»   » ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!

Posted By:
Subscribe to Filmibeat Kannada

ಶ್ರೀದೇವಿ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ಶ್ರೀದೇವಿ ನಿಧನರಾದರು ಎಂಬ ಸುದ್ದಿ ಮೊದಲು ಸ್ಫೋಟಗೊಂಡಿತು. ಆದ್ರೆ, ನಿನ್ನೆ ಫೋರೆನ್ಸಿಕ್ ರಿಪೋರ್ಟ್ ಬಂದ್ಮೇಲೆ, ಶ್ರೀದೇವಿ ಮೃತಪಟ್ಟಿರುವುದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಪರಿಣಾಮ ಎಂಬುದು ಸ್ಪಷ್ಟವಾಗಿದೆ.

ಶ್ರೀದೇವಿ ರಕ್ತದ ಮಾದರಿಯಲ್ಲಿ ಆಲ್ಕೋಹಾಲ್ ಅಂಶ ಕೂಡ ಪತ್ತೆಯಾಗಿರುವುದರ ಬಗ್ಗೆ ವರದಿ ಆಗಿದೆ. ಹೀಗಾಗಿ, ಮದ್ಯದ ಅಮಲಿನಲ್ಲಿದ್ದ ಶ್ರೀದೇವಿ, ಆಯಾತಪ್ಪಿ ಬಾತ್ ಟಬ್ ಒಳಗೆ ಬಿದ್ದು, ನೀರಲ್ಲಿ ಮುಳುಗಿ ಸಾವನ್ನಿಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಬಾತ್ ಟಬ್ ನಲ್ಲಿ ಮುಳುಗಿ ಸಾಯಲು ಸಾಧ್ಯವೇ.? ಎಂಬ ಅನುಮಾನ ಸೃಷ್ಟಿಯಾಗಿರುವ ಬೆನ್ನಲ್ಲೇ ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ ಆಗಿದೆ ಎನ್ನಲಾಗಿದೆ. ಮುಂದೆ ಓದಿರಿ...

ಶ್ರೀದೇವಿ ತಲೆಗೆ ಪೆಟ್ಟು ಬಿದ್ದಿತ್ತಾ.?

ಏಶಿಯನೆಟ್ ನ್ಯೂಸ್ ವರದಿ ಮಾಡಿರುವ ಪ್ರಕಾರ, ಶ್ರೀದೇವಿ ತಲೆಗೆ ಪೆಟ್ಟು ಬಿದ್ದಿತ್ತು. ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತುಗಳಿವೆ.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಬಾತ್ ಟಬ್ ಗೆ ಬಿದ್ದು ತಲೆಗೆ ಪೆಟ್ಟು ಬಿತ್ತಾ.?

ನೀರಿನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರುವುದು ಈಗಾಗಲೇ ಫೋರೆನ್ಸಿಕ್ ವರದಿಯಲ್ಲಿ ಸ್ಪಷ್ಟವಾಗಿದೆ. ಬಾತ್ ಟಬ್ ಗೆ ಶ್ರೀದೇವಿ ಬಿದ್ದಾಗ ತಲೆಗೆ ಪೆಟ್ಟಾಗಿ ಪ್ರಾಣ ಕಳೆದುಕೊಂಡ್ರಾ.? ಈ ಬಗ್ಗೆ ಸ್ಪಷ್ಟನೆ ಮಾಹಿತಿ ಇಲ್ಲ.

ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

ಕುಟುಂಬಸ್ಥರ ಕೈಸೇರಿದ ಶ್ರೀದೇವಿ ಪಾರ್ಥೀವ ಶರೀರ

ಕಾನೂನು ಪ್ರಕ್ರಿಯೆ ಹಾಗೂ ದುಬೈ ಪೊಲೀಸರ ತನಿಖೆ ಪೂರ್ಣಗೊಂಡ ಮೇಲೆ ಶ್ರೀದೇವಿ ಪಾರ್ಥೀವ ಶರೀರ ಕುಟುಂಬಸ್ಥರ ಕೈಸೇರಿದೆ. ಸದ್ಯ ಪಾರ್ಥೀವ ಶರೀರ ಸಂರಕ್ಷಿಸುವ ಪ್ರಕ್ರಿಯೆ (ಎಂಬ್ಲೇಮಿಂಗ್)ಗೆ ನಡೆಯುತ್ತಿದೆ. ಅದು ಮುಗಿದ ಬಳಿಕ ಶ್ರೀದೇವಿ ಮೃತದೇಹ ಭಾರತ ತಲುಪಲಿದೆ.

ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

ಕೇಸ್ ಕ್ಲೋಸ್ ಮಾಡಲಾಗಿದ್ಯಾ.?

ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದರೂ, ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಶ್ರೀದೇವಿ ಸಾವಿನ ಕೇಸ್ ಕ್ಲೋಸ್ ಮಾಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಆಕಸ್ಮಿಕವಾಗಿ ಮುಳುಗಿ ಶ್ರೀದೇವಿ ಸಾವನ್ನಪಿದ್ದಾರೆ ಎಂದು ದುಬೈ ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಶ್ರೀದೇವಿ ಸಾವಿನ ಹಿಂದೆ ಅಪರಾಧದ ಸಂಚು ಇಲ್ಲ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಟರ್ ಕೇಸ್ ಕ್ಲೋಸ್ ಮಾಡಿ, ಮೃತದೇಹವನ್ನ ಭಾರತಕ್ಕೆ ರವಾನೆ ಮಾಡಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

English summary
According to Asianet news reports, There is deep wound/injury marks in Sridevi's head.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada