For Quick Alerts
  ALLOW NOTIFICATIONS  
  For Daily Alerts

  ಅಜಯ್ ದೇವಗನ್ ಸಿನಿ ಜೀವನದಲ್ಲಿಯೇ ದಾಖಲೆ ನಿರ್ಮಿಸಿದ 'ತನ್ಹಾಜಿ' ಸಿನಿಮಾ

  |

  ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅಭಿನಯದ ತನ್ಹಾಜಿ ಸಿನಿಮಾ 200 ಕೋಟಿ ಗಡಿ ದಾಟಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ 15 ದಿನಗಳಲ್ಲಿ 200 ಕೋಟಿ ದಾಟಿ ಮುನ್ನುಗ್ಗುತ್ತಿದೆ. 2020ರಲ್ಲಿ 200 ಕೋಟಿ ಗಡಿದಾಟಿದ ಮೊದಲ ಸಿನಿಮಾ ತನ್ಹಾಜಿ ಎನ್ನುವ ಖ್ಯಾತಿಗಳಿಸಿದೆ.

  ಇನ್ನು ವಿಶೇಷ ಅಂದರೆ ಇದು ನಟ ಅಜಯ್ ದೇವಗನ್ ಸಿನಿ ಬದುಕಿನಲ್ಲಿಯೆ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ಹೌದು, 25 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ನಟ ಅಜಯ್ ದೇವಗನ್ ಗೆ ದೊಡ್ಡ ಮಟ್ಟಕ್ಕೆ ಸಕ್ಸಸ್ ತಂದು ಕೊಟ್ಟ ಸಿನಿಮಾಗಳ ಸಂಖ್ಯೆ ವಿರಳ. ಅದರಲ್ಲೂ 200 ಕೋಟಿ ಗಡಿ ದಾಟಿದ ಸಿನಿಮಾ ಮೊದಲ ಸಿನಿಮಾ ತನ್ಹಾಜಿ.

  RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?

  ಜನವರಿ 10 ರಂದು ರಿಲೀಸ್ ಆದ ತನ್ಹಾಜಿ ಸಿನಿಮಾ, ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಸಿನಿಮಾವನ್ನು ಹಿಂದಿಕ್ಕಿ ಕಲೆಕ್ಷನ್ ನಲ್ಲಿ ಮುನ್ನುಗ್ಗುತ್ತಿದೆ. ಇತ್ತೀಚಿಗೆ ರಿಲೀಸ್ ಆದ ಪಂಗಾ ಮತ್ತು ಸ್ಟ್ರೀಟ್ ಡ್ಯಾನ್ಸರ್ -3 ಸಿನಿಮಾಗಳ ನಡುವೆಯು ತನ್ಹಾಜಿ ಉತ್ತಮ ಕಲೆಕ್ಷನ್ ಮಾಡುತ್ತ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ.

  ಇದುವರೆಗು ತನ್ಹಾಜಿ 202.83 ಕಲೆಕ್ಷನ್ ಮಾಡಿದೆ. ರಿಲೀಸ್ ಆದ ಮೊದಲ ವಾರಾಂತ್ಯದಲ್ಲಿ 50 ಕೋಟಿ ಬಾಚಿಕೊಂಡ ತನ್ಹಾಜಿ, 6 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿತ್ತು. ಉತ್ತಮ ಕಲೆಕ್ಷನ್ ಮಾಡುತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸಿನಿಮಾ ಗಣರಾಜ್ಯೋತ್ಸವದ ದಿನವು ಹೆಚ್ಚು ಕಲೆಕ್ಷನ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಚಿತ್ರದಲ್ಲಿ ಅಜಯ್ ದೇವಗನ್ ಮರಾಠರ ಸುಬೇದಾರ್ ತನ್ಹಾಜಿ ಮಲುಸಾರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಸೈಫ್ ಅಲಿ ಖಾನ್ ಶಿವಾಜಿ ಮತ್ತು ಅವರ ಸೈನ್ಯದ ವಿರುದ್ಧ ಹೋರಾಡಿದ ವಿರೋಧಿ ಉದಯ್ ಭನ್ ರಾಥೋಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಅಗರವಾಲ್ ಪತ್ನಿ ಸಾವಿತ್ರಿ ಬಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ.

  English summary
  Bollywood Actor Ajay Devgn starrer Tanhaji film entered 200 crore club. This is Ajay Devgan's highest grossing film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X