Don't Miss!
- Sports
Ranji Trophy: ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್ಗಳ ಭರ್ಜರಿ ಜಯ: ಸೆಮಿಫೈನಲ್ಗೆ ಕರ್ನಾಟಕ
- News
ಜಾರಕಿಹೊಳಿ ಸಿಡಿ ಹಗರಣ: ಸಿಬಿಐ ತನಿಖೆಗೆ ವಹಿಸಲು ಸರ್ಕಾರ ಸಿದ್ಧತೆ
- Technology
ಡಿಜೋ ಸಂಸ್ಥೆಯಿಂದ ಮತ್ತೊಂದು ಆಕರ್ಷಕ ಸ್ಮಾರ್ಟ್ವಾಚ್ ಬಿಡುಗಡೆ! ವಿಶೇಷತೆ ಏನು?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Automobiles
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಡುರಸ್ತೆಯಲ್ಲಿ ಅಶ್ಲೀಲ ಫೋಟೊಶೂಟ್ ದುಬೈನಲ್ಲಿ ನಟಿ ಉರ್ಫಿ ಜಾವೇದ್ ಬಂಧನ
ತಮ್ಮ ಚಿತ್ರ ವಿಚಿತ್ರ ಉಡುಗೆಗಳಿಂದ ಸದ್ದು ಮಾಡುತ್ತಿರುವ ಇಬ್ಬರು ಭಾರತೀಯ ಸೆಲೆಬ್ರಿಟಿಗಳೆಂದರೆ ನಟ ರಣ್ವೀರ್ ಸಿಂಗ್ ಹಾಗೂ ನಟಿ ಉರ್ಫಿ ಜಾವೇದ್. ರಣ್ವೀರ್ ಸಿಂಗ್‌ಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ ನಟಿ ಉರ್ಫಿ ಜಾವೇದ್.
ಉರ್ಫಿ ಜಾವೇದ್ ತಮ್ಮ ಚಿತ್ರ ವಿಚಿತ್ರ ಕಾಸ್ಟ್ಯೂಮ್‌ನಿಂದಲೇ ಜನಪ್ರಿಯರು. ಅದರಲ್ಲಿಯೂ ತಮ್ಮ ದೇಹದ ಬಹುಭಾಗವನ್ನು ಪ್ರದರ್ಶನಕ್ಕಿಡುವ ಉಡುಪುಗಳು ಉರ್ಫಿ ಜಾವೇದ್‌ಗೆ ಬಹು ಪ್ರಿಯ.
ಉರ್ಫಿ
ಜಾವೇದ್
ಹೊಸ
ಅವತಾರ:
ಬ್ಲೇಡ್‌ಗಳನ್ನ
ಧರಿಸಿ
ಎಚ್ಚರಿಕೆ
ಕೊಟ್ಟ
ನಟಿ!
ತೀರಾ ಗ್ಲಾಮರಸ್ ಆದ ಉಡುಗೆಗಳನ್ನು ಹಾಕಿಕೊಂಡು ಫೋಟೊಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ ಉರ್ಫಿ ಜಾವೇದ್. ಆದರೆ ಇದೇ ಕಾರಣಕ್ಕೆ ನಟಿ ಉರ್ಫಿ ಜಾವೇದ್ ಈಗ ಬಂಧನಕ್ಕೆ ಒಳಗಾಗಿದ್ದಾರೆ. ಅದೂ ಭಾರತದಲ್ಲ ದುಬೈನಲ್ಲಿ.
ನಟಿ ಉರ್ಫಿ ಜಾವೇದ್ ದುಬೈನಲ್ಲಿ ಗ್ಲಾಮರಸ್ ಉಡುಗೆ ತೊಟ್ಟು ಸಾರ್ವಜನಿಕ ಪ್ರದೇಶದಲ್ಲಿ ಫೋಟೊಶೂಟ್ ಮಾಡಿಸುತ್ತಿದ್ದ ವೇಳೆ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ಉರ್ಫಿ ಜಾವೇದ್ ತಮ್ಮ ಇನ್‌ಸ್ಟಾಗ್ರಾಂಗಾಗಿ ದುಬೈನ ಸಾರ್ವಜನಿಕ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡುವಾಗ ಆಕೆಯನ್ನು ದುಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಡಿಯೋ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಉರ್ಫಿ ಜಾವೇದ್ ಸೂಕ್ತವಾಗಿ ಉಡುಪು ಧರಿಸಿರಲಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈಗಷ್ಟೆ ಹೊರಬೀಳಬೇಕಿದೆ.
ಮಹಿಳೆಯರ ಉಡುಪಿನ ಬಗ್ಗೆ ದುಬೈನಲ್ಲಿ ಕೆಲವು ಕಠಿಣ ನಿಯಮಗಳಿವೆ. ಉರ್ಫಿ ಜಾವೇದ್ ತಮ್ಮ ಮೈಮೇಲೆ 200 ಗ್ರಾಂಗಿಂತಲೂ ಹೆಚ್ಚು ತೂಕದ ಬಟ್ಟೆ ಧರಿಸುವುದು ಅತಿ ವಿರಳ, ಅತಿಯಾದ ಎಕ್ಸ್‌ಪೋಸಿಂಗ್ ಉಡುಪು ಧರಿಸಿದ್ದರಿಂದಲೇ ಉರ್ಫಿಯ ಬಂಧನವಾಗಿದೆ ಎನ್ನಲಾಗುತ್ತಿದೆ.
ಉರ್ಫಿ ಜಾದವ್ ಚಿತ್ರವಿಚಿತ್ರ ಬಟ್ಟೆ ಧರಿಸಿಯೇ ಜನಪ್ರಿಯರಾದವರು. ಎರಡು ಮೊಬೈಲ್ ಫೋನ್‌ಗಳನ್ನು ಸ್ತನಕ್ಕೆ ಅಡ್ಡ ಮುಚ್ಚುವಂತೆ ಇತ್ತೀಚೆಗೆ ಉಡುಪು ವಿನ್ಯಾಸ ಮಾಡಿಸಿಕೊಂಡಿದ್ದರು ಉರ್ಫಿ. ಡಕ್ ಟೇಪ್‌ನಿಂದ ಮಾಡಿದ ಚಿಕ್ಕ ಉಡುಪು ಹೀಗೆ ಚಿತ್ರ-ವಿಚತ್ರವಾದ ಉಡುಪುಗಳನ್ನು ಉರ್ಫಿ ಧರಿಸುತ್ತಿರುತ್ತಾರೆ. ಒಮ್ಮೊಮ್ಮೆ ಏನೂ ಧರಿಸದೆ ಸಹ ಚಿತ್ರಗಳನ್ನು ಉರ್ಫಿ ತೆಗೆಸಿಕೊಂಡಿದ್ದು ಸಹ ಇದೆ.