For Quick Alerts
  ALLOW NOTIFICATIONS  
  For Daily Alerts

  ಎರಡು ವರ್ಷದ ಬಳಿಕ ನಟಿಸುತ್ತಿರುವ ಶಾರುಖ್ ಗೆ ನಾಯಕಿಯಾಗ್ತಾರಾ ತಾಪ್ಸಿ ಪನ್ನು?

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಎರಡು ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈಗಾಗಲೇ ಶಾರುಖ್ ಬಳಿ 4 ಸಿನಿಮಾಗಳಿವೆ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  ಚಿತ್ರದಲ್ಲಿ ಶಾರುಖ್ ಪಂಜಾಬಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಕಾಮಿಡಿ ಪಾತ್ರ ಇದಾಗಿದೆಯಂತೆ. ವಿಶೇಷ ಅಂದರೆ ಶಾರುಖ್ ಖಾನ್ ಗೆ ನಾಯಕಿಯಾಗಿ ಬಾಲಿವುಡ್ ನ ಪ್ರತಿಭಾವಂತ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಭಿನ್ನ ಸಿನಿಮಾಗಳ ಮೂಲಕ ಚಿತ್ರ ಪ್ರಿಯರ ಗಮನ ಸೆಳೆದಿರುವ ತಾಪ್ಸಿ, ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ..

  ಎರಡು ವರ್ಷದ ಬಳಿಕ ಹೊಸ ಸಿನಿಮಾ ಘೋಷಿಸಿದ ಶಾರುಖ್ ಖಾನ್

  ಬಾಲಿವುಡ್ ನಲ್ಲಿ ಚರ್ಚೆಯಲ್ಲಿರುವ ನಟಿ

  ಬಾಲಿವುಡ್ ನಲ್ಲಿ ಚರ್ಚೆಯಲ್ಲಿರುವ ನಟಿ

  ಇತ್ತೀಚಿಗೆ ತಾಪ್ಸಿ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ನಟಿ ಕಂಗನಾ ರಣಾವತ್ ವಿರುದ್ಧ ವಾಕ್ಸಮರದ ಮೂಲಕವೇ ಸುದ್ದಿಯಲ್ಲಿದ್ದಾರೆ. ನಟಿ ಕಂಗನಾ ರಣಾವತ್, ತಾಪ್ಸಿಯನ್ನು ಬಿ ಗ್ರೇಡ್ ನಟಿ ಎಂದು ಟೀಕಿಸಿದ್ದರು. ಬಳಿಕ ತಾಪ್ಸಿ, ಕಂಗನಾ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲದೆ ರಿಯಾ ಚಕ್ರವರ್ತಿಯನ್ನು ಬಂಧಿಸಿದ ಬಳಿಕ ತಾಪ್ಸಿ, ರಿಯಾ ಪರ ಮಾತನಾಡಿದ್ದರು. ಇದೀಗ ಸಿನಿಮಾ ವಿಚಾರಕ್ಕೆ ತಾಪ್ಸಿ ಮತ್ತೆ ಸದ್ದು ಮಾಡುತ್ತಿದ್ದಾರೆ.

  ಸಿನಿಮಾದ ಕಥೆ ಸಿದ್ಧವಾಗುತ್ತಿದೆ

  ಸಿನಿಮಾದ ಕಥೆ ಸಿದ್ಧವಾಗುತ್ತಿದೆ

  ಈಗಾಗಲೇ ಸಿನಿಮಾದ ಕಥೆ ಸಿದ್ಧವಾಗುತ್ತಿದ್ದು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಎರಡು ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚುತ್ತಿರುವ ಕಾರಣ ಶಾರುಖ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ಕಿಂಗ್ ಖಾನ್ ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಚರ್ಚೆಯು ನಡೆಯುತ್ತಿದೆ. ಆದರೆ ವರದಿಗಳ ಪ್ರಕಾರ ಶಾರುಖ್ ಗೆ ನಾಯಕಿಯಾಗಿ ತಾಪ್ಸಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

  ಬಾಲಿವುಡ್ ನಟ ಶಾರುಖ್ ಖಾನ್ ಆಫೀಸ್ ಈಗ ಐಸಿಯು ವಾರ್ಡ್

  ಶಾರುಖ್ ನಿರ್ಮಾಣದಲ್ಲಿ ತಾಪ್ಸಿ ಅಭಿನಯ

  ಶಾರುಖ್ ನಿರ್ಮಾಣದಲ್ಲಿ ತಾಪ್ಸಿ ಅಭಿನಯ

  ಈಗಾಗಲೇ ತಾಪ್ಸಿ ಶಾರುಖ್ ಖಾನ್ ನಿರ್ಮಾಣ ಬದ್ಲಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ರಿಲೀಸ್ ಆದ ಬದ್ಲಾ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶಾರುಖ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada
  ಶಾರುಖ್ ಖಾನ್ ಬಳಿ ಇದೆ 4 ಸಿನಿಮಾಗಳು?

  ಶಾರುಖ್ ಖಾನ್ ಬಳಿ ಇದೆ 4 ಸಿನಿಮಾಗಳು?

  ಶಾರುಖ್ ಖಾನ್ ಕೊನೆಯದಾಗಿ 'ಜೀರೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ನಿಲ್ಲಿಸಿದ್ದರು. ಇದೀಗ ನಾಲ್ಕು ಸಿನಿಮಾಗಳು ಶಾರುಖ್ ಬಳಿ ಇವೆ ಎಂದು ಹೇಳಲಾಗುತ್ತಿದೆ. ರಾಜ್ ಕುಮಾರ್ ಹಿರಾನಿ ಸಿನಿಮಾ ಜೊತೆಗೆ, ತಮಿಳು ನಿರ್ದೇಶಕ ಆಟ್ಲೀ, ಸಿದ್ಧಾರ್ಥ ಆನಂದ್ ನಿರ್ದೇಶನದ ಪಠಾನ್ ಮತ್ತು ಇನ್ನೂ ಒಂದು ಸಿನಿಮಾವಿದೆ ಎಂದು ಹೇಳಲಾಗುತ್ತಿದೆ. ಆದರೆ ಶಾರುಖ್ ಖಾನ್ ಇದುವರೆಗೂ ಅಧಿಕೃತವಾಗಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ.

  English summary
  Actress Taapsee Pannu start opposite to Shah Rrukh Khan in Rajkumar Hirani's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X