ ಓಪನ್ ಆಗಿಲ್ಲ. ಭಾರತದಲ್ಲಿ ಚಿತ್ರಮಂದಿರಗಳು ಓಪನ್ ಆದ ಬಳಿಕ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.

  English summary
  Actor Sushant Singh Rajput starrer last movie Dil Bechara release on Australian cinemas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X