ಗೋಣಿ ಚೀಲ ಹರಿದು ಲಂಗ, ಅಂಗಿ ಮಾಡಿದ ಉರ್ಫಿ: ಸೃಜನಶೀಲತೆಗೆ ಭಾರಿ ಮೆಚ್ಚುಗೆ!

ಉರ್ಫಿ ಜಾವೇದ್, ಈಕೆ ಹೆಸರು ಬಂದರೆ ಸಾಕು, ಅಬ್ಬಬ್ಬ ಉರ್ಫಿ ಈ ಬಾರಿ ಹೇಗೆ ಕಾಣಿಸಿಕೊಳ್ಳುತ್ತಿದ್ದಾಳೆ, ಯಾವ ಅವತಾರದಲ್ಲಿ ಬರಲಿದ್ದಾಳೆ, ಈ ಬಾರಿ ಅದೇನು ಎಡವಟ್ಟು ಮಾಡುತ್ತಾಳೆ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಅಷ್ಟರ ಮಟ್ಟಿ ಉರ್ಫಿ ಜಾವೇದ್ ಹೆಸರುವಾಸಿ. ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದೇ ಹೆಚ್ಚು ಸುದ್ದಿ ಆಗುತ್ತಾಳೆ.

ದಿನ ಬೆಳಗಾದರೆ ಸಾಕು ಉರ್ಫಿಯ ಹಿಂದೆ ಕ್ಯಾಮೆರಾಗಳು ಸಾಲು ಗಟ್ಟಿ ನಿಲ್ಲುತ್ತವೆ. ನಿತ್ಯವೂ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸ, ಹೊಸದಾಗಿ ಕಾಸ್ಟ್ಯೂಂಗಳನ್ನು ಪ್ರಯೋಗ ಮಾಡುತ್ತಾಳೆ. ಹಾಗಾಗಿ ಆಕೆಯ ಅವತಾರ ನೋಡಲೆಂದೇ ಹಲವು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ.

ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಈ ಬಾರಿಯೂ ತಮ್ಮ ನಯಾ ಅವತಾರದೊಂದಿಗೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲಾ ಟ್ರೋಲ್‌ಗೂ ಕೂಡ ಉರ್ಫಿ ತುತ್ತಾಗಿದ್ದಾರೆ.

ಗೋಣಿ ಬಟ್ಟೆ ತೊಟ್ಟ ಉರ್ಫಿ!

ದಿನೆ ದಿನೇ ಮತ್ತಷ್ಟು ವಿಚಿತ್ರವಾಗಿ ಕಾಣಿಕೊಳ್ಳುತ್ತಾರೆ ಉರ್ಫಿ. ಈ ಬಾರಿ ಗೋಣಿ ಚೀಲದ ಬಟ್ಟೆ ತೊಟ್ಟಿದ್ದಾರೆ. ಹಾಗಂತ ಉರ್ಫಿ ಗೋಣಿಚೀಲದ ಮಾದರಿಯಲ್ಲಿರುವ ಬಟ್ಟೆಯನ್ನು ಧರಿಸಿಲ್ಲ. ಬದಲಿಗೆ ಗೋಣಿ ಚೀಲವನ್ನೇ ಹರಿದು ಕ್ರಾಪ್ ಟಾಪ್ ಮತ್ತು ಸ್ಕ್ರರ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಉರ್ಫಿ ಗಾಜಿನ ಡ್ರೆಸ್ ಅಚ್ಚರಿ ಮೂಡಿಸಿತ್ತು!

ಉರ್ಫಿ ಗಾಜಿನ ಡ್ರೆಸ್ ಅಚ್ಚರಿ ಮೂಡಿಸಿತ್ತು!

ಇನ್ನು ಇತ್ತೀಚೆಗೆ ಉರ್ಫಿ ವಿಚಿತ್ರವಾದ ಡ್ರೆಟ್ ತೊಟ್ಟಿದ್ದರು. ಈ ಡ್ರೆಸ್ ಗಾಜಿನಂತೆ ಹೊಳೆಯುತ್ತಾ ಇತ್ತು. ಇದೇನೂ ಹೊಸ ಮಾದರಿ ಮೆಟಿರಿಯಲ್ ಅಂದುಕೊಂಡವರಿಗೆ ಉರ್ಫಿ ಶಾಕ್ ಕೊಟ್ಟರು. ತನ್ನ ಮೈ ಮೇಲೆ ಇರುವು ಗಾಜು ಎಂದು ಹೇಳಿಕೊಂಡಿದ್ದಾರೆ. ಕೆಜಿ ಗಟ್ಟಲೆ ತೂಕದ ಗ್ಲಾಸ್ ಪೀಸ್‌ಗಳನ್ನು ಮೈ ಮೇಲೆ ಹಾಕಿಕೊಂಡು ಉರ್ಫಿ ಪೋಸ್ ಕೊಟ್ಟಿದ್ದರು.

ಬಟ್ಟೆ ಬಿಟ್ಟು ಪೇಂಟಿಂಗ್ ಮಾಡಿಸಿಕೊಂಡ ಉರ್ಫಿ!

ಪ್ರತಿ ಭಾರಿ ಡಿಫ್ರೆಂಟ್​ ಆಗಿ ಕಾಣಿಸಿಕೊಳ್ಳುವ ಉರ್ಫಿ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬಿಳಿ ಬಣ್ಣದ ಬ್ಲೇಸರ್ ಮತ್ತು ಪ್ಯಾಂಟ್ ತೊಟ್ಟಿದ್ದಾರೆ ಉರ್ಫಿ. ಆದರೆ ಬ್ಲೇಸರ್ ಒಳಗೆ ಶರ್ಟ್ ಇಲ್ಲ, ಟೀ ಸರ್ಟ್ ಇಲ್ಲ, ಏನೂ ಇಲ್ಲ. ಬದಲಿಗೆ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ತಮ್ಮ ದೇಹದ ಮೇಲೆ ಚೆರ್ರಿ ಬ್ಲಾಸಮ್ ಚಿತ್ರ ಬಿಡಿಸಿಕೊಂಡಿದ್ದಾರೆ. ಗಿಡದ ಬಳ್ಳಿಯಲ್ಲಿ ಹೂ ಇರುವ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಅದೇ ರೀತಿ ತಮ್ಮ ಕೈಗಳ ಮೇಲೂ ಚಿತ್ರಗಳನ್ನು ಬಿಡಿಸಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

ಹೈಹೀಲ್ಸ್ ಧರಿಸಿ ನಿಲ್ಲಲ್ಲು ಪರದಾಡಿದ್ದ ಉರ್ಫಿ!

ಉರ್ಫಿ ಎಲ್ಲಾರಂತೆ ಅಲ್ಲ, ಆಕೆ ಯಾವುದನ್ನು ಮರೆಮಾಚುವುದಿಲ್ಲ. ಹಾಗೆ ಆಕೆ ಕ್ಯಾಮೆರಾ ಮುಂದೆ ಬಂದಾಗ ಏನೇ ಆದ್ರೂ ಅದನ್ನು ತೇಪೆ ಹಾಕಿವುದಿಲ್ಲ. ಹಾಗೆ ಇತ್ತೀಚೆಗೆ ಲೆದರ್ ಮೆಟೀರಿಯಲ್ ಡ್ರೆಸ್ ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದರು. ಆದರೆ ಹೈ ಹೀಲ್ಸ್ ಆಕೆಯ ಕೈ ಕೊಟಗ್ಟಿತ್ತು. ಹೀಲ್ಸ್ ನಲ್ಲಿ ನಿಲ್ಲು ಆಗದೇ ನಟಿ ಉರ್ಫಿ ಪರದಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಉರ್ಫಿನ್ನು ಟ್ರೋಲ್ ಮಾಡಲಾಗಿತ್ತು. ಈಗ ಉರ್ಫಿ ಮತ್ತೆ ಅದ್ಯಾವ ನಯಾ ಅವತಾರ ತಾಳಲಿದ್ದಾಳೆ. ಯಾವಾಗ ಕ್ಯಾಮೆರ ಮುಂದೆ ಬರುತ್ತಾಳೆ ಎನ್ನುವ ಕುತೂಹಲಗಳು ಹೆಚ್ಚಾಗಿವೆ.

More from Filmibeat

English summary
Urfi Javed Again Trolled For Her New Sack Bag Dress,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X