»   » 34 ದಾಟಿದ್ರೂ ಬಾಲಿವುಡ್ ನಟಿಯರು ಏನ್ ಬ್ಯೂಟಿ ಅಂತೀನಿ

34 ದಾಟಿದ್ರೂ ಬಾಲಿವುಡ್ ನಟಿಯರು ಏನ್ ಬ್ಯೂಟಿ ಅಂತೀನಿ

Posted By:
Subscribe to Filmibeat Kannada

ಬಾಲಿವುಡ್ ನಟಿಯರು ವಯಸ್ಸು ಮೂವತ್ತಾದ ಮೇಲೂ,ಸಂಸಾರಸ್ಥರಾದ ಮೇಲೂ ತಮ್ಮ ಆಕರ್ಷಕ ಮೈಮಾಟವನ್ನು ಹೇಗೆ ಉಳಿಸಿ, ಬೆಳೆಸಿಕೊಂಡು ಬರುತ್ತಾರೋ? ಅದಕ್ಕಾಗಿ ಏನು ಶ್ರಮ ಪಡುತ್ತಾರೋ? ತಮ್ಮ ದೇಹದ ಶೇಪ್, ಮುಖದ ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಲು ಅದೇನು ಡಯಟ್ ಪಾಲಿಸುತ್ತಾರೋ?

ಸೆಲೆಬ್ರಿಟಿ ಜಗತ್ತಿನಲ್ಲಿ ಸುಂದರವಾಗಿ ಕಾಣಬೇಕಾಗಿರುವುದು ಅವಶ್ಯಕವಾಗಿರುವುದರಿಂದ ಯಾವ ನಟಿಯರೂ ಈ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳುವುದು ಕಮ್ಮಿ. ದೇಹವನ್ನು ಸುಂದರವಾಗಿ, ಬಳುಕುವ ಬಳ್ಳಿಯ ತರಹ ಇಟ್ಟುಕೊಳ್ಳಲು ಶ್ರಮ ಪಡುತ್ತಲೇ ಇರುತ್ತಾರೆ.

ಇದಕ್ಕಾಗಿ ನಟಿಯರು ತಮ್ಮ ಮೈಯಲ್ಲಿನ ಕೊಬ್ಬನ್ನು ಕೆಜಿಗಟ್ಟಲೆ ಕರಗಿಸಿಕೊಳ್ಳ ಬೇಕಾಗುತ್ತದೆ. ಸಿಕ್ಕಾಪಟ್ಟೆ ಸಿಕ್ಕಿದ್ದನ್ನೆಲ್ಲಾ ತಿನ್ನಂಗಿಲ್ಲ. ಮೈ ಬೆವರುವಂತೆ ಕಸರತ್ತು ಮಾಡಬೇಕು. ಏನೇ ಸೇವಿಸಿದರೂ ಅಳತೆ ಪ್ರಕಾರವೇ ಸೇವಿಸಬೇಕು.

ಅದೆಲ್ಲಾ ಇರಲಿ, ವಯಸ್ಸು ಮೂವತ್ತನಾಲ್ಕು ದಾಟಿದ ಮೇಲೂ ಪೋಷಕ ನಟಿಯಾಗಿ ನಟಿಸದೇ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ಜಗತ್ತಿನ ಪ್ರಮುಖ ನಟಿಯರು ಯಾರ್ಯಾರು? ನೋಡಿ ಸ್ಲೈಡಿನಲ್ಲಿ.

ಐಶ್ವರ್ಯ ರೈ ಬಚ್ಚನ್

ಹುಟ್ಟಿದ್ದು 01.11.1973 ರಂದು, ಅಂದರೆ ಹೆಚ್ಚುಕಮ್ಮಿ ನಮ್ಮ ಕರಾವಳಿದ ಪೊಣ್ಣುಗು ನಲವತ್ತು ವರ್ಷ. ಬಚ್ಚನ್ ಕುಟುಂಬದ ಸೊಸೆಯಾಗಿರುವ ಈಕೆ ಹೆಣ್ಣುಮಗುವಿನ ತಾಯಿ. ಐಶ್ವರ್ಯ ಬ್ಯೂಟಿ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

ಶಿಲ್ಪಾ ಶೆಟ್ಟಿ

ಜೂನ್ 8,1972ರಲ್ಲಿ ಹುಟ್ಟಿದ ಶಿಲ್ಪಾ ಶೆಟ್ಟಿ 2009ರಲ್ಲಿ ರಾಜ್ ಕುಂದ್ರಾರನ್ನು ವರಿಸಿದರು. ಶಿಲ್ಪಾ ಮತ್ತು ಕುಂದ್ರಾ ದಂಪತಿಗಳಿಗೆ ಒಂದು ಮಗುವಿದೆ.

ರಾಣಿ ಮುಖರ್ಜಿ

ಹುಟ್ಟಿದ್ದು 21.03.1978ರಂದು ಅಂದರೆ 35 ವರ್ಷ. ರಾಣಿ ಮುಖರ್ಜಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರವೊಂದು ಇದೇ ವರ್ಷ ಸೆಟ್ಟೇರಲಿದೆ, ಹಾಗೂ ಕೆಲ ಪ್ರಾಜೆಕ್ಟ್ ಗಳು ಪೈಪ್ ಲೈನಿನಲ್ಲಿದೆ.

ಪ್ರೀತಿ ಜಿಂಟಾ

31.01.1975 ಜನಿಸಿದ ಪ್ರೀತಿ ಇದುವರೆಗೆ ಹಿಂದಿ, ತೆಲುಗು, ಪಂಜಾಬಿ ಮತ್ತು ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ಹಿಂದಿ ಚಿತ್ರಗಳು ಕೈಯಲ್ಲಿವೆ.

ಬಿಪಾಸ ಬಸು ಯಾನೆ ಬಿಪ್ಸ್

07.01.1979ರಂದು ನವದೆಹಲಿಯಲ್ಲಿ ಜನಿಸಿದ ಈ ಕೃಷ್ಣಸುಂದರಿ, ಹಾಟ್ ನಟಿಯಾಗಿ ಜನಪ್ರಿಯತೆ ಪಡೆದವಳು. ಜಾನ್ ಅಬ್ರಹಾಂ ಜೊತೆ ಸುತ್ತಾಡುತ್ತಿದ್ದ ಈಕೆಯ ಕೈಯಲ್ಲಿ ಇನ್ನಷ್ಟು ಪ್ರಾಜೆಕ್ಟ್ ಗಳಿವೆ.

ಸುಶ್ಮಿತಾ ಸೇನ್

19.11.1975 ಹೈದರಾಬಾದಿನಲ್ಲಿ ಜನಿಸಿದ ಈಕೆಗೆ 38 ವರ್ಷ. ಹೋದ ವರ್ಷ ಪಾಕ್ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎನ್ನುವ ಸುದ್ದಿಯಿತ್ತು. ಮದುವೆಯಾಗದೆಯೇ ತಾಯಿಯಾಗ ಬೇಕೆಂದು ಬಯಸಿ ಈಕೆ ನೀಡಿದ್ದ ಹೇಳಿಕೆ ಭಾರೀ ಗುಲ್ಲೆಬ್ಬಿಸಿತ್ತು.

ಕಾಜಲ್ ದೇವಗನ್

05.08.1974 (39) ರಂದು ಜನಿಸಿದ ಕಾಜಲ್ ಖ್ಯಾತ ಹಿಂದಿ ನಟಿ ತನುಜಾ ಮಗಳು. ಅಜಯ್ ದೇವಗನ್ ಕೈಹಿಡಿದಿರುವ ಈಕೆಗೆ ಇನ್ನೂ ನಾಯಕಿ ನಟಿಯಾಗಿ ನಟಿಸಲು ಆಫರ್ ಗಳು ಬರುತ್ತಲೇ ಇದೆ. ಚಿತ್ರದಲ್ಲಿ ಗಂಡ ಮತ್ತು ಹೆಂಡತಿ ಒಟ್ಟಾಗಿ ನಟಿಸಿದರೆ ನಿರ್ಮಾಪಕರಿಗೆ ಸಂಭಾವನೆಯಲ್ಲಿ ಸ್ಪೆಷಲ್ ಡಿಸ್ಕೌಂಟ್ ದಂಪತಿಗಳು ನೀಡುತ್ತಾರೆ ಎನ್ನುವ ಸುದ್ದಿಯೂ ಇದೆ.

English summary
Bollywood celebrities who crossed age of 34 and still working for movie. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada