For Quick Alerts
  ALLOW NOTIFICATIONS  
  For Daily Alerts

  ಭಟ್ಟರ ಹುಡ್ಗಿಗೆ ಕೆಟ್ಟವನಿಂದ ಕಾಲ್

  By Mahesh
  |

  ಬಾಲಿವುಡ್ ನ ಬಿಂದಾಸ್ ಅಪ್ಪ ಮಗಳಿಗೆ ಯಾರೋ ಅನಾಮಿಕನೊಬ್ಬ ಸಕತ್ ಕಾಟ ಕೊಡುತ್ತಿದ್ದಾನಂತೆ. ಒಂದು ಕಾಲದ ನಟಿ, ಚಿತ್ರ ನಿರ್ಮಾಪಕಿ, ನಿರ್ದೇಶಕಿ ಪೂಜಾ ಭಟ್ ಅನಾಮಿಕನೊಬ್ಬನ ಕುಚೋದ್ಯದ ಕರೆಗೆ ಸಿಲುಕಿದ್ದಾರೆ.

  ಅಯ್ಯೋ ಅಷ್ಟೇನಾ ಇದು ಮುಂಬೈನಲ್ಲಿ ಮಾಮೂಲಿ ಬಿಡಿ ಎನ್ನಬಹುದಾದರೂ ಪೂಜಾ ಕಥೆ ಸ್ವಾರಸ್ಯವಾಗಿದೆ. ಹೇಳಿ ಕೇಳಿ ಹೈ ಫೈ ಲೈಫ್ ಬಯಸುವ ಅಪ್ಪ ಮಗಳು ನೇರಾನೇರ ಕುಳಿತು ಈ ಬೆದರಿಕೆ ಕರೆ ಬಗ್ಗೆ ಮಾತಾನಾಡಿಕೊಂಡಿದ್ದಾರೆ ಎಂಬ ಕಲ್ಪನೆ ಹೊಂದಿದ್ದರೆ ಸಾರಿ ..

  ಅಪ್ಪ ಮಗಳು ಸಾಮಾಜಿಕ ಜಾಲ ತಾಣದಲ್ಲಿ ಟ್ವಿಟ್ಟರ್ ನಲ್ಲಿ ಇಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ.

  Pooja Bhatt ‏@PoojaB1972 : The plot thickens! My father got a call from the same no- +918308984111 at 12.35 am. Who could this be? Someone who wants to shut us up?

  Mahesh Bhatt ‏@MaheshNBhatt : @PoojaB1972 We shall talk to the Police Commissioner in the morning. Zero tolerance to any form intimidation!

  ಕೊನೆಗೆ ಬುಧವಾರ(ಜ.9) ರಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

  Pooja Bhatt ‏@PoojaB1972 : FIR filed. Bandra police station has been extremely efficient & courteous in every manner. Certain they will crack this faster than we know.

  ನೆನ್ನೆ ರಾತ್ರಿ ಅನಾಮಿಕನ ಕರೆ ಬಂದ ತಕ್ಷಣ ನಾನು 100ಗೆ ಡಯಲ್ ಮಾಡಿದೆ. ಯಾವುದೋ ಗಡಸು ದನಿ ಅತ್ತ ಕಡೆಯಿಂದ ಫೋನ್ ಕಾಲ್ ರಿಸೀವ್ ಮಾಡಿತು. ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ಹೇಳಿತು.

  ಮಧ್ಯ ರಾತ್ರಿ 1 ಗಂಟೆಗೆ ಪೊಲೀಸ್ ಠಾಣೆಗೆ ಒಬ್ಬಳೇ ಹೇಗೆ ಹೋಗುವುದು ಎಂದು ಯೋಚಿಸಿ, ಸುಮ್ಮನಾದೆ. ಮರುದಿನ ಅಪ್ಪನಿಗೂ ಅದೇ ವ್ಯಕ್ತಿ ಅದೇ ನಂಬರ್ (ಮೇಲ್ಕಂಡ ನಂಬರ್) ನಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಥೂ ಅವನ ಭಾಷೆ ಬರೀ ಹೊಲಸು.

  ಇದೊಂದು ಸಂಘಟಿತ ದುಷ್ಕರ್ಮಿಗಳ ಕೃತ್ಯ ಇರುವ ಶಂಕೆ ಇದೆ. ಸದ್ಯ ಪೊಲೀಸರು ದೂರು ಸ್ವೀಕರಿಸಿದ ಸಮಾಧಾನ ಇದೆ. ಮತ್ತೆ ನನಗೆ ಕರೆ ಬಂದಿಲ್ಲ. ನೋಡೋಣ ಕೇಸು ಬೇಗ ಸಾಲ್ವ್ ಆಗಲಿ ಎಂದು ಪೂಜಾ ಹೇಳಿಕೊಂಡಿದ್ದಾರೆ.

  English summary
  Filmmaker Pooja Bhatt files complaint today (Jan.9) in Bandra police station against a threating call by a miscreant. Pooja's father, filmmaker Mahesh Bhatt, shared that he too had "received a call from the same number at 12.35 a.m. (Jan 9)".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X