»   » ಬಾಲಿವುಡ್ ಜಗತ್ತಿನ 10 ಬಿಕಿನಿ ಸುಂದರಿಯರು

ಬಾಲಿವುಡ್ ಜಗತ್ತಿನ 10 ಬಿಕಿನಿ ಸುಂದರಿಯರು

Posted By:
Subscribe to Filmibeat Kannada

ಹಿಂದಿ ಚಿತ್ರರಂಗದಲ್ಲಿ ಬಿಕಿನಿ ಪ್ರದರ್ಶನ ಹೆಚ್ಚಾಗಿ ಮ್ಯಾಗಜೀನ್ ಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವಿತ್ತು. ಆದರೆ ಈಗ ಬಿಡುಗಡೆಯಾಗುತ್ತಿರುವ ಎಲ್ಲಾ ಚಿತ್ರಗಳಲ್ಲಿ ಬಿಕಿನಿ ಪ್ರದರ್ಶನ ಕಾಣಸಿಗುತ್ತದೆ.

ನಟನೆಗಿಂತ, ಮೈಮಾಟ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡುವ ನಾಯಕಿಯರುಗಳಿಗೆ ಬಾಲಿವುಡ್ ನಲ್ಲಿ ಬರವಿಲ್ಲ. ಧೂಮ್ ಚಿತ್ರದಲ್ಲಿ ನಾಯಕಿಯರು ಬಿಕಿನಿಯಲ್ಲಿ ಕಾಣಿಸಿಕೊಂಡ ನಂತರ ಆ ಟ್ರೆಂಡ್ ಈಗ ಎಲ್ಲಾ ಚಿತ್ರಗಳಲ್ಲೂ ಪಸರಿಸುತ್ತಿದೆ.

ಬಿಕಿನಿಯಲ್ಲಿ ಇನ್ನಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನಾಯಕಿಯರು ಡಯಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತುಂಡು ಬಟ್ಟೆಯಲ್ಲಿ ಹಿರೋಯಿನ್ ಗಳು ಪಡ್ಡೆಗಳಿಗೆ ಇನ್ನಷ್ಟು ಕಿಚ್ಚು ಹಚ್ಚಿಸುತ್ತಿದ್ದಾರೆ. (ಬಿಕಿನಿ ಕಂಡುಹಿಡಿದ ಮಹಾನುಭಾವನಿಗೆ ಅರ್ಪಣೆ)

ಸದ್ಯ, ಹಿಂದಿ ಚಿತ್ರರಂಗದ ಟಾಪ್ ಟೆನ್ ಬಿಕಿನಿ ಬೇಬ್ಸ್ ಗಳ ಒಂದು ಸಣ್ಣ ಝಲಕ್ ಸ್ಲೈಡಿನಲ್ಲಿ...

ದೀಪಿಕಾ ಪಡುಕೋಣೆ

ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ನಟನೆಗೂ ಸೈ, ಬಿಕಿನಿಗೂ ಸೈ. ಮಾಡೆಲಿಂಗ್ ಜಗತ್ತಿನ ದೀಪಿಕಾ, ಐಶ್ವರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಧುಮುಕಿದರು. ರೇಸ್ 2 ಮತ್ತು ಕಾಕ್ ಟೈಲ್ ಚಿತ್ರದಲ್ಲಿ ಬಿಕನಿ ಡ್ರೆಸ್ ನಲ್ಲಿ ದೀಪಿಕಾ ಗ್ಲಾಮರಸ್ ಆಗಿ ಕಾಣಿಸಿದ್ದರು.

ಪ್ರಿಯಾಂಕ ಚೋಪ್ರಾ

ಐತ್ರಾಜ್ ಚಿತ್ರದಲ್ಲಿ ಪ್ರಿಯಾಂಕ ಮೊದಲಿಗೆ ಈ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಳೆಯದಾದರೂ ಪ್ರಿಯಾಂಕ ಇತ್ತೀಚಿನ ಚಿತ್ರಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸನ್ನಿ ಲಿಯೋನ್

ಸನ್ನಿ ಲಿಯೋನ್ ಮತ್ತು ಬಿಕಿನಿ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ. ಈಕೆ ನಟಿಸುವ ಎಲ್ಲಾ ಚಿತ್ರಗಳಲ್ಲಿ ಬಿಕಿನಿ ಈಸ್ ಕಂಪಲ್ಸರಿ.

ಕತ್ರಿನಾ ಕೈಫ್

ಬೂಮ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಕತ್ರಿನಾ ಆ ಚಿತ್ರದಲ್ಲೇ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ರಣಬೀರ್ ಜೊತೆ ಸ್ಪೈನ್ ಬೀಚಿನಲ್ಲಿ ಕತ್ರಿನಾ ಟು ಪೀಸ್ ನಲ್ಲಿ ಕಾಣಿಸಿಕೊಂಡಿದ್ದು ಲೋಕವ್ಯಾಪಿ ಜನಪ್ರಿಯತೆ ಪಡೆದಿತ್ತು.

ಕಂಗನಾ ರಾನತ್

ನಟನೆಯ ವಿಚಾರದಲ್ಲಿ ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದೆ ಕಂಗನಾ. ಇತ್ತೀಚಿಗೆ ಬಿಡುಗಡೆಯಾದ ಕ್ವೀನ್ ಚಿತ್ರದಲ್ಲಿನ ಈಕೆಯ ನಟನೆ ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು.

ಅನುಕ್ಷಾ ಶರ್ಮಾ

ಬಾಲಿವುಡ್ ರಂಗದ ಮತ್ತೋರ್ವ ಗ್ಲಾಮರಸ್ ನಟಿ ಅನುಕ್ಷಾ. ಅಯೋಧ್ಯಯಲ್ಲಿ ಹುಟ್ಟಿದ ಅನುಕ್ಷಾ ಬೆಳೆದಿದ್ದು ಬೆಂಗಳೂರಿನಲ್ಲಿ. ಯಶ್ ರಾಜ್ ಫಿಲಂಸ್ ಬ್ಯಾನರಿನಲ್ಲಿ ಸತತ ಮೂರು ಚಿತ್ರ ನಟಿಸಿದ್ದ ಅನುಕ್ಷಾ ಅವರ ಮೂರು ಚಿತ್ರಗಳು ಈಗ ಬಿಡುಗಡೆಗೆ ಸಿದ್ದವಾಗಿದೆ.

ಸೋನಂ ಕಪೂರ್

ಮ್ಯಾಗಜೀನ್ ಗಳಿಗಾಗಿ ಬಿಕಿನಿ ಬಟ್ಟೆ ಪ್ರದರ್ಶಿಸುತ್ತಿದ್ದ ಸೋನಂ, ತನ್ನ ಇತ್ತೀಚಿನ ಬೇವಕೂಫಿಯಾಂ ಚಿತ್ರದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

ಇಲಿಯಾನ ಡಿಕ್ರುಜ್

ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದ ಇಲಿಯಾನ, ಕನ್ನಡದ ಹುಡುಗ ಹುಡುಗಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬರ್ಫಿ ಚಿತ್ರದಲ್ಲಿ ಇಲಿಯಾನ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

ಪೂನಂ ಪಾಂಡೆ

ಬಿಕಿನಿಯಲ್ಲಿ ಆರಾಮಾಗಿರುತ್ತೇನೆಂದು ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದ ಪೂನಂ, ನಟಿಸುವ ಎಲ್ಲಾ ಚಿತ್ರಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಶೆರ್ಲಿನ್ ಚೋಪ್ರಾ

ಪ್ಲೇಬಾಯ್ ಮ್ಯಾಗಜೀನ್ ನಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದ ಶೆರ್ಲಿನ್, ಕಾಮಸೂತ್ರ ಚಿತ್ರದಲ್ಲಿ ನಟಿಸಿದ್ದರು. ಬಿಕಿನಿ ತೊಡುವುದರಲ್ಲಿ ಈಕೆ ಧಾರಾಳ.

English summary
Top ten hottest Bollywood Bikini babes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada