twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಕ್ಕೆ ಹೊರಗಿನಿಂದ ತಿಂಡಿ ತರಬಹುದೇ? ಕೋರ್ಟ್ ಹೇಳಿದ್ದೇನು?

    |

    ಸಿನಿಮಾ ನೋಡಲು ಕುಟುಂಬ ಕರೆದುಕೊಂಡು ಹೋಗುವವರ ದೊಡ್ಡ ತಲೆನೋವೆಂದರೆ ಚಿತ್ರಮಂದಿರದ ಒಳಗಿನ ತಿಂಡಿ-ತಿನಿಸುಗಳ ದುಬಾರಿ ಬೆಲೆಗಳು.

    ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ಕಾರ್ನ್ ಅಥವಾ ಇನ್ನಾವುದೇ ತಿಂಡಿ ಅಥವಾ ಪಾನೀಯ ಕೊಳ್ಳಲು ಚಿತ್ರಮಂದಿರ ಟಿಕೆಟ್‌ಗಿಂತಲೂ ದುಪ್ಪಟ್ಟು ಅಥವಾ ಮೂರುಪಟ್ಟು ಬೆಲೆ ಕೊಡಬೇಕಾಗುತ್ತದೆ. ವೀಕೆಂಡ್‌ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಇನ್ನಷ್ಟು ಏರಿಕೆ ಆಗುತ್ತದೆ.

    ನಾವೇ ಮನೆಯಿಂದಲೇ ಏನಾದರೂ ತಿಂಡಿ ಒಯ್ಯೋಣ ಎಂದರೆ ಅದಕ್ಕೂ ಈ ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು ಅನುಮತಿ ನೀಡುವುದಿಲ್ಲ. ಆದರೆ ಈ ವಿಷಯವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿದ್ದು, ಈಗ ಈ ವಿಷಯದ ಬಗ್ಗೆ ಸುಪ್ರೀಂಕೋರ್ಟ್ ಇದೀಗ ತೀರ್ಪು ನೀಡಿದೆ.

    Theater Or Multiplex Owners Can Prohibit Outside Food

    ಸುಪ್ರೀಂಕೋರ್ಟ್ ತೀರ್ಪು ಪೂರ್ಣವಾಗಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳ ಪರವಾಗಿಯೇ ಬಂದಿದ್ದು, ಸಿನಿಮಾ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಿದೆ.

    ಸುಪ್ರೀಂಕೋರ್ಟ್‌ ನ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಿಚಾರಣೆ ಆಲಿಸಿ ನೀಡಿರುವ ತೀರ್ಪಿನನ್ವಯ, ಆಹಾರ ಮತ್ತು ಪಾನೀಯಗಳ ಕುರಿತಂತೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳು ತಮಗೆ ಉಚಿತವೆನಿಸುವ ನಿಯಮ ಜಾರಿಮಾಡುವ ಸ್ವಾತಂತ್ರ್ಯ ಹೊಂದಿವೆ.

    ಮಲ್ಟಿಪ್ಲೆಕ್ಸ್‌ಗಳು, ಚಿತ್ರಮಂದಿರಗಳು ಖಾಸಗಿ ಆಸ್ತಿ ಆಗಿರುವ ಕಾರಣ, ಹೊರಗಿನ ಆಹಾರವನ್ನು ತರದಂತೆ ನಿಷೇಧ ಹೇರುವ ಅಧಿಕಾರ ಅವುಗಳಿಗೆ ಇದೆ. ಆದರೆ ಸಣ್ಣ ಮಕ್ಕಳಿಗಾಗಿ ಪೋಷಕರು ತೆಗೆದುಕೊಂಡು ಬರುವ ಆಹಾರವನ್ನು ಚಿತ್ರಮಂದಿರಗಳು ನಿಷೇಧಿಸುವಂತಿಲ್ಲ. ಹಾಗೂ ಎಲ್ಲರಿಗೂ ಉತ್ತಮವಾದ ಕುಡಿಯುವ ನೀರನ್ನು ಉಚಿತವಾಗಿ ನೀಡುವ ಕಾರ್ಯವನ್ನು ಸಹ ಮಲ್ಟಿಪ್ಲೆಕ್ಸ್‌ ಹಾಗೂ ಚಿತ್ರಮಂದಿರಗಳು ಮಾಡಬೇಕಿದೆ.

    2018 ರಲ್ಲಿ ಜಮ್ಮು ಕಾಶ್ಮೀರದ ಹೈಕೋರ್ಟ್‌, ಸಿನಿಮಾ ವೀಕ್ಷಕರು ಹೊರಗಿನಿಂದ ತಂದ ಆಹಾರವನ್ನು ಮಲ್ಟಿಪ್ಲೆಕ್ಸ್‌ಗಳು ನಿಷೇಧಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಆದೇಶದ ವಿರುದ್ಧ ಮಲ್ಟಿಪ್ಲೆಕ್ಸ್‌ ಒಂದು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

    ''ಚಲನಚಿತ್ರ ವೀಕ್ಷಕರು ಯಾವುದೇ ಚಿತ್ರಮಂದಿರದ ಟಿಕೆಟ್ ಖರೀದಿಸಿದ ತಕ್ಷಣ ಚಿತ್ರಮಂದಿರದೊಂದಿಗೆ ಕರಾರಿಗೆ ಒಳಗಾಗುತ್ತಾರೆ ಅದಕ್ಕೆ ತಕ್ಕಂತೆಯೇ ಅವರು ವರ್ತಿಸಬೇಕಾಗುತ್ತದೆ. ಇನ್ನು ಚಿತ್ರಮಂದಿರದವರು ನೀಡುವ ಟಿಕೆಟ್‌ ಮೇಲೆ ಹೊರಗಿನ ಆಹಾರವನ್ನು ನಿಷೇಧಿಸಲಾಗಿದೆ ಎಂಬ ಸೂಚನೆ ಇಲ್ಲದಿದ್ದರೆ ಪ್ರೇಕ್ಷಕರು ಆಹಾರವನ್ನು ಕೊಂಡೊಯ್ಯಬಹುದಾಗಿದೆ'' ಎಂದಿದೆ ಸುಪ್ರೀಂಕೋರ್ಟ್.

    English summary
    Theater owners and multiplex owners can prohibit bringing outside food into the theater. Supreme court said it is their private property.
    Tuesday, January 3, 2023, 19:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X