For Quick Alerts
  ALLOW NOTIFICATIONS  
  For Daily Alerts

  ಎಲ್ಲಾ ಸತ್ಯ ಹೊರಹಾಕಲಿದೆ ಸುಶಾಂತ್ ಸಿಂಗ್ ಡೈರಿ: ಈಗೆಲ್ಲಿದೆ ಆ ಡೈರಿ?

  |

  ಸುಶಾಂತ್ ಸಿಂಗ್ ಸಾವಿನ ಸಿಕ್ಕುಗಳು ಸುಲಭವಾಗಿ ಬಿಡಿಸಲಾಗುತ್ತಿಲ್ಲ. ಸುಶಾಂತ್ ಸಾವಿನ ಬಗ್ಗೆ ಪ್ರತಿದಿನ ಹೊಸ ಸತ್ಯ ಹೊರಬೀಳುತ್ತಿದೆ. ದಿನದಿಂದ ದಿನಕ್ಕೆ ಅನುಮಾನಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.

  Rachita Ram ಇತ್ತೀಚಿನ ಫೋಟೋಶೂಟ್‌ನ ತೆರೆ ಹಿಂದಿನ ದೃಶ್ಯ | Filmibeat Kannada

  ಆದರೆ ಅಂತಿಮ ಸತ್ಯ ಯಾವುದು? ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ? ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವಂತ ಸನ್ನಿವೇಶ ಸೃಷ್ಟಿಸಿದ್ದು ಯಾರು? ಸುಶಾಂತ್ ಸಿಂಗ್‌ನದ್ದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೇ?

  ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ ರಿಯಾ ಚಕ್ರವರ್ತಿ ಕಾಲ್ ಡೀಟೈಲ್ಸ್

  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಸಿಬಿಐ ಈಗಾಗಲೇ ಪ್ರಾರಂಭಿಸಿದೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಪ್ರಬಲ ಸಾಕ್ಷಿಯೊಂದಿದೆ. ಅದೇ ಸುಶಾಂತ್ ಸಿಂಗ್ ನ ಡೈರಿ.

  ಸುಶಾಂತ್‌ ಗೆ ಡೈರಿ ಬರೆಯುವ ಅಭ್ಯಾಸವಿತ್ತು

  ಸುಶಾಂತ್‌ ಗೆ ಡೈರಿ ಬರೆಯುವ ಅಭ್ಯಾಸವಿತ್ತು

  ಸುಶಾಂತ್ ಸಿಂಗ್‌ ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿ ಮಾತ್ರವಲ್ಲ ಆತ ತನ್ನಿಷ್ಟದ ವ್ಯಕ್ತಿಗಳ ಬಗ್ಗೆ, ತಾನು ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ. ತನಗೆ ಆಸಕ್ತಿ ಎನಿಸಿದ ವಿಷಯಗಳ ಬಗ್ಗೆ ಬರೆದಿಡುತ್ತಿದ್ದ.

  'ಡೈರಿಯ ಕೊನೆಯ ಕೆಲ ಪೇಜುಗಳಲ್ಲಿ ಸತ್ಯವಿದೆ'

  'ಡೈರಿಯ ಕೊನೆಯ ಕೆಲ ಪೇಜುಗಳಲ್ಲಿ ಸತ್ಯವಿದೆ'

  ಸುಶಾಂತ್ ಸಿಂಗ್ ಬರೆದಿದ್ದ ಆ ಡೈರಿ ದೊರಕಿದರೆ ಎಲ್ಲಾ ಸತ್ಯವು ಹೊರಗೆ ಬರಲಿದೆ. ಈ ಮಾತನ್ನು ಸ್ವತಃ ಸುಶಾಂತ್ ತಂದೆಯ ಪರ ವಕೀಲರೆ ಹೇಳಿದ್ದಾರೆ. 'ಸುಶಾಂತ್ ಸಿಂಗ್ ಡೈರಿಯ ಕೊನೆಯ ಕೆಲವು ಪುಟಗಳಲ್ಲಿ ಎಲ್ಲಾ ಸತ್ಯ ಅಡಗಿದೆ' ಎಂದಿದ್ದಾರೆ ಅವರು.

  ನಾಯಿ ಬೆಲ್ಟ್ ಬಳಸಿ ಸುಶಾಂತ್ ಕೊಲೆ ಮಾಡಲಾಗಿದೆ: ಮಾಜಿ ಸಹಾಯಕನ ಆರೋಪ

  ಫೋನ್ ಕರೆ ಮಾಹಿತಿ, ಸುಶಾಂತ್ ಸಾವಿನ ಚಿತ್ರಗಳು ಮುಖ್ಯ

  ಫೋನ್ ಕರೆ ಮಾಹಿತಿ, ಸುಶಾಂತ್ ಸಾವಿನ ಚಿತ್ರಗಳು ಮುಖ್ಯ

  ಮುಂದುವರೆದು ಮಾತನಾಡಿರುವ ವಕೀಲ ವಿಕಾಸ್ ಸಿಂಗ್, 'ಸುಶಾಂತ್ ಸಾವಿನ ನಂತರ ಘಟನೆ ಸ್ಥಳದ ಚಿತ್ರಗಳು, ಸುಶಾಂತ್ ಸಿಂಗ್ ನ ಹಾಗೂ ಆರೋಪಿಗಳ, ಅನುಮಾನಿತರ ಫೋನ್ ಕರೆ ಮಾಹಿತಿಗಳು ಇವೆಲ್ಲವೂ ಮುಖ್ಯವಾಗಿದ್ದು, ಇವು ಪ್ರಕರಣವನ್ನು ಸತ್ಯದ ಕಡೆಗೆ ಕರೆದೊಯ್ಯುತ್ತವೆ' ಎಂದಿದ್ದಾರೆ.

  ಈಗ ಡೈರಿ ಎಲ್ಲಿದೆ?

  ಈಗ ಡೈರಿ ಎಲ್ಲಿದೆ?

  ಇತ್ತೀಚೆಗಷ್ಟೆ ಸುಶಾಂತ್ ಸಿಂಗ್ ಡೈರಿಯ ಒಂದು ಹಾಳೆಯ ಚಿತ್ರವನ್ನು ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸುಶಾಂತ್ ಸಿಂಗ್ ಡೈರಿ ರೆಹಾ ಬಳಿ ಇದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದು ಮುಂಬೈ ಪೊಲೀಸರ ಬಳಿ ಇದೆ. ಅದನ್ನು ಸಿಬಿಐ ಸಹ ತಪಾಸಣೆ ಮಾಡಲಿದೆ.

  ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

  English summary
  Sushant Singh father's lawyer said that Sushant Singh's dairy will tell all the truth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X