For Quick Alerts
  ALLOW NOTIFICATIONS  
  For Daily Alerts

  ನಾಯಿ ಬೆಲ್ಟ್ ಬಳಸಿ ಸುಶಾಂತ್ ಕೊಲೆ ಮಾಡಲಾಗಿದೆ: ಮಾಜಿ ಸಹಾಯಕನ ಆರೋಪ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ನಿಗೂಢವಾಗಿದೆ. ಆತ್ಮಹತ್ಯೆ ಎಂದು ಹೇಳಲಾಗಿದ್ದ ಪ್ರಕರಣ ಈಗ ಕೊಲೆ ಎಂಬ ವಾದ ಪಡೆದುಕೊಂಡಿದೆ. ಆತ್ಮಹತ್ಯೆಯಾಗಿದ್ದರೂ ಅದು ಸುಶಾಂತ್ ಸ್ವ ಇಚ್ಛೆಯಿಂದ ಜೀವ ಕಳೆದುಕೊಂಡಿರಲು ಸಾಧ್ಯವೇ ಇಲ್ಲ. ಬಲವಂತವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

  Kabza ಚಿತ್ರ ನೀವು ಹಿಂದೆಂದೂ ನೋಡಿರದ Pan India Cinema : R Chandru | Filmibeat Kannada

  ಸುಶಾಂತ್ ಆಪ್ತ ವಲಯದಲ್ಲಿರುವವರ ಹೇಳಿಕೆಯಲ್ಲಿಯೇ ವಿರೋಧಾಭಾಸವಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆಯಿಂದಲೇ ಮೃತಪಟ್ಟಿರುವುದು ಎಂದು ಅವರಿಗೆ ಇತ್ತೀಚೆಗೆ ಸ್ನೇಹಿತರಾಗಿದ್ದವರು ಹೇಳುತ್ತಿದ್ದಾರೆ. ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹಳೆಯ ಸ್ನೇಹಿತರು ವಾದಿಸುತ್ತಿದ್ದಾರೆ. ಈ ನಡುವೆ ಸುಶಾಂತ್ ಅವರಿಗೆ ಈ ಹಿಂದೆ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದ ಅಂಕಿತ್ ಆಚಾರ್ಯ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

  'ಸುಶಾಂತ್‌ದು ಆತ್ಮಹತ್ಯೆಯೇ ಅಲ್ಲವೇ ಗೊತ್ತಿಲ್ಲ, ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡ್ತಾರೆ'

  ಇದು ಖಂಡಿತಾ ಕೊಲೆ

  ಇದು ಖಂಡಿತಾ ಕೊಲೆ

  ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಆಪ್ತ ಸಹಾಯಕ ಅಂಕಿತ್, ಈ ಮೊದಲು ದಿನದ 24 ಗಂಟೆಯೂ ಸುಶಾಂತ್ ಜತೆಗೆ ಇರುತ್ತಿದ್ದವರು. ಸುಶಾಂತ್ ಆತ್ಮಹತ್ಯೆಯಿಂದ ಸತ್ತಿದ್ದಾರೆ ಎಂಬ ವಾದವನ್ನು ನಂಬಲು ತಾವು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ. 'ನನಗೆ ಸುಶಾಂತ್ ಅಣ್ಣ ತುಂಬಾ ಚೆನ್ನಾಗಿ ಗೊತ್ತು. ಇದನ್ನು ಆತ್ಮಹತ್ಯೆ ಎಂದು ನಾನು ನಂಬುವುದಿಲ್ಲ. ಇದು ಖಂಡಿತವಾಗಿಯೂ ಕೊಲೆ' ಎಂದಿದ್ದಾರೆ.

  ಓ ಆಕಾರದಲ್ಲಿ ಗುರುತು

  ಓ ಆಕಾರದಲ್ಲಿ ಗುರುತು

  ಸುಶಾಂತ್ ಸಿಂಗ್ ಸ್ವತಃ ನೇಣು ಹಾಕಿಕೊಂಡಿದ್ದಾರೆ ಎನ್ನುವುದನ್ನು ನಾವು ಒಪ್ಪಿಕೊಂಡರೂ, ಅದು ಆತ್ಮಹತ್ಯೆಯಾಗಿದ್ದರೆ ಕೂಡ ಕುತ್ತಿಗೆಯಲ್ಲಿರುವ ಗುರುತು 'ಯು' ಆಕಾರದಲ್ಲಿಯೇ ಇರಬೇಕಿತ್ತು. ಆದರೆ ಯಾರಾದರೂ ನಿಮ್ಮ ಗಂಟಲನ್ನು ಬಿಗಿದು ಹಿಡಿದರೆ ಅದು ಯಾವಾಗಲೂ 'ಓ' ಆಕಾರದಲ್ಲಿ ಇರುತ್ತದೆ ಎಂದು ಅಂಕಿತ್ ಹೇಳಿದ್ದಾರೆ.

  ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ರಿಯಾ ಚಕ್ರವರ್ತಿ ಕಾಲ್ ಡೀಟೈಲ್ಸ್

  ಆತ್ಮಹತ್ಯೆಯ ಯಾವ ಲಕ್ಷಣವೂ ಇಲ್ಲ

  ಆತ್ಮಹತ್ಯೆಯ ಯಾವ ಲಕ್ಷಣವೂ ಇಲ್ಲ

  ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅವರ ಗಂಟಲಿನ ಮೇಲೆ 'ಓ' ಆಕಾರವಿದೆ. ಆತ್ಮಹತ್ಯೆಯ ಪ್ರಕರಣಗಳಲ್ಲಿ ವ್ಯಕ್ತಿಯ ಕಣ್ಣುಗಳು ದೊಡ್ಡದಾಗಿ ಹೊರಗೆ ಇಣುಕುತ್ತಿರುತ್ತವೆ. ನಾಲಿಗೆ ಹೊರಬಂದಿರುತ್ತದೆ. ಜೊಲ್ಲು ಸುರಿದಿರುತ್ತದೆ. ಆದರೆ ಸುಶಾಂತ್ ದೇಹದಲ್ಲಿ ಇದು ಯಾವುದೂ ಸಂಭವಿಸಿಲ್ಲ. ಇದು ಖಂಡಿತವಾಗಿಯೂ ಕೊಲೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಸುಶಾಂತ್ ನಾಯಿ ಫಡ್ಜ್ ಬೆಲ್ಟ್‌ನಿಂದ ಕೊಲೆ

  ಸುಶಾಂತ್ ನಾಯಿ ಫಡ್ಜ್ ಬೆಲ್ಟ್‌ನಿಂದ ಕೊಲೆ

  ಸುಶಾಂತ್ ಕುತ್ತಿಗೆ ಮೇಲೆ ಇರುವ ಗುರುತು ಅವರ ಮುದ್ದಿನ ನಾಯಿ ಫಡ್ಜ್‌ನ ಬೆಲ್ಟ್‌ನದ್ದು ಎಂದಿದ್ದಾರೆ. ಸುಶಾಂತ್ ಮೃತದೇಹದ ಫೋಟೊಗಳನ್ನು ಇನ್ನೂ ಇರಿಸಿಕೊಂಡಿದ್ದೇನೆ. ಆ ಫೋಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇನೆ. ದುಷ್ಕರ್ಮಿಗಳು ಫಡ್ಜ್ ಬೆಲ್ಟ್ ಬಳಸಿ ಅವರ ಕತ್ತು ಬಿಗಿದುಕೊಂಡಿದ್ದಾರೆ ಎಂದು ಅಂಕಿತ್ ಆರೋಪಿಸಿದ್ದಾರೆ.

  ಅಪರಾಧಿಗಳನ್ನು ಗಲ್ಲಿಗೇರಿಸಬೇಕು

  ಅಪರಾಧಿಗಳನ್ನು ಗಲ್ಲಿಗೇರಿಸಬೇಕು

  ಸುಶಾಂತ್ ಅವರನ್ನು ಕೊಂದ ದುಷ್ಕರ್ಮಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರುವುದು ಖುಷಿ ನೀಡಿದೆ. ಅವರು ಸೂಕ್ತ ತನಿಖೆ ನಡೆಸಿ ಸುಶಾಂತ್ ಸರ್‌ಗೆ ನ್ಯಾಯ ಒದಗಿಸಲಿದ್ದಾರೆ ಎಂದು ನಂಬಿದ್ದೇನೆ. ಸಾಯುವವರೆಗೂ ಆ ಕ್ರೂರಿಗಳನ್ನು ನೇಣಿಗೆ ಹಾಕುವುದನ್ನು ಬಯಸಿದ್ದೇನೆ ಎಂದು ಅಂಕಿತ್ ಹೇಳಿದ್ದಾರೆ.

  ಅಂದು ಕೇಳಿದ್ದೊಂದು, ಈಗ ಹೇಳುವುದು ಇನ್ನೊಂದು: ಉಲ್ಟಾ ಹೊಡೆದ ರಿಯಾ ಚಕ್ರವರ್ತಿ

  English summary
  Sushant Singh Rajput's ex assistant Ankit Acharya has claimed that, Sushant was murdered using his pet dog Fudge's belt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X