For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಅಮರೀಶ್ ಪುರಿ ತಂಗಿ ಮನೆಗೆ ಕನ್ನ ಹಾಕಿದ ಮೈಸೂರಿನ ಖತರ್ನಾಕ್ ಕಳ್ಳಿ

  By ಯಶಸ್ವಿನಿ ಎಂ.ಕೆ
  |

  ಮೈಸೂರು, ಜುಲೈ 31 : ಬಾಲಿವುಡ್ ನ ಖ್ಯಾತ ನಟ ಅಮರೀಶ್ ಪುರಿ ಅವರ ತಂಗಿಯ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ವಜ್ರಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಚ್.ಡಿ. ಕೋಟೆ ಮೂಲದ ಮಹಿಳೆಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

  ಮುಂಬೈನಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಹೆಚ್.ಡಿ.ಕೋಟೆ ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತುಳಸಿ(30)ಯನ್ನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  ಬಳಿಕ ವಿಚಾರಣೆಗೊಳಪಡಿಸಿ, ಗಿರವಿ ಇಟ್ಟಿದ್ದ 29.75 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು, ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಯಿತು.

  ಹೆಚ್.ಡಿ.ಕೋಟೆ ಪಟ್ಟಣದ ವ್ಯಕ್ತಿಯೊಬ್ಬರೊಂದಿಗೆ ವಿವಾಹವಾಗಿದ್ದ ತುಳಸಿ, ಕೆಲ ವರ್ಷಗಳ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ನಡುವೆ ಕೆಲಸಕ್ಕಾಗಿ ಮಂಗಳೂರು ಮೂಲದ ಏಜೆಂಟ್ ನ ಸಂಪರ್ಕಿಸಿದ್ದಳು. 2 ತಿಂಗಳ ಹಿಂದೆ ಆತ, ತುಳಸಿಯನ್ನು ಮುಂಬೈಗೆ ಕರೆದೊಯ್ದು, ಅಮರೀಶ್ ಪುರಿ ತಂಗಿ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದ.

  ಇದ್ದಕ್ಕಿದ್ದಂತೆ ಈಕೆ ಮನೆಯ ಮಾಲೀಕರಿಗೂ ತಿಳಿಸದೆ ಕೆಲಸ ಬಿಟ್ಟಿದ್ದಳು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು ಪರಿಶೀಲಿಸಿದಾಗ ಸುಮಾರು 30.75 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದವು. ನಂತರ ಪೊಲೀಸ್ ಠಾಣೆಗೆ ದೂರು ನೀಡಿ, ಮನೆಗೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ದೂರು ದಾಖಲಿಸಿಕೊಂಡು ಪ್ರಕರಣದ ಜಾಡು ಹಿಡಿದ ಪೊಲೀಸರು ತುಳಸಿಯನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

  English summary
  Theft at Bollywood Actor Amrish Puri sister's house: Maid Tulasi arrested in Mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X