India
  For Quick Alerts
  ALLOW NOTIFICATIONS  
  For Daily Alerts

  ದೆಹಲಿಯಲ್ಲಿ ಚಿತ್ರಮಂದಿರಗಳು ಬಂದ್ ಇಕ್ಕಟ್ಟಿನಲ್ಲಿ 'ಆರ್‌ಆರ್‌ಆರ್‌'

  |

  ಮತ್ತೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅದರಲ್ಲಿಯೂ ಓಮಿಕ್ರಾನ್ ಭೀತಿ ರಾಜ್ಯಗಳನ್ನು ಹೈರಾಣ ಮಾಡಿದೆ. ಹಾಗಾಗಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಪ್ಯೂ ವಿಧಿಸಲಾಗಿದ್ದು, ಇನ್ನಿತರೆ ನಿಯಮಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.

  ಕೋವಿಡ್ ಪ್ರಕರಣಗಳು ಹೆಚ್ಚಿರುವ ದೆಹಲಿಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಜೊತೆಗೆ ಚಿತ್ರಮಂದಿರಗಳನ್ನು ಸಹ ಬಂದ್ ಮಾಡಲಾಗಿದೆ. ಇದು ಈಗಾಗಲೇ ಬಿಡುಗಡೆ ಆಗಿರುವ ಹಾಗೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಬೇಕಿರುವ ಸಿನಿಮಾಗಳಿಗೆ ದೊಡ್ಡ ತಲೆ ನೋವು ತಂದಿದೆ.

  ದೆಹಲಿಯಲ್ಲಿ 56 ಚಿತ್ರಮಂದಿರಗಳು ಹಾಗೂ 17 ಮಲ್ಟಿಫ್ಲೆಕ್ಸ್‌ಗಳಿವೆ. ಈ ಎಲ್ಲವೂ ಬಂದ್ ಆಗಲಿವೆ. ದೆಹಲಿಯ ಹಲವು ಚಿತ್ರಮಂದಿರಗಳಲ್ಲಿ ರಣ್ವೀರ್ ಸಿಂಗ್‌ರ '83' ಸಿನಿಮಾ ಪ್ರದರ್ಶನ ಕಾಣುತ್ತಿತ್ತು, ಸರ್ಕಾರವು ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಸಹ ನೀಡಿತ್ತು. ಆದರೆ ಈಗ ಚಿತ್ರಮಂದಿರಗಳು ಬಂದ್ ಆದ್ದರಿಂದ ಸಿನಿಮಾ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  'ಆರ್‌ಆರ್‌ಆರ್‌' ಸಿನಿಮಾವು ಜನವರಿ 7 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಸಮಯದಲ್ಲಿ ಚಿತ್ರಮಂದಿರಗಳು ಬಂದ್ ಆಗಿರುವುದು ಚಿತ್ರತಂಡಕ್ಕೆ ತೀವ್ರ ಆಘಾತ ತಂದಿದೆ. ಇದರ ಜೊತೆಗೆ ಶಾಹಿದ್ ಕಪೂರ್ ನಟನೆಯ 'ಜೆರ್ಸಿ' ಸಿನಿಮಾ ಸಹ ಬಿಡುಗಡೆ ಆಗಬೇಕಿತ್ತು, ಆದರೆ ಕೋವಿಡ್ ಹೆಚ್ಚುತ್ತಿರುವ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದುಡಲಾಗಿದೆ.

  ದೆಹಲಿ ಮಾತ್ರವೇ ಅಲ್ಲ ಮುಂಬೈ ಮಹಾನಗರದಲ್ಲಿಯೂ ಕೋವಿಡ್ ಅದರಲ್ಲಿಯೂ ಓಮಿಕ್ರಾನ್ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಮುಂಬೈನಲ್ಲಿ ಸಹ ಚಿತ್ರಮಂದಿರಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಮುಂಬೈನ ಚಿತ್ರಮಂದಿರಗಳನ್ನು ಬಂದ್ ಮಾಡಿದರೆ ಮುಂದೆ ಬಿಡುಗಡೆ ಆಗಲಿರುವ ಸಿನಿಮಾಗಳಿಗೆ ಭಾರಿ ನಷ್ಟವಾಗಲಿದೆ.

  ಹಾಗಾಗಿ 'ಆರ್‌ಆರ್‌ಆರ್‌' ಸೇರಿದಂತೆ ಬಿಡುಗಡೆಗೆ ರೆಡಿಯಾಗಿರುವ ಪ್ಯಾನ್ ಇಂಡಿಯಾ ಸಿನಿಮಾಗಳು, ಬಾಲಿವುಡ್ ಸಿನಿಮಾಗಳು ಆತಂಕಿತಗೊಂಡಿದ್ದು, ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾಕ್ಕೂ ಕೋವಿಡ್ ಭೀತಿ ಆವರಿಸಿದೆ. 'ಆರ್ಆರ್ಆರ್' ಹಾಗೂ 'ರಾಧೆ-ಶ್ಯಾಮ್' ಸಿನಿಮಾಗಳು ಸಹ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆ ಇದೆ.

  English summary
  Theater shut in Delhi due to rise in COVID 19 cases. Mumbai theaters may also close soon due to COVID. Jersey movie release postponed, all eyes on RRR and Radhe Shyam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X