For Quick Alerts
  ALLOW NOTIFICATIONS  
  For Daily Alerts

  The Kashmir Files: ಮತ್ತೊಂದು ನೈಜ ಕಥೆಗೆ ಕೈ ಹಾಕಿದ 'ದಿ ಕಾಶ್ಮೀರ್ ಫೈಲ್ಸ್' ನಿರ್ಮಾಪಕ, ಇದು ಬಲು ರೋಚಕ!

  |

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಎಲ್ಲೆಡೆ ಚರ್ಚೆಗೆ ಕಾರಣವಾದ ಸಿನಿಮಾ. ಮಾರ್ಚ್ 11ರಂದು ಯಾವುದೆ ಪ್ರಚಾರ ಇಲ್ಲದೆ, ಸೈಲೆಂಟ್‌ ಆಗಿ ತೆರೆಕಂಡ ಸಿನಿಮಾ ಈ 'ದಿ ಕಾಶ್ಮೀರ್ ಫೈಲ್ಸ್' . ರಿಲೀಸ್ ಆಗಿ ಒಂದೆರೆಡು ದಿನ ಈ ಸಿನಿಮಾದ ಬಗ್ಗೆ ಹೆಚ್ಚಾಗಿ ಯಾರು ತಲೆಕೆಡಿಸಿಕೊಂಡಿರಲಿಲ್ಲಾ. ನಂತರದ ದಿನಗಳಲ್ಲಿ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಈ ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ.

  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ಈ ಸಿನಿಮಾದಲ್ಲಲಿ ತೋರಿಸುವ ಪ್ರಯತ್ನ ಮಾಡಿದ್ದರು. 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕಲೆಕ್ಷನ್ ಕೂಡ ಜೋರಾಗಿ ಸೌಂಡ್ ಮಾಡಿತ್ತು. 'ದಿ ಕಾಶ್ಮೀರಿ ಫೈಲ್ಸ್' ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹಿಟ್ ಲಿಸ್ಟ್ ಸೇರಿದೆ. ಸದ್ಯ ಈ ಚಿತ್ರದ ನಿರ್ಮಾಪಕರು ಇದೀಗ ಮತ್ತೊಂದು ನೈಜ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.

  Aryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನAryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನ

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಅಭಿಷೇಕ್ ಅಗರ್ವಾಲ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿಲಿದೆ. ಅಷ್ಟಕ್ಕೂ ಇದು ಕೂಡ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ಸಾಕಷ್ಟು ವಿಶೇಷತೆಗಳಿಂದ ಈ ಸಿನಿಮಾ ಕೂಡಿದ್ದು, ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಈ ಚಿತ್ರ ತಯಾರಾಗಲಿದೆ.

  ತೆಲುಗಿನ ಮಾಸ್ ಮಹಾರಾಜ ರವಿತೇಜ ಈ ಸಿನಿಮಾದಲ್ಲಿ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದು, ವಂಶಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಟೈಗರ್ ನಾಗೇಶ್ವರ್ ರಾವ್ ಅವರ ಜೀವನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಹಾಗಿದ್ರೆ ಈ ಟೈಗರ್ ನಾಗೇಶ್ವರ್‌ರಾವ್ ಯಾರು ? ಟೈಗರ್ ನಾಗೇಶ್ವರ್‌ರಾವ್ ಒಬ್ಬ ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳ. 1970 ರಲ್ಲಿ ನಡೆದ ನೈಜ ಕಥೆಯೇ ಈ ಸಿನಿಮಾದ ಜೀವಾಳ. ಟೈಗರ್ ನಾಗೇಶ್ವರ್‌ರಾವ್ ಹೇಗೆಲ್ಲಾ ಕುಖ್ಯಾತಿ ಪಡೆದಿದ್ದ, ಅವನ ಜೀವನ ಮುಂದೇನಾಯ್ತು? ಅನ್ನುವ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.

  ಈ ಸಿನಿಮಾಗಾಗಿ ರವಿತೇಜ ತನ್ನ ಸಂಪೂರ್ಣ ಗೆಟಪ್ ಅನ್ನೆ ಬದಲಾಯಿಸಿಕೊಳ್ಳಲಿದ್ದಾರೆ. ವಿಭಿನ್ನ ಲಿಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ರವಿತೇಜ. ರವಿತೇಜ ಗೆ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕೃತಿ ಸನೂನ್ ಸಹೋದರಿ ನೂಪುರ್ ಸನೂನ್ ರವಿತೇಜಾಗೆ ಜೋಡಿಯಾಗಿ ಅಭಿನಿಸಲಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, 70ರ ದಶಕದ ಮೈ ಜುಂ ಎನ್ನಿಸುವ ಕಥಾ ವಸ್ತುವನ್ನು ಹೊತ್ತು ಈ ಸಿನಿಮಾ ಬರಲು ಸಜ್ಜಾಗಿದೆ. ಈಗಾಗಲೇ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಈಗಲೇ ಜನರಲ್ಲಿ ಕುತೂಹಲ ಮೂಡಿದೆ.

  English summary
  The Kashmir Files producer new movie poster release. Here is more details about movie
  Sunday, April 3, 2022, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X