Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಷ್ಮಿತಾ ಸೇನ್: ಬ್ರೇಕಪ್ ಬಳಿಕ ಗಂಡು ಮಗು ದತ್ತು ಪಡೆದ ನಟಿ!
ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗಿದ್ದು ತಮ್ಮ ಬ್ರೇಕಪ್‌ನಿಂದಾಗಿ. ಹೌದು ಬಹುಕಾಲದಿಂದ ಸುಷ್ಮಿತಾ, ರೋಹ್‌ಮನ್ ಶಾಲ್ ಜೊತೆಗೆ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಆತನಿಂದ ದೂರ ಆಗಿದ್ದಾರೆ. ಈ ವಿಚಾರವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು.
ಈಗ ಮತ್ತೆ ಸುಷ್ಮಿತಾ ಹೆಸರು ಸಾಕಷ್ಟು ಸುದ್ದಿ ಆಗುತ್ತಿದೆ. ಹಾಗಂತ ಅವರು ಹೊಸ ಬಾಯ್ ಫ್ರೆಂಡ್ ಹುಡುಕಿಕೊಂಡಿಲ್ಲ. ಬದಲಿಗೆ ಮತ್ತೊಂದು ಮಗುವನ್ನು ಸುಷ್ಮಿತಾ ದತ್ತು ಪಡೆದುಕೊಂಡಿದ್ದಾರೆ. ಹೌದು ಬ್ರೇಕಪ್ ನೋವಿನಿಂದ ಹೊರ ಬಂದು ತನ್ನ ಬಾಳಿನಲ್ಲಿ ಸುಷ್ಮಿತಾ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಈಗಾಗಲೇ ಸುಷ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಸುಷ್ಮಿತಾಳ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಗಂಡು ಮಗುವನ್ನು ದತ್ತು ಪಡೆದ ಸುಷ್ಮಿತಾ ಸೇನ್!
ಈ ಮೊದಲು ನಟಿ ಸುಷ್ಮಿತಾ ಸೇನ್ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಆದರೆ ಈ ಬಾರಿ ಸುಷ್ಮಿತಾ ಗಂಡು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ತಮ್ಮ ಇಬ್ಬರು ದತ್ತು ಮಕ್ಕಳಾದ ರೀನಾ ಮತ್ತು ಅಲಿಸಾ ಜೊತೆಗೆ ತನ್ನ ಹೊಸ ಗಂಡು ಮಗುವಿನ ಜೊತೆಗೆ ಫೊಟೋಗೆ ಪೋಸ್ ಕೊಟ್ಟಿದ್ದಾರೆ ಸುಷ್ಮಿತಾ ಸೇನ್.

11 ವರ್ಷದ ಬಳಿಕ 3ನೇ ಮಗು ದತ್ತು ಪಡೆದ ನಟಿ!
ನಟಿ ಸುಷ್ಮಿತಾ ಸೇನ್ ತನಗೆ 24 ವರ್ಷ ಇದ್ದಾಗ ಮೊದಲ ಮಗು ರೀನಾಳನ್ನು ದತ್ತು ಪಡೆದಿದ್ದಾರೆ. ಅದು 2000 ಇಸವಿಯಲ್ಲಿ. ನಂತರ 2010ರಲ್ಲಿ ಎರಡನೇ ಮಗು ಅಲಿಸಾಳನ್ನು ದತ್ತು ಪಡೆದಿದ್ದಾರೆ. ಈಗ 11 ವರ್ಷದ ಬಳಿಕ ಮತ್ತೊಂದು ಮಗುವನ್ನು ಸುಷ್ಮಿತಾ ದತ್ತು ಪಡೆದುಕೊಂಡಿದ್ದಾರೆ. ಬಹುಶಃ ಸುಷ್ಮಿತಾ ಅವರು ಮಕ್ಕಳ ಜೊತೆಗೆ ಅತಿ ಹೆಚ್ಚಾಗಿ ಸಂತಸದಿಂದ ಇರುತ್ತಾರೆ ಎನಿಸುತ್ತೆ. ಹಾಗಾಗಿ ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಸುಷ್ಮಿತಾಳ ಈ ನಡೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಮದುವೆಗೆ ಗುಡ್ ಬೈ ಹೇಳಿದರ ಸುಷ್ಮಿತಾ!
ಇನ್ನು ನಟಿ ಸುಷ್ಮಿತಾ ಸೇನ್ ಮದುವೆ ಆಗಿಲ್ಲ. ಮೊದಲಿಂದಲೂ ತನ್ನ ದತ್ತು ಮಕ್ಕಳ ಜೊತೆಗೆ ಸಂತೋಷವಾಗಿ ಇದ್ದಾರೆ. ಆದರೆ ಕೆಲವು ವರ್ಷಗಳಿಂದ ರೋಹ್‌ಮನ್ ಶಾಲ್ ಜೊತೆಗೆ ಪ್ರೀತಿಯಲ್ಲಿ ಇದ್ದರು ಸುಷ್ಮಿತಾ. ಹಾಗಾಗಿ ಸುಷ್ಮಿತಾ ರೋಹ್‌ಮನ್ ಶಾಲ್ ಅವರನ್ನು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಸುಷ್ಮಿತಾ ರೋಹ್‌ಮನ್ ಅವರಿಂದ ದೂರಾಗಿದ್ದಾರೆ. ಈಗ ಮತ್ತೊಂದು ಮಗುವನ್ನು ದತ್ತು ಪಡೆದು, ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ.

ಕೊನೆಯದಾಗಿ ವೆಬ್ ಸರಣಿಯಲ್ಲಿ ಕಾಣಿಸಿಕೊಂಡ ನಟಿ!
ಮಿಸ್ ಯುನಿವರ್ಸ್ ಕಿರೀಟ ತೊಟ್ಟಿದ್ದ ನಟಿ ಸುಷ್ಮಿತಾ ಸೇನ್ ಈಗ ಮಾದರಿ ಆಗುವ ಕೆಲಸ ಮಾಡಿದ್ದಾರೆ. ಇತ್ತ ಚಿತ್ರಗಳಲ್ಲೂ ಕೂಡ ಸುಷ್ಮಿತಾ ಸೇನ್ ಬ್ಯುಸಿ ಆಗುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಅಭಿಯಿಸಲು ಮುಂದಾಗಿದ್ದಾರೆ. ಕೊನೆಯದಾಗಿ ಆಕೆ 'ಆರ್ಯ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.