For Quick Alerts
  ALLOW NOTIFICATIONS  
  For Daily Alerts

  ಬಚ್ಚನ್ ಬಗ್ಗೆ ತಾಪ್ಸಿ ಪನ್ನು ಹೇಳಿಕೆ: ಪರ ವಿರೋಧ ಚರ್ಚೆ ಶುರು

  |

  ನಟ ಅಮಿತಾಭ್ ಬಚ್ಚನ್ ಬಗ್ಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗುತ್ತಿದೆ. 50ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಮಿತಾಭ್ ಬಗ್ಗೆ ತಾಪ್ಸಿ ಮಾತನಾಡಿದ್ದರು.

  ಚಿತ್ರರಂಗದಲ್ಲಿ ನಾಯಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ ಎನ್ನುವ ಬಗ್ಗೆ ಮಾತನಾಡುತ್ತಿದ್ದ ತಾಪ್ಸಿ 'ಬದ್ಲಾ' ಸಿನಿಮಾದ ಉದಾಹರಣೆ ನೀಡಿದರು. 'ಬದ್ಲಾ' ಸಿನಿಮಾದಲ್ಲಿ ನಾನು ಅಮಿತಾಭ್ ಸರ್ ಗಿಂತ ಹೆಚ್ಚು ದಿನ ಚಿತ್ರೀಕರಣ ಮಾಡಿದ್ದೇನೆ. ಹೆಚ್ಚು ಅವಧಿ ತೆರೆ ಮೇಲೆ ಇರುತ್ತೇನೆ. ಆದರೆ, ಆ ಸಿನಿಮಾ ಬಿಡುಗಡೆ ಆದ ಮೇಲೆ ಅಮಿತಾಭ್ ಸಿನಿಮಾ ಎಂದು ಹೇಳುತ್ತಿದ್ದರು. ಇದನ್ನು ಕೇಳಿದಾಗ ಬೇಸರ ಆಗಿತ್ತು ಎಂದರು.

  ಹಿಂದಿ ಮಾತಾಡಿ ಎಂದ ವ್ಯಕ್ತಿಯ ಬಾಯಿ ಮುಚ್ಚಿಸಿದ ನಟಿ ತಾಪ್ಸಿ ಪನ್ನುಹಿಂದಿ ಮಾತಾಡಿ ಎಂದ ವ್ಯಕ್ತಿಯ ಬಾಯಿ ಮುಚ್ಚಿಸಿದ ನಟಿ ತಾಪ್ಸಿ ಪನ್ನು

  ಸ್ಟಾರ್ ನಟರ ಜೊತೆಗೆ ನಾಯಕಿಯರು ಸಿನಿಮಾ ಮಾಡಿದರೆ ಎಲ್ಲರೂ ಅದೇ ಪ್ರಶ್ನೆ ಕೇಳುತ್ತಾರೆ. ನೀವು ಅಮಿತಾಭ್ ಜೊತೆಗೆ ನಟನೆ ಮಾಡಿದ್ದು ಹೇಗಿತ್ತು, ಅಕ್ಷಯ್ ಕುಮಾರ್ ಜೊತೆಗೆ ನಟಿಸಿದ ಅನುಭವ ಹೇಗಿತ್ತು ಅಂತ್ತಾರೆ ಇಂತ ಪ್ರಶ್ನೆಗಳನ್ನು ದಯಮಾಡಿ ಕೇಳ ಬೇಡಿ ಎಂದರು. ನಂತರ ಸಂಭಾವನೆ ತಾರತಮ್ಯದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು.

  ಅಮಿತಾಭ್ ಬಗ್ಗೆ ತಾಪ್ಸಿ ಪನ್ನು ನೀಡಿದ ಹೇಳಿಕೆಯನ್ನು ಕೆಲವರು ವಿರೋಧಿಸಿದ್ದಾರೆ. ಅಮಿತಾಭ್ ರಂತಹ ನಟರ ಬಗ್ಗೆ ಹಾಗೆ ಹೇಳಿದ್ದು ಸರಿ ಅಲ್ಲ ಎಂದಿದ್ದಾರೆ. ಇನ್ನು ಕೆಲವರು ತಾಪ್ಸಿ ನೀಡಿದ್ದು ಉದಾಹರಣೆ ಅಷ್ಟೇ ಎಂದಿದ್ದಾರೆ.

  ನಟಿ ತಾಪ್ಸಿ ಪನ್ನು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪಿಂಕ್' ಹಾಗೂ 'ಬದ್ಲಾ' ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.

  English summary
  Tapasee Pannu spoke about Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X