»   » ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ!

ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ!

Posted By:
Subscribe to Filmibeat Kannada

ಇದು ಯಾವುದೋ ಸಿನಿಮಾದ ಶೂಟಿಂಗ್ ಇರಬಹುದು ಅಂತ ಭಾವಿಸಬೇಡಿ. ಇದು 100% ರಿಯಲ್ ಸುದ್ದಿ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಶರ್ಮ ಮನೆಯಲ್ಲಿ ನಿಜವಾಗ್ಲೂ ಕಳ್ಳತನ ಆಗಿದೆ.

ರಜಾ ದಿನಗಳಲ್ಲಿ ಮಸ್ತಿ ಮಾಡಿ, ವಾಪಸ್ ಬಂದ ಮೇಲೆ ಮನೆಯಲ್ಲಿ ದರೋಡೆ ಆಗಿರುವ ವಿಷಯ ಅರ್ಪಿತಾಗೆ ಗೊತ್ತಾಗಿದೆ. ವಿಚಾರ ತಿಳಿದು ಸಲ್ಮಾನ್ ಖಾನ್ ಅಕ್ಷರಶಃ ಶಾಕ್ ಆಗಿದ್ದಾರೆ. [ಪ್ರೀತಿಯ ತಂಗಿಗೆ ಆತ್ಮೀಯ ಉಡುಗೊರೆ ಕೊಟ್ಟ ಸಲ್ಮಾನ್]

ಲಕ್ಷಾಂತರ ರೂಪಾಯಿ ಹಣ, ಒಡವೆ ಹಾಗೂ ಉಡುಪುಗಳು ಕಳ್ಳತನ ಆಗಿರುವುದು ಒಂದೆಡೆ ಆಗಿದ್ದರೆ, ಇನ್ನೊಂದ್ಕಡೆ ಅರ್ಪಿತಾ ಮನೆಯಲ್ಲಿ ಒಂದುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಅಫ್ಸಾ ಕೂಡ ನಾಪತ್ತೆ ಆಗಿದ್ದಾರೆ. ಮುಂದೆ ಓದಿ....

ಅರ್ಪಿತಾ ಖಾನ್ ಶರ್ಮ ಮನೆ ಇರುವುದು ಎಲ್ಲಿ?

ಮುಂಬೈನ ಬಾಂದ್ರಾದಲ್ಲಿ ಇರುವ ಪೆಸಿಫಿಕ್ ಹೈಟ್ಸ್ ಅಪಾರ್ಟ್ ಮೆಂಟ್ ನಲ್ಲಿ ಅರ್ಪಿತಾ ಖಾನ್ ಶರ್ಮ ಮತ್ತು ಪತಿ ಆಯುಷ್ ಶರ್ಮ ವಾಸವಿದ್ದಾರೆ. [ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ]

ಲಕ್ಷ ಲಕ್ಷ ಲೂಟಿ

ಅರ್ಪಿತಾ ಮನೆಯಲ್ಲಿದ್ದ ಬರೋಬ್ಬರಿ 2.25 ಲಕ್ಷ ರೂಪಾಯಿ ಹಣ, ಒಡವೆ, ಡಿಸೈನರ್ ಉಡುಪುಗಳು ಹಾಗು ಅತ್ಯಮೂಲ್ಯ ವಸ್ತುಗಳು ಕಳ್ಳತನ ಆಗಿದೆ.

ಟ್ರಿಪ್ ಮುಗಿಸಿ ಬಂದ್ಮೇಲೆ ಗೊತ್ತಾಗಿದ್ದು!

ರಕ್ಷಾ ಬಂಧನ ಹಬ್ಬ ಆಚರಿಸಿ, ಹಾಲಿಡೇ ಟ್ರಿಪ್ ಮುಗಿಸಿ ಭಾನುವಾರ (ಆಗಸ್ಟ್ 21) ಸಂಜೆ ಅರ್ಪಿತಾ ಹಾಗೂ ಆಯುಷ್ ತಮ್ಮ ಮನೆಗೆ ವಾಪಸ್ ಆದರು. ಆಗ್ಲೇ ಕಳ್ಳತನ ಆಗಿರುವ ವಿಷಯ ಗೊತ್ತಾಗಿದೆ.

ಕೆಲಸದಾಕೆ ಕಾಣುತ್ತಿಲ್ಲ.!

ಅರ್ಪಿತಾ ಮನೆಯಲ್ಲಿ ಒಂದುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಅಫ್ಸಾ ಎನ್ನುವಾಕೆ ಜುಲೈ 30ನೇ ತಾರೀಖಿನಿಂದ ನಾಪತ್ತೆ ಆಗಿದ್ದಾರೆ. ಹೀಗಾಗಿ, ಆಕೆಯ ಮೇಲೆ ಪೊಲೀಸರಿಗೆ ಗುಮಾನಿ ಇದೆ.

ಪ್ರಕರಣ ದಾಖಲಾಗಿದೆ

ಐ.ಪಿ.ಸಿ ಸೆಕ್ಷನ್ 381 ಅಡಿಯಲ್ಲಿ ಖಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

English summary
Cash and valuables worth Rs.3.25 lakh has been stolen from Bollywood Actor Salman Khan's sister Arpita Khan Sharma's apartment. Case has been registered in Khar Police Station, Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada