For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಸಲು ಮುಂದಾದರೂ ಟ್ರೋಲ್ ಆಗಿದ್ದೇಕೆ ಸುಷ್ಮಿತಾ?

  |

  ಹೆಚ್ಚುತ್ತಿರುವ ಕೊರೊನಾ ದಿನಕ್ಕೆ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಕೋವಿಡ್‌ನಿಂದ ದೇಶ ತತ್ತರಿಸಿ ಹೋಗಿದ್ದು, ಸೋಂಕಿತರು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಆಕ್ಸಿಜನ್‌ಗಾಗಿ ಒದ್ದಾಡುತ್ತಿದ್ದಾರೆ. ಈ ಸಮಯದಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಆಸ್ಪತ್ರೆಗೆ ಆಕ್ಸಿಜನ್ ನೀಡಲು ಮುಂದೆ ಬಂದಿದ್ದಾರೆ.

  ಸಹಾಯಕ್ಕೆ ಧಾವಿಸಿದರೂ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ ಸೋಂಕಿತರು ಪರದಾಡುತ್ತಿದ್ದರು. ಆಸ್ಪತ್ರೆಗೆ ನಟಿ ಸುಷ್ಮಿತಾ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲು ಮುಂದಾಗಿದ್ದಾರೆ. ಮುಂಬೈನಲ್ಲಿರುವ ಸುಷ್ಮಿತಾ, ಆಕ್ಸಿಜನ್ ಸಿಲಿಂಡರ್‌ಗಳನ್ನು ಮುಂಬೈನಿಂದ ದೆಹಲಿಗೆ ಹೇಗೆ ಪೂರೈಕೆ ಮಾಡುವುದು ಎನ್ನುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಬರಿ ಲಾಕ್‌ಡೌನ್‌ನಿಂದ ಪರಿಸ್ಥಿತಿ ಸುಧಾರಣೆ ಆಗಲ್ಲ, ಅರಿವು ಮೂಡಿಸಬೇಕು: ಅಜಯ್ ರಾವ್ಬರಿ ಲಾಕ್‌ಡೌನ್‌ನಿಂದ ಪರಿಸ್ಥಿತಿ ಸುಧಾರಣೆ ಆಗಲ್ಲ, ಅರಿವು ಮೂಡಿಸಬೇಕು: ಅಜಯ್ ರಾವ್

  ಈ ವಿಚಾರವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸುಷ್ಮಿತಾ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಸಲಹೆ ನೀಡಲು ಮುಂದಾಗಿದ್ದಾರೆ. ಅಷ್ಟರಾಗಲೇ ದೆಹಲಿ ಆಸ್ಪತ್ರೆಗೆ ಆಕ್ಸಿಜನ್ ಬೇರೆ ಕಡೆಯಿಂದ ಪೂರೈಕೆಯಾಗಿದೆ ಎಂದು ಸುಷ್ಮಿತಾ ಮಾಹಿತಿ ಹಂಚಿಕೊಂಡಿದ್ದಾರೆ.

  ಆದರೆ ಕೆಲವು ಸುಷ್ಮಿತಾರನ್ನು ಟ್ರೋಲ್ ಮಾಡಿದ್ದಾರೆ. ಮುಂಬೈನಲ್ಲೇ ಆಕ್ಸಿಜನ್ ಅಗತ್ಯವಿರುವಾಗ ದೆಹಲಿಗೆ ಕಳುಹಿಸುವ ಅಗತ್ಯತೆ ಏನಿದೆ ಎಂದು ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾರೆ. ಹತ್ತಿರದ ಮುಂಬೈ ಆಸ್ಪತ್ರೆಗೆ ನೀಡಬಹುದಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ತಿರುಗೇಟು ನೀಡಿರುವ ಸುಷ್ಮಿತಾ, ದೆಹಲಿಯಲ್ಲಿ ಆಕ್ಸಿಜನ್ ಅನಿವಾರ್ಯತೆ ಹೆಚ್ಚಿದೆ. ಮುಂಬೈನಲ್ಲಿ ಇನ್ನೂ ಆಕ್ಸಿಜನ್ ಸಿಗುತ್ತಿದೆ. ಚಿಕ್ಕ ಆಸ್ಪತ್ರೆಗಳಿಗೆ ಅವಶ್ಯಕತೆ ಹೆಚ್ಚಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಜೊತೆಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಭಾರತ ಕೊರೊನಾ ಎರಡನೇ ಅಲೆಯಿಂದ ನಲುಗಿ ಹೋಗಿದೆ. ಆಸ್ಪತ್ರೆ, ಬೆಡ್, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದಾರೆ. ಮುಂಬೈನಲ್ಲೂ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮುಂಬೈ ತೊರೆದು ಬೇರೆ ಕಡೆ ಹೋಗುತ್ತಿದ್ದಾರೆ.

  English summary
  Actress Sushmita Sen gives it back to troll who criticised her after sending Oxygen cylinder to Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X