For Quick Alerts
  ALLOW NOTIFICATIONS  
  For Daily Alerts

  ರಿಯಾ-ಶೋವಿಕ್ ಅನ್ನು ತನ್ನ ಅವಶ್ಯಕತೆಗೆ ಬಳಸಿಕೊಂಡಿದ್ದರೇ ಸುಶಾಂತ್

  |

  ಸುಶಾಂತ್ ಸಿಂಗ್ ಸಾವು ಪ್ರಕರಣ ಬಾಲಿವುಡ್ ನಲ್ಲಿ ಮಾತ್ರವಲ್ಲ ರಾಜಕೀಯ ವಲಯದಲ್ಲಿಯೇ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಪ್ರಕರಣದ ತೀವ್ರತೆ ಈಗ ಕಡಿಮೆ ಆಗಿದೆಯಾದರು ಕುತೂಹಲ ಮಾಸಿಲ್ಲ.

  ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಿದ್ದ ಬಾಲಿವುಡ್ ಡ್ರಗ್ಸ್ ನಂಟು ಪ್ರಕರಣ ಬಹಳ ದೊಡ್ಡ ಕೋಹಾಲವನ್ನೇ ಎಬ್ಬಿಸಿತು. ದೀಪಿಕಾ ಪಡುಕೋಣೆ ಅಂಥಹಾ ನಟರೂ ಸಹ ಎನ್‌ಸಿಬಿ ಮೆಟ್ಟಿಲು ತುಳಿಯಬೇಕಾಗಿ ಬಂತು. ದೀಪಿಕಾ ಮ್ಯಾನೇಜರ್ ಎನ್‌ಸಿಬಿ ಯಿಂದ ತಪ್ಪಿಸಿಕೊಂಡು ಓಡಾಡಿದರು.

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: 3 ತಿಂಗಳ ಬಳಿಕ ಮೌನ ಮುರಿದ ಬಿಹಾರ ಸಿಎಂ ನಿತೀಶ್ ಕುಮಾರ್

  ಸುಶಾಂತ್ ಸಿಂಗ್ ಸಹ ಮಾದಕ ವ್ಯಸನಿ ಆಗಿದ್ದರು ಎಂಬುದು ಈಗಾಗಲೇ ಹಲವರ ಹೇಳಿಕೆಯಿಂದ ಗೊತ್ತಾಗಿದೆ. ಆದರೆ ಸುಶಾಂತ್‌ನ ಮಾದಕ ವ್ಯಸನದಿಂದಾಗಿ ಪ್ರೇಯಸಿ ರಿಯಾ ಹಾಗೂ ಆಕೆಯ ಸೋದರ ಶೋವಿಕ್ ಹಾಗೂ ಇನ್ನೂ ಕೆಲವು ಮಂದಿ ಬಲಿಯಾಗಬೇಕಾಗಿ ಬಂದಿದೆಯೇ ಎಂಬ ಅನುಮಾನ ಈಗ ಎದ್ದಿದೆ.

  ಶೋವಿಕ್ ಹಾಗೂ ರಿಯಾರನ್ನು ಸುಶಾಂತ್ ಬಳಸಿಕೊಂಡಿದ್ದ: ವಕೀಲ

  ಶೋವಿಕ್ ಹಾಗೂ ರಿಯಾರನ್ನು ಸುಶಾಂತ್ ಬಳಸಿಕೊಂಡಿದ್ದ: ವಕೀಲ

  ರಿಯಾ ಸಹೋದರ ಶೋವಿಕ್ ಈಗಲೂ ನ್ಯಾಯಾಂಗ ಬಂಧನದಲ್ಲಿದ್ದು, ಆತನ ಜಾಮೀನಿನಾಗಿ ಅರ್ಜಿ ಹಾಕಲಾಗಿದ್ದು, ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಸುಶಾಂತ್‌ಗೆ ಮಾದಕ ವಸ್ತು ಸೇವನೆ ವ್ಯಸನವಿತ್ತು. ಆದರೆ ಮಾದಕ ವಸ್ತುವನ್ನು ಆತ ತಾನಾಗಿ ಎಂದೂ ಕೊಳ್ಳುತ್ತಿರಲಿಲ್ಲ ಬದಲಿಗೆ ಪ್ರೇಯಸಿ ರಿಯಾ ಹಾಗೂ ಆಕೆಯ ಸಹೋದರನನ್ನು ಬಳಸುತ್ತಿದ್ದರಂತೆ.

  'ಮಾದಕ ವ್ಯಸನಿ ಎಂಬುದು ಗೊತ್ತಾಗದಂತೆ ಜಾಗೃತೆ ವಹಿಸಿದ್ದ ಸುಶಾಂತ್'

  'ಮಾದಕ ವ್ಯಸನಿ ಎಂಬುದು ಗೊತ್ತಾಗದಂತೆ ಜಾಗೃತೆ ವಹಿಸಿದ್ದ ಸುಶಾಂತ್'

  ಶೋವಿಕ್ ಪರ ವಕೀಲರು ಜಾಮೀನು ಅರ್ಜಿಯಲ್ಲಿ ಇದನ್ನು ನಮೂದಿಸಿದ್ದು, 'ತಾವು ಮಾದಕ ವಸ್ತು ವ್ಯಸನಿ ಆಗಿರುವುದು ಯಾರಿಗೂ ಗೊತ್ತಾಗಬಾರದೆಂದು ಶೋವಿಕ್ ಅನ್ನು ಮಾದಕ ವಸ್ತು ಖರೀದಿಗೆ ಕಳಿಸುತ್ತಿದ್ದರು ಸುಶಾಂತ್. ಶೋವಿಕ್ ಇಲ್ಲದಿದ್ದರೆ, ಆತನ ಮನೆ ಸಿಬ್ಬಂದಿಯನ್ನು ಕಳಿಸುತ್ತಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

  ರಿಯಾ ಚಕ್ರವರ್ತಿ ಸಹೋದರನ ಜಾಮೀನು ಅರ್ಜಿ ತಿರಸ್ಕೃತ

  ಶೋವಿಕ್ ಮತ್ತು ರಿಯಾ ಮಾದಕ ವ್ಯಸನಿಗಳಲ್ಲ: ವಕೀಲ

  ಶೋವಿಕ್ ಮತ್ತು ರಿಯಾ ಮಾದಕ ವ್ಯಸನಿಗಳಲ್ಲ: ವಕೀಲ

  ಶೋವಿಕ್ ಆಗಲಿ ರಿಯಾ ಆಗಲಿ ಮಾದಕ ವಸ್ತು ವ್ಯಸನಿಗಳಲ್ಲ ಆದರೆ ಸುಶಾಂತ್‌ಗಾಗಿ ಶೋವಿಕ್ ಮಾದಕ ವಸ್ತುವನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸಿದ್ದಾನೆ. ಇದು ಖರೀದಿ ಮಾಡಿರುವುದೇ ವಿನಃ ಮಾದಕ ವಸ್ತು ಮಾರಾಟಕ್ಕೆ ಉತ್ತೇಜನ ನೀಡಿರುವುದು ಅಥವಾ ಮಾದಕ ವಸ್ತು ಜಾಲಕ್ಕೆ ಹಣಕಾಸು ನೆರವು ನೀಡಿರುವುದು ಅಲ್ಲ ಎಂದು ಹೇಳಿದ್ದಾರೆ ಶೋವಿಕ್ ಪರ ವಕೀಲ ಸತೀಶ್ ಮನ್ಶಿಂದೆ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣ: 'ರಿಪಬ್ಲಿಕ್ ಟಿವಿ' ವರದಿಯನ್ನು ಪ್ರಶ್ನಿಸಿದ ಹೈಕೋರ್ಟ್

  ರಿಯಾ ಗೆ ಜಾನೀನು ದೊರೆತಿದೆ

  ರಿಯಾ ಗೆ ಜಾನೀನು ದೊರೆತಿದೆ

  ರಿಯಾ ಚಕ್ರವರ್ತಿಯನ್ನು ಡ್ರಗ್ಸ್ ಖರೀದಿಸಲು ಹಣ ನೀಡಿದ ಆರೋಪದ ಮೇಲೆ ಎನ್‌ಸಿಬಿ ಪೊಲೀಸರು ಬಂಧಿಸಿದ್ದರು. ಒಂದು ತಿಂಗಳ ಬಳಿಕ ಆಕೆಗೆ ಜಾಮೀನು ನೀಡಲಾಯಿತು. ಆದರೆ ಶೋವಿಕ್‌ ಗೆ ಇನ್ನೂ ಸಹ ಜಾಮೀನು ದೊರೆತಿಲ್ಲ.

  English summary
  Showik's lawyer Satish said Sushant Singh used Rhea Chakraborty and Showik for his drug needs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X