For Quick Alerts
  ALLOW NOTIFICATIONS  
  For Daily Alerts

  ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ

  |

  ನಾಚಿಕೆ ತುಂಬಿದ ನಗುವಿನಿಂದ ಹಲವಾರು ಹೃದಯಗಳನ್ನು ಕದ್ದಿದ್ದ ಸುಶಾಂತ್‌ ಸಿಂಗ್ ರಜಪೂತ್‌ಗೆ ಆಪ್ತ ಗೆಳತಿಯರು ಕೆಲವರಿದ್ದರು.

  ಸುಶಾಂತ್ ತೀರಿ ಹೋಗಿರುವ ಈ ಹೊತ್ತಿನಲ್ಲಿ ಆ ಗೆಳತಿಯರೊಂದಿಗೆ ಅವರ ಸಂಬಂಧವನ್ನು, ಜಗಳವನ್ನು ಕೆದಕುತ್ತಾ ಕೂರುವುದು ಮಾನವೀಯತೆಯಲ್ಲ.

  ಸುಶಾಂತ್ ಸಿನಿ ಜೀವನ ನೋಡಿದರೆ ಮೂವರು ನಟಿಯರ ಹೆಸರು ಅವರೊಟ್ಟಿಗೆ ಕೇಳಿಬರುತ್ತದೆ. ಅಂಕಿತಾ ಲೊಕಂಡೆ, ಕೃತಿ ಸೆನನ್, ರೆಹಾ ಚಕ್ರವರ್ತಿ. ಇವರಲ್ಲಿ ಇಬ್ಬರು ಸುಶಾಂತ್ ಸಾವಿನ ದಿನ ಆಸ್ಪತ್ರೆಗೆ ಭೇಟಿ ನೀಡಿದ್ದರು, ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದರು.

  ಸುಶಾಂತ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವಿವೇಕ್ ಒಬೆರಾಯ್ ಹೃದಯಸ್ಪರ್ಶಿ ಬರಹ

  ಸುಶಾಂತ್ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದ್ದ ಮಾಜಿ ಗೆಳತಿ ಕೃತಿ ಸೆನನ್, ಗೆಳೆಯ ಸುಶಾಂತ್ ಬಗ್ಗೆ ಬರಹವೊಂದನ್ನು ಹಂಚಿಕೊಂಡಿದ್ದು, ಆ ಬರಹ ಮೃದು ಹೃದಯಿಗಳಿಗೆ ಕಣ್ಣೀರು ತರಿಸದೇ ಇರದು.

  'ನಿನ್ನ ಮೆದುಳೆ ನಿನಗೆ ಶತ್ರು ಎಂದು ನನಗೆ ಗೊತ್ತಿತ್ತು'

  'ನಿನ್ನ ಮೆದುಳೆ ನಿನಗೆ ಶತ್ರು ಎಂದು ನನಗೆ ಗೊತ್ತಿತ್ತು'

  'ಸುಶ್, ನನಗೆ ಗೊತ್ತಿತ್ತು, ನಿನ್ನ ಸುಂದರವಾದ ಮೆದುಳೇ ನಿನಗೆ ಗೆಳೆಯ ಮತ್ತು ವೈರಿ ಆಗುತ್ತದೆಯೆಂದು. ನನ್ನನ್ನು ಪೂರ್ಣವಾಗಿ ಹತಾಶೆಗೆ ಒಳಪಡಿಸಿದ ಸಂಗತಿಯೆಂದರೆ, ನಿನಗೆ ಸಾಯುವುದು ಬದುಕುವುದಕ್ಕಿಂತಲೂ ಸುಲಭ ಎನಿಸಿಬಿಟ್ಟಿತಲ್ಲ ಎಂಬುದು'.

  'ನಿನ್ನನ್ನು ಪ್ರೀತಿಸುವವರನ್ನು ದೂರ ತಳ್ಳಬಾರದಿತ್ತು'

  'ನಿನ್ನನ್ನು ಪ್ರೀತಿಸುವವರನ್ನು ದೂರ ತಳ್ಳಬಾರದಿತ್ತು'

  'ಆ ಒಂದು ಕೆಟ್ಟ ಘಳಿಗೆಯನ್ನು ಕಳೆದು ಹೋಗುವಂತೆ ಮಾಡಲು ನಿನ್ನ ಸುತ್ತ ಜನರಿರಬೇಕಿತ್ತು ಎನಿಸುತ್ತದೆ ನನಗೆ. ನಿನ್ನನ್ನು ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು. ನಿನಗೆ ಇದ್ದ ಸಮಸ್ಯೆಯನ್ನು ಸರಿಪಡಿಸುವ ಅವಕಾಶ ನನಗೆ ಸಿಕ್ಕಿದ್ದರೆ ಎಷ್ಟು ಚಂದವಿರುತ್ತಿತ್ತು' ಸುಶಾಂತ್ ಮಾಜಿ ಪ್ರೇಯಸಿ ಭಾವುಕವಾಗಿ ಬರೆದಿದ್ದಾರೆ.

  ಆರೇ ತಿಂಗಳಲ್ಲಿ ಏಳು ಪ್ರಮುಖ ಸಿನಿಮಾಗಳನ್ನು ಕಳೆದುಕೊಂಡಿದ್ದರು ಸುಶಾಂತ್ ಸಿಂಗ್!

  'ಹೃದಯದ ತುಣುಕು ನೀನು ತೆಗೆದುಕೊಂಡು ಹೋಗಿದ್ದೀಯ'

  'ಹೃದಯದ ತುಣುಕು ನೀನು ತೆಗೆದುಕೊಂಡು ಹೋಗಿದ್ದೀಯ'

  'ಹೀಗೆ ಎಷ್ಟೋ ವಿಷಯಗಳು ಹಾಗಾಗಿದ್ದರೆ, ಹೀಗಾಗಿದ್ದರೆ ಎಂದು ನನಗೆ ಅನ್ನಿಸುತ್ತಿದೆ. ನನ್ನ ಹೃದಯದ ಒಂದು ಚೂರು ನಿನ್ನ ಜೊತೆಗೆ ಹೋಗಿಬಿಟ್ಟಿದೆ. ಇನ್ನೊಂದು ಚೂರಿನಲ್ಲಿ ನೀನು ಸದಾ ಜೀವಂತವಾಗಿರುತ್ತೀಯ. ನಿನ್ನ ಒಳಿತಿಗೆ ಪ್ರಾರ್ಥಿಸುವುದನ್ನು ಎಂದೂ ಬಿಟ್ಟಿರಲಿಲ್ಲ, ಮುಂದೆಯೂ ಬಿಡುವುದಿಲ್ಲ' ಎಂದಿದ್ದಾರೆ ಕೃತಿ ಸೆನನ್.

  ಚಂದ್ರನಲ್ಲಿ ಜಾಗ ಖರೀದಿಸಿದ್ದ ಭಾರತದ ಏಕೈಕ ನಟ: ಸುಶಾಂತ್ ಸಿಂಗ್ ಆಸ್ತಿ ಎಷ್ಟು?

  ಇಬ್ಬರೂ ಆತ್ಮೀಯ ಗೆಳೆಯರು

  ಇಬ್ಬರೂ ಆತ್ಮೀಯ ಗೆಳೆಯರು

  ಕೃತಿ ಸೆನನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ರಾಬ್ತಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರು ಬಹಳ ಆತ್ಮೀಯರಾಗಿದ್ದರು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ರೆಹಾ ಚಕ್ರವರ್ತಿ ಸುಶಾಂತ್ ಜೀವನಕ್ಕೆ ಬಂದಮೇಲೆ ಕೃತಿ ಸೆನನ್ ತುಸು ಅಂತರ ಕಾಯ್ದುಕೊಂಡಿದ್ದರು.

  English summary
  Actor Sushant Singh friend Kriti Sanon penned an emotional letter about Sushant in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X