For Quick Alerts
  ALLOW NOTIFICATIONS  
  For Daily Alerts

  ಕುಡಿದ ಮತ್ತಿನಲ್ಲಿ ಗರ್ಲ್ ಫ್ರೆಂಡ್ ಕುತ್ತಿಗೆಗೆ 'ಸಂಜು' ಟಾಯ್ಲೆಟ್ ಸೀಟ್ ಹಾಕಿದ್ದು ಸತ್ಯ ಕಣ್ರೀ.!

  By Harshitha
  |

  'ಸಂಜು'... ಬಾಲಿವುಡ್ ನಟ ಸಂಜಯ್ ದತ್ ರವರ ಜೀವನ ಚರಿತ್ರೆ ಆಧಾರಿತ ಸಿನಿಮಾ. ಹಾಗಂದ ಮಾತ್ರಕ್ಕೆ ಚಿತ್ರದಲ್ಲಿ ಇರುವ ಪ್ರತಿಯೊಂದು ಸೀನ್ ಕೂಡ ಸತ್ಯ ಘಟನೆ ಆಗಿರಬೇಕು ಅಂತೇನಿಲ್ಲವಲ್ಲ... ಎಷ್ಟೋ ಸನ್ನಿವೇಶಗಳು ಸಿನಿಮಾಗಾಗಿ ಸೃಷ್ಟಿಸಿರಬಹುದು, ವೈಭವೀಕರಿಸಿರಬಹುದು... ಕಮರ್ಶಿಯಲ್ ಅಂಶಗಳಿಗಾಗಿ ಕೆಲವೊಂದನ್ನು ತುರುಕಿರಬಹುದು ಅಂತೆಲ್ಲ ಜನ ಮಾತನಾಡಿಕೊಳ್ಳಬಹುದು.

  ಆದ್ರೆ, ಸಂಜಯ್ ದತ್ ನಿಜ ಜೀವನದಲ್ಲಿ ಏನೇನೆಲ್ಲಾ ಆಗಿದ್ಯೋ, ಅದನ್ನೆಲ್ಲ ಯಥಾವತ್ತಾಗಿ ತೆರೆಗೆ ತರಲು ನಿರ್ದೇಶಕ ರಾಜಕುಮಾರ್ ಹಿರಾನಿ ಶ್ರಮ ಪಟ್ಟಿದ್ದಾರೆ. ಗರ್ಲ್ ಫ್ರೆಂಡ್ ಕುತ್ತಿಗೆಗೆ 'ಮಂಗಳ ಸೂತ್ರ' ಅಂತ ಟಾಯ್ಲೆಟ್ ಸೀಟ್ ಹಾಕುವ ದೃಶ್ಯ ಕೂಡ ಸಂಜಯ್ ದತ್ ಜೀವನದಲ್ಲಿ ನಡೆದ ಘಟನೆಯೇ ಹೊರತು ಕಪೋಲ ಕಲ್ಪಿತ ಅಲ್ಲ ಅನ್ನೋದು ವಾಸ್ತವ.!

  ಹೌದು, ಗೆಳತಿಯ ಕುತ್ತಿಗೆಗೆ 'ಸಂಜು' ಟಾಯ್ಲೆಟ್ ಸೀಟ್ ತೊಡಿಸುವ ದೃಶ್ಯ ನೈಜ ಘಟನೆ ಎಂದು ಸ್ವತಃ ಸೋನಂ ಕಪೂರ್ ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಮುಂದೆ ಓದಿರಿ...

  'ಸಂಜು' ಚಿತ್ರದಲ್ಲಿ ಸೋನಂ ಕಪೂರ್ ಯಾರು.?

  'ಸಂಜು' ಚಿತ್ರದಲ್ಲಿ ಸೋನಂ ಕಪೂರ್ ಯಾರು.?

  ''ಸಂಜು' ಚಿತ್ರದಲ್ಲಿ ಸೋನಂ ಕಪೂರ್ ಯಾರು.?'' ಈ ಪ್ರಶ್ನೆಗೆ ಉತ್ತರ ಕೊಡಲು ನಟಿ ಸೋನಂ ಕಪೂರ್ ನಿರಾಕರಿಸಿದರು. ಯಾಕೆ ಅಂದ್ರೆ, ''ನಾನು ಸಿನಿಮಾದ ಯಾವುದೇ ಗುಟ್ಟನ್ನು ಬಿಟ್ಟುಕೊಡುವುದಿಲ್ಲ ಎಂದು ಅಗ್ರೀಮೆಂಟ್ ಗೆ ಸಹಿ ಹಾಕಿರುವೆ. ಹೀಗಾಗಿ, ನನ್ನ ಪಾತ್ರದ ಬಗ್ಗೆ ನಾನು ಹೆಚ್ಚೇನೂ ಹೇಳಲಾರೆ. ಆದ್ರೆ, ಸಿನಿಮಾದಲ್ಲಿ ನಾನು ಸಂಜಯ್ ದತ್ ಗರ್ಲ್ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದೇನೆ'' ಎಂದು ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸೋನಂ ಕಪೂರ್ ಹೇಳಿದ್ದಾರೆ.

  ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.! ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!

  ಟಾಯ್ಲೆಟ್ ಸೀಟ್ ಸನ್ನಿವೇಶದ ಬಗ್ಗೆ...

  ಟಾಯ್ಲೆಟ್ ಸೀಟ್ ಸನ್ನಿವೇಶದ ಬಗ್ಗೆ...

  ''ಸಿನಿಮಾದ ಟ್ರೈಲರ್ ನಲ್ಲಿ ಇರುವ ಟಾಯ್ಲೆಟ್ ಸೀಟ್ ದೃಶ್ಯ (ಕುಡಿದ ಮತ್ತಿನಲ್ಲಿ ಸಂಜು ತನ್ನ ಗರ್ಲ್ ಫ್ರೆಂಡ್ ಕುತ್ತಿಗೆಗೆ ಟಾಯ್ಲೆಟ್ ಸೀಟ್ ಹಾಕುವ ಸನ್ನಿವೇಶ) ಕಲ್ಪನೆ ಅಲ್ಲ. ಅದು ನಿಜವಾಗಿಯೂ ನಡೆದಿದೆ'' ಅಂತ ಸೋನಂ ಕಪೂರ್ ಖಚಿತ ಪಡಿಸಿದ್ದಾರೆ.

  ಹೆಣ್ಮಕ್ಕಳಿಗೆ ಸುಳ್ಳು ಹೇಳಿ ಸಂಜಯ್ ದತ್ ಹೇಗೆಲ್ಲ ಮೋಸ ಮಾಡ್ತಿದ್ರು ಗೊತ್ತಾ.?ಹೆಣ್ಮಕ್ಕಳಿಗೆ ಸುಳ್ಳು ಹೇಳಿ ಸಂಜಯ್ ದತ್ ಹೇಗೆಲ್ಲ ಮೋಸ ಮಾಡ್ತಿದ್ರು ಗೊತ್ತಾ.?

  'ಸಾವರಿಯಾ' ಬಳಿಕ ಸೋನಂ-ರಣ್ಬೀರ್

  'ಸಾವರಿಯಾ' ಬಳಿಕ ಸೋನಂ-ರಣ್ಬೀರ್

  ''ಸಾವರಿಯಾ' ಚಿತ್ರದಲ್ಲಿ ನಾನು ಹಾಗೂ ರಣ್ಬೀರ್ ಒಟ್ಟಿಗೆ ಅಭಿನಯಿಸಿದ್ವಿ. ಅದಾದ್ಮೇಲೆ, ನಾವಿಬ್ಬರೂ ಸ್ಕ್ರೀನ್ ಶೇರ್ ಮಾಡಿರುವುದು 'ಸಂಜು' ಚಿತ್ರದಲ್ಲಿಯೇ'' - ಸೋನಂ ಕಪೂರ್, ನಟಿ

  ವಿವಾದಕ್ಕೆ ಕಾರಣವಾಯ್ತು 'ಸಂಜು' ಚಿತ್ರದಲ್ಲಿನ ಟಾಯ್ಲೆಟ್ ಸೀನ್.ವಿವಾದಕ್ಕೆ ಕಾರಣವಾಯ್ತು 'ಸಂಜು' ಚಿತ್ರದಲ್ಲಿನ ಟಾಯ್ಲೆಟ್ ಸೀನ್.

  ಇದೇ ವಾರ 'ಸಂಜು' ಬಿಡುಗಡೆ

  ಇದೇ ವಾರ 'ಸಂಜು' ಬಿಡುಗಡೆ

  ಸಂಜಯ್ ದತ್ ಜೀವನಾಧಾರಿತ 'ಸಂಜು' ಸಿನಿಮಾ ಇದೇ ವಾರ (ಜೂನ್ 29) ಬಿಡುಗಡೆ ಆಗಲಿದೆ. ಚಿತ್ರದಲ್ಲಿ ರಣ್ಬೀರ್ ಕಪೂರ್, ಸೋನಂ ಕಪೂರ್, ದಿಯಾ ಮಿರ್ಜಾ ಸೇರಿದಂತೆ ದೊಡ್ಡ ತಾರಾಬಳಗ ಇದೆ.

  English summary
  Bollywood Actress Sonam Kapoor revealed that the Toilet scene in 'Sanju' Film isn't a fiction one but actually happened. ಕುಡಿದ ಮತ್ತಿನಲ್ಲಿ ಗರ್ಲ್ ಫ್ರೆಂಡ್ ಕುತ್ತಿಗೆಗೆ 'ಸಂಜು' ಟಾಯ್ಲೆಟ್ ಸೀಟ್ ಹಾಕಿದ್ದು ಸತ್ಯ ಕಣ್ರೀ.!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X