For Quick Alerts
  ALLOW NOTIFICATIONS  
  For Daily Alerts

  ಸಾಯುವ ಒಂದು ದಿನ ಮುಂಚೆ ಅಮರ್, ಅಕ್ಬರ್, ಆಂಥೋನಿಗೆ ಸುಶಾಂತ್ ದುಡ್ಡು ಕೊಟ್ಟಿದ್ದೇಕೆ?

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಸ್ನೇಹಿತರು, ಮನೆಯ ಸಿಬ್ಬಂದಿ, ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಕುಟುಂಬದವರನ್ನು ಸೇರಿದಂತೆ ಅನೇಕರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಸುಶಾಂತ್ ಸಾವಿನ ಬಳಿಕ ಸಾಕಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿದೆ.

  Medical ಹಾಗು Industrial ದೃಷ್ಟಿಯಿಂದ Ganja ಕಾನೂನು ಬದ್ಧವಾಗಬೇಕು - Rakesh Adiga | Filmibeat Kannada

  ಇದೀಗ ಮತ್ತೊಂದು ಅಂಶ ಹೊರಬಿದ್ದಿದೆ. ಸುಶಾಂತ್ ಸಿಂಗ್ ಸಾಯುವ ಕೆಲವು ಗಂಟೆಗಳ ಮೊದಲು ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ರಯೀಸ್ ಎಂಬಾತನಿಗೆ ಒಂದಿಷ್ಟು ಹಣ ಕೊಟ್ಟಿದ್ದರಂತೆ. ಈ ಬಗ್ಗೆ ರಯೀಸ್ ಬಹಿರಂಗ ಪಡಿಸಿದ್ದಾರೆ. ಫಾರ್ಮ್ ಹೌಸ್ ನಲ್ಲಿದ್ದ ಸುಶಾಂತ್ ಪ್ರೀತಿಯ ನಾಯಿಗಳಾದ ಅಮರ್, ಅಕ್ಬರ್, ಆಂಥೋನಿ ನೋಡಿಕೊಳ್ಳಲು ಸುಶಾಂತ್ ಮುಂಗಡವಾಗಿ ಹಣ ನೀಡಿದ್ದರಂತೆ. ಮುಂದೆ ಓದಿ..

  ಬಂಧನಕ್ಕೆ ರಿಯಾ ಸಿದ್ಧ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವುದಿಲ್ಲ: ವಕೀಲ

   ಸುಶಾಂತ್ ಇಷ್ಟದ ಜಾಗ ಲೋನಾವಾಲಾದ ಫಾರ್ಮ್ ಹೌಸ್

  ಸುಶಾಂತ್ ಇಷ್ಟದ ಜಾಗ ಲೋನಾವಾಲಾದ ಫಾರ್ಮ್ ಹೌಸ್

  ಸುಶಾಂತ್ ಸಿಂಗ್ ಗೆ ನಾಯಿಗಳೆಂದರೆ ಅಪಾರವಾದ ಪ್ರೀತಿ. ತಮ್ಮ ಅಚ್ಚುಮೆಚ್ಚಿನ ಜಾಗವಾಗಿದ್ದ ಲೋನಾವಾಲಾದ ಫಾರ್ಮ್ ಹೌಸ್ ನಲ್ಲಿ ನಾಯಿಗಳನ್ನು ಸಾಕಿದ್ದರು. ರಾಟ್ವಿಲರ್ ತಳಿಯ ಈ ಮೂರು ನಾಯಿಗಳನ್ನು ನೋಡಲು ಆಗಾಗ ಹೋಗುತ್ತಿದ್ದರಂತೆ. ಆದರೆ ಸಾಯುವ ಮೊದಲು ಪ್ರೀತಿಯ ನಾಯಿಗಳನ್ನು ನೆನಪಿಸಿಕೊಂಡು ಅವುಗಳನ್ನು ನೋಡಿಕೊಳ್ಳಲು ಹಣ ನೀಡಿರುವುದು ಅಚ್ಚರಿವೊಂಟು ಮಾಡಿದೆ.

  ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದವರು ಹೇಳಿದ್ದೇನು?

  ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದವರು ಹೇಳಿದ್ದೇನು?

  ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಯೀಸ್, 'ಜೂನ್ 14ರಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಟಿವಿಯಲ್ಲಿ ನೋಡಿದೆ. ಮೊದಲು ನಂಬಲು ಸಾಧ್ಯವಾಗಿಲ್ಲ. ಸಾಯುವ ಒಂದು ದಿನ ಮೊದಲು ಸಾಕು ನಾಯಿಗಳಾದ ಅಮರ್, ಅಕ್ಬರ್, ಆಂಥೋನಿಗಳನ್ನು ನೋಡಿಕೊಳ್ಳಲು ಹಣವನ್ನು ನನ್ನ ಖಾತೆಗೆ ವರ್ಗಾಯಿಸಿದ್ದರು. ಮೇ ತಿಂಗಳಿಗೆ ಒಪ್ಪಂದ ಮುಗಿದರು ಸಹ ಸುಶಾಂತ್ ಸಿಂಗ್ ಸರ್ ಜೂನ್ ಮತ್ತು ಜುಲೈ ತಿಂಗಳ ಮುಂಗಡ ಹಣವನ್ನು ನೀಡಿದ್ದರು' ಎಂದು ಹೇಳಿದ್ದಾರೆ.

  ಡ್ರಗ್ ನಂಟು: ಸುಶಾಂತ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಬಂಧನ

   ಫೆಬ್ರವರಿ ಬಳಿಕ ಸುಶಾಂತ್ ಫಾರ್ಮ್ ಹೌಸ್ ಗೆ ಹೋಗಿಲ್ಲ

  ಫೆಬ್ರವರಿ ಬಳಿಕ ಸುಶಾಂತ್ ಫಾರ್ಮ್ ಹೌಸ್ ಗೆ ಹೋಗಿಲ್ಲ

  ಸುಶಾಂತ್ ತೋಟದ ಮನೆಗೆ ಶಿಫ್ಟ್ ಆಗಿ ಸಾವಯವ ಕೃಷಿ ಮಾಡಲು ಯೋಜಿಸಿದ್ದರು ಎಂದು ಹೇಳಿದ್ದಾರೆ. ಇನ್ನೂ ಕೊನೆಯ ಬಾರಿ ಸುಶಾಂತ್ ಫಾರ್ಮ್ ಹೌಸ್ ಗೆ ಭೇಟಿ ನೀಡಿದ ಬಗ್ಗೆಯೂ ಮಾತನಾಡಿರುವ ರಯೀಸ್, 'ಜನವರಿಯಲ್ಲಿ ಸುಶಾಂತ್ ಸರ್ ತನ್ನ ಜನ್ಮದಿನ ಆಚರಿಸಲು ರಿಯಾ ಜೊತೆ ಬಂದಿದ್ದರು. ಅವರೊಂದಿಗೆ ಸ್ಯಾಮುಯಲ್ ಮಿರಾಂಡ, ಶ್ರುತಿ ಮೋದಿ ಮತ್ತು ಕೆಲವು ಸ್ನೇಹಿತರು ಬಂದಿದ್ದರು. ಬಳಿಕ ಫೆಬ್ರವರಿ ಕೊನೆಯ ವಾರದಲ್ಲಿ ಬಂದಿದ್ದರು. ಆ ಸಮಯದಲ್ಲಿ ದೀಪೇಶ್ ಸಾವಂತ್, ಸಿದ್ಧಾರ್ಥ್ ಹಾಗೂ ನೀರಜ್ ಮತ್ತು ಕೇಶವ್ ಅಡುಗೆಯವರು ಬಂದಿದ್ದರು. ನಂತರ ಬಂದಿಲ್ಲ' ಎಂದು ಹೇಳಿದ್ದಾರೆ.

   ಸಿಬಿಐ ತನಿಖೆ

  ಸಿಬಿಐ ತನಿಖೆ

  ಸದ್ಯ ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ಅಂಗಳದಲ್ಲಿದೆ. ಸಿಬಿಐ ಜೊತೆಗೆ ಇಡಿ ಮತ್ತು ಮಾದಕ ವಸ್ತು ನಿಯಂತ್ರಣ ಇಲಾಖೆ ಅವರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಡ್ರಗ್ಸ್ ಆಂಗಲ್ ನಲ್ಲಿ ತನಿಖೆ ಮಾಡುತ್ತಿದ್ದು, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸಹೋದರ ಮತ್ತು ಮನೆಯ ಮ್ಯಾನೇಜರ್ ಸ್ಯಾಮುಯಲ್ ಮಿರಾಂಡ ಅವರನ್ನು ಎನ್ ಸಿ ಬಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

  English summary
  Sushant Singh Rajput send money for his dog a day before his death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X