For Quick Alerts
  ALLOW NOTIFICATIONS  
  For Daily Alerts

  'ಬಾಲಿಕಾ ವಧು' ನಟ-ನಟಿ ದುರಂತ ಅಂತ್ಯ: ಸಿದ್ಧಾರ್ಥ್‌ಗೂ ಮುಂಚೆ ಪ್ರತ್ಯೂಷ ಸಾವು

  |

  ಸಿದ್ಧಾರ್ಥ್ ಶುಕ್ಲಾ ಅಭಿಮಾನಿಗಳಿಗೆ ಸೆಪ್ಟೆಂಬರ್ 2 ರಂದು ಬೆಳಗ್ಗೆ ಎದ್ದು ನೋಡಿದರೆ ಭಾರಿ ಆಘಾತ ಸುದ್ದಿ ಕಾದಿತ್ತು. ಸಿದ್ಧಾರ್ಥ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. 40 ವರ್ಷದ ಯುವ ನಟ ಸಿದ್ಧಾರ್ಥ್ ಹೃದಯಾಘಾತಕ್ಕೆ ಬಲಿಯಾದರು.

  ಸಿದ್ಧಾರ್ಥ್ ಶುಕ್ಲಾ ಎಂದೊಡನೆ ಕೆಲವರಿಗೆ 'ಬಾಲಿಕಾ ವಧು' ಧಾರಾವಾಹಿ ನೆನಪಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದ ಇಬ್ಬರು ಪ್ರಮುಖ ಕಲಾವಿದರು ದುರಂತ ಸಾವು ಕಂಡರು ಎನ್ನುವುದು ಗಮನಾರ್ಹ.

  'ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?'ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?

  ಹೌದು, ಬಾಲಿಕಾ ವಧು ಧಾರಾವಾಹಿಯಲ್ಲಿ ಶಿವ-ಆನಂದಿ ಜೋಡಿ ಅಚ್ಚುಮೆಚ್ಚು. ಶಿವ ಪಾತ್ರದಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸಿದ್ದರೆ, ಆನಂದಿಯಾಗಿ ಪ್ರತ್ಯೂಷಾ ಬ್ಯಾನರ್ಜಿ ಅಭಿನಯಿಸುತ್ತಿದ್ದಾರೆ. ಆದರೆ, ಪ್ರತ್ಯೂಷಾ 2016ರಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರು.

  2016 ಏಪ್ರಿಲ್ 1 ರಂದು ಸಂಜೆ 5 ಗಂಟೆಗೆ ಸಮಯಕ್ಕೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಗೋರೆಗಾಂವ್ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂಬ ವಿಚಾರ ಹೊರಬಿತ್ತು. ಕೂಡಲೇ ಅವರನ್ನು ಆಕೆಯ ಬಾಯ್‌ಫ್ರೆಂಡ್ ರಾಹುಲ್ ರಾಜ್ ಸಿಂಗ್ ಅಂಧೇರಿಯ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ದೃಢಪಡಿಸಿದರು.

  ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಶುಕ್ಲಾ ಹಳೆಯ ಫೋಟೋ ವೈರಲ್ಸುಶಾಂತ್ ಸಿಂಗ್ ಮತ್ತು ಸಿದ್ಧಾರ್ಥ್ ಶುಕ್ಲಾ ಹಳೆಯ ಫೋಟೋ ವೈರಲ್

  ಆತ್ಮಹತ್ಯೆ ಎಂದು ಹೇಳಲು ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಬಳಿಕ, ನಟಿಯ ತಂದೆ-ತಾಯಿ ಪ್ರತ್ಯೂಷಾ ಬ್ಯಾನರ್ಜಿಯ ಬಾಯ್‌ಫ್ರೆಂಡ್‌ ರಾಹುಲ್ ರಾಜ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದರು. ತನ್ನ ಮಗಳಿಗೆ ಹಿಂಸೆ ನೀಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆ ಎಂದು ದೂರು ದಾಖಲಿಸಿದರು. ಅಂದ್ಹಾಗೆ, 24 ವರ್ಷದ ನಟಿ ಪ್ರತ್ಯೂಷಾ ಬಾಯ್‌ಫ್ರೆಂಡ್ ರಾಹುಲ್ ಜೊತೆ ಲೀವ್-ಇನ್-ಸಂಬಂಧದಲ್ಲಿದ್ದರು.

  ಹಿಂದಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿಕೊಂಡಿದ್ದ ಬಾಲಿಕಾ ವಧು ಧಾರಾವಾಹಿಯ ಇಬ್ಬರು ಪ್ರಮುಖ ಕಲಾವಿದರು ಬದುಕು ಈ ರೀತಿ ದುರಂತವಾಗಿರುವುದು ಈಗ ಚರ್ಚೆಗೆ ಕಾರಣವಾಗಿದೆ.

  Tragic death of Balika Vadhu Stars Sidharth Shukla and Pratyusha Banerjee

  ಪ್ರತ್ಯೂಷಾ ಬ್ಯಾನರ್ಜಿ 'ಬಾಲಿಕಾ ವಧು' ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಆರಂಭಿಸಿದರೆ, ಸಿದ್ಧಾರ್ಥ್ ಶುಕ್ಲಾ ಅವರು 'ಬಾಬುಲ್ ಕಾ ಆಂಗನ್ ಚೂಟೇ ನಾ' ಮೂಲಕ ಹಿಂದಿ ಕಿರುತೆರೆ ಪರಿಚಯ ಆದರು. ಆದಾಗ್ಯೂ, ಬಾಲಿಕಾ ವಧು ಮೂಲಕ ಈ ಜೋಡಿ ಹೆಚ್ಚು ಜನಪ್ರಿಯತೆ ಕಂಡಿದ್ದರು.

  Sidharth Shukla Death; ಸಿದ್ಧಾರ್ಥ್ ಶುಕ್ಲಾ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?Sidharth Shukla Death; ಸಿದ್ಧಾರ್ಥ್ ಶುಕ್ಲಾ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?

  ಬಿಗ್ ಬಾಸ್ 13ನೇ ಆವೃತ್ತಿಯಲ್ಲಿ ಸಿದ್ಧಾರ್ಥ್ ಶುಕ್ಲಾ ಮತ್ತು ಆತನ ಗೆಳತಿ ಶೆಹನ್‌ಜಿ ಗಿಲ್ಲ ಭಾಗವಹಿಸಿದ್ದರು. ಈ ವೇಳೆ ಬಾಲಿಕಾ ವಧು ಸಹ ನಟಿ ಪ್ರತ್ಯೂಷಾ ಬಗ್ಗೆ ನೆನೆದು ಸಿದ್ಧಾರ್ಥ್ ಭಾವುಕರಾಗಿದ್ದ ಘಟನೆಯೂ ನಡೆದಿತ್ತು.

  English summary
  Tragic death of 'Balika Vadhu' Stars Sidharth Shukla and Pratyusha Banerjee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X