For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಬಳಿಕ ಕರಣ್ ಜೋಹರ್ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ?

  By Naveen
  |

  'ಬಾಹುಬಲಿ' ಸಿನಿಮಾದ ದೊಡ್ಡ ಯಶಸ್ಸಿನ ನಂತರ ಆ ಚಿತ್ರದ ಸ್ಟಾರ್ ಯಾವ ಸಿನಿಮಾ ಮಾಡುತ್ತಾರೆ ಎಂಬುದು ಎಲ್ಲರಲ್ಲಿಯೂ ಇದ್ದ ಕುತೂಹಲ. ಸದ್ಯ ನಟ ಪ್ರಭಾಸ್ 'ಸಾಹೋ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದರೆ, ಇತ್ತ ನಟಿ ತಮನ್ನಾ ಭಾಟಿಯಾಗೆ ಸಹ ಬಾಲಿವುಡ್ ನಿಂದ ಬುಲಾವ್ ಬಂದಿದೆ.

  ತಮನ್ನಾ ಸದ್ಯ ಕರಣ್ ಜೋಹರ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಕರಣ್ ಜೋಹರ್ ಟಾಲಿವುಡ್ ನ 'ಊಪಿರಿ' ಸಿನಿಮಾವನ್ನು ಬಾಲಿವುಡ್ ನಲ್ಲಿ ಮಾಡುವುದಕ್ಕೆ ಮುಂದಾಗಿದ್ದಾರೆ. ತೆಲುಗಿನಲ್ಲಿ ನಾಯಕಿಯಾಗಿದ್ದ ತಮನ್ನಾ ಅವರೇ ಈ ಚಿತ್ರದಲ್ಲೂ ನಾಯಕಿಯಾದರೆ ಚೆನ್ನಾಗಿ ಇರುತ್ತದೆ ಎಂಬುದು ಕರಣ್ ಜೋಹರ್ ಬಯಕೆ.

  'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?

  ತಮನ್ನಾ ನಟಿಸಿದ್ದ 'ಬಾಹುಬಲಿ' ಸಿನಿಮಾದ ಹಿಂದಿ ಹಕ್ಕುಗಳನ್ನು ಖರೀದಿಸಿದ್ದ ಕರಣ್ ಜೋಹರ್ ಈಗ ತಮನ್ನಾ ಗೆ ಒಂದು ದೊಡ್ಡ ಆಫರ್ ನೀಡಿದ್ದಾರೆ. ಇತ್ತೀಚಿಗೆ ಸೌತ್ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಕರಣ್ ಇಲ್ಲಿ ಹೆಸರು ಮಾಡಿದ ಸಿನಿಮಾವನ್ನು ಬಾಲಿವುಡ್ ಜನರಿಗೆ ತೋರಿಸಲು ಹೊರಟಿದ್ದಾರೆ.

  English summary
  Director Karan Johar was highly impressed by Tamannaah’s performance in 'Oopiri' and he is considering to cast the actress in his next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X