For Quick Alerts
  ALLOW NOTIFICATIONS  
  For Daily Alerts

  ಉರ್ಫಿ ಜಾವೇದ್ ಹೊಸ ಅವತಾರ: ಬ್ಲೇಡ್‌ಗಳನ್ನ ಧರಿಸಿ ಎಚ್ಚರಿಕೆ ಕೊಟ್ಟ ನಟಿ!

  By Bhagya.s
  |

  ಉರ್ಫಿ ಜಾವೇದ್, ಈಕೆ ಹೆಸರು ಬಂದರೆ ಸಾಕು, ಈ ಬಾರಿ ಹೇಗೆ ಕಾಣಿಸಿಕೊಂಡಿದ್ದಾರೆ. ಯಾವ ಅವತಾರದಲ್ಲಿ ಬರಲಿದ್ದಾಳೆ. ಈ ಬಾರಿ ಅದೇನು ಎಡವಟ್ಟು ಮಾಡುತ್ತಾಳೆ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಅಷ್ಟರ ಮಟ್ಟಿ ಉರ್ಫಿ ಜಾವೇದ್ ಹೆಸರುವಾಸಿ.

  ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದೇ ಹೆಚ್ಚು ಸುದ್ದಿ ಆಗುತ್ತಾಳೆ. ದಿನ ಬೆಳಗಾದರೆ ಸಾಕು ಉರ್ಫಿಯ ಹಿಂದೆ ಕ್ಯಾಮೆರಾಗಳು ಸಾಲು ಗಟ್ಟಿ ನಿಲ್ಲುತ್ತವೆ. ನಿತ್ಯವೂ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ.

  ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಮತ್ತು ಹೊಸ, ಹೊಸದಾಗಿ ಕಾಸ್ಟ್ಯೂಂಗಳನ್ನು ಪ್ರಯೋಗ ಮಾಡುತ್ತಾಳೆ. ಹಾಗಾಗಿ ಆಕೆಯ ಅವತಾರ ನೋಡಲೆಂದೇ ಹಲವು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಈಗ ಬ್ಲೇಡ್ ಧರಿಸಿ ಮತ್ತೆ ಶಾಕ್ ಕೊಟ್ಟಿದೆ.

  ಬ್ಲೇಡ್ ಬಟ್ಟೆ ಧರಿಸಿದ ಉರ್ಫಿ!

  ಬ್ಲೇಡ್ ಬಟ್ಟೆ ಧರಿಸಿದ ಉರ್ಫಿ!

  ಈ ಬಾರಿ ಉರ್ಫಿ ಹೆಚ್ಚು ಸದ್ದು ಮಾಡಿದ್ದು, ತಮ್ಮ ಬ್ಲೇಡ್ ಬಟ್ಟೆಯಿಂದ. ಮೈತುಂಬಾ ಬ್ಲೇಡ್‌ಗಳನ್ನು ನೇತಾಕಿಕೊಂಡು ಕ್ಯಾಮೆರಾ ಮುಂದೆ ಉರ್ಫಿ ಫೋಸ್ ಕೊಟ್ಟಿದ್ದಾರೆ. ಇದು ಉರ್ಫಿ ಉಡುಪುಗಳ ಮತ್ತೊಂದು ಕ್ರಿಯೇಟಿವಿಟಿ. ಈ ಬಾರಿ ಉರ್ಫಿಯ ಬಟ್ಟೆ ಕಂಡು ಮತ್ತೇ ಟ್ರೋಲ್ ಮಾಡಲಾಗುತ್ತಿದೆ. ನೆಟ್ಟಿಗರು ಮತ್ತೆ ಉರ್ಫಿಗೆ ತಿವಿತಿದ್ದಾರೆ. ವೈರಲ್ ಆದ ಉರ್ಫಿಯ ಕೆಲವು ಲುಕ್‌ಗಳ ಬಗ್ಗೆ ಮುಂದೆ ಓದಿ.

  ಗೋಣಿ ಬಟ್ಟೆ ತೊಟ್ಟ ಉರ್ಫಿ!

  ಗೋಣಿ ಬಟ್ಟೆ ತೊಟ್ಟ ಉರ್ಫಿ!

  ದಿನೆ ದಿನೇ ಮತ್ತಷ್ಟು ವಿಚಿತ್ರವಾಗಿ ಕಾಣಿಕೊಳ್ಳುತ್ತಾರೆ ಉರ್ಫಿ. ಈ ಬಾರಿ ಗೋಣಿ ಚೀಲದ ಬಟ್ಟೆ ತೊಟ್ಟಿದ್ದಾರೆ. ಹಾಗಂತ ಉರ್ಫಿ ಗೋಣಿ ಮಾದರಿ ಇರುವ ಬಟ್ಟೆಯನ್ನು ಧರಿಸಿಲ್ಲ. ಬದಲಿಗೆ ಗೋಣಿ ಚೀಲವನ್ನು ಹರಿದು ಕ್ರಾಪ್ ಟಾಪ್ ಮತ್ತು ಸ್ಕ್ರರ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

  ಉರ್ಫಿ ಗಾಜಿನ ಡ್ರೆಸ್ ಅಚ್ಚರಿ ಮೂಡಿಸಿತ್ತು!

  ಉರ್ಫಿ ಗಾಜಿನ ಡ್ರೆಸ್ ಅಚ್ಚರಿ ಮೂಡಿಸಿತ್ತು!

  ಇನ್ನು ಇತ್ತೀಚೆಗೆ ಉರ್ಫಿ ವಿಚಿತ್ರವಾದ ಡ್ರೆಟ್ ತೊಟ್ಟಿದ್ದರು. ಈ ಡ್ರೆಸ್ ಗಾಜಿನಂತೆ ಹೊಳೆಯುತ್ತಾ ಇತ್ತು. ಇದೇನೂ ಹೊಸ ಮಾದರಿ ಮೆಟಿರಿಯಲ್ ಅಂದುಕೊಂಡವರಿಗೆ ಉರ್ಫಿ ಶಾಕ್ ಕೊಟ್ಟರು. ತನ್ನ ಮೈ ಮೇಲೆ ಇರುವು ಗಾಜು ಎಂದು ಹೇಳಿಕೊಂಡಿದ್ದಾರೆ. ಕೆಜಿ ಗಟ್ಟಲೆ ತೂಕದ ಗ್ಲಾಸ್ ಪೀಸ್‌ಗಳನ್ನು ಮೈ ಮೇಲೆ ಹಾಕಿಕೊಂಡು ಉರ್ಫಿ ಪೋಸ್ ಕೊಟ್ಟಿದ್ದರು.

  ಬಟ್ಟೆ ಬಿಟ್ಟು ಪೇಂಟಿಂಗ್ ಮಾಡಿಸಿಕೊಂಡ ಉರ್ಫಿ!

  ಬಟ್ಟೆ ಬಿಟ್ಟು ಪೇಂಟಿಂಗ್ ಮಾಡಿಸಿಕೊಂಡ ಉರ್ಫಿ!

  ಪ್ರತಿ ಭಾರಿ ಡಿಫ್ರೆಂಟ್​ ಆಗಿ ಕಾಣಿಸಿಕೊಳ್ಳುವ ಉರ್ಫಿ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬಿಳಿ ಬಣ್ಣದ ಬ್ಲೇಸರ್ ಮತ್ತು ಪ್ಯಾಂಟ್ ತೊಟ್ಟಿದ್ದಾರೆ ಉರ್ಫಿ. ಆದರೆ ಬ್ಲೇಸರ್ ಒಳಗೆ ಶರ್ಟ್ ಇಲ್ಲ, ಟೀ ಸರ್ಟ್ ಇಲ್ಲ, ಏನೂ ಇಲ್ಲ. ಬದಲಿಗೆ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ತಮ್ಮ ದೇಹದ ಮೇಲೆ ಚೆರ್ರಿ ಬ್ಲಾಸಮ್ ಚಿತ್ರ ಬಿಡಿಸಿಕೊಂಡಿದ್ದಾರೆ. ಗಿಡದ ಬಳ್ಳಿಯಲ್ಲಿ ಹೂ ಇರುವ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಅದೇ ರೀತಿ ತಮ್ಮ ಕೈಗಳ ಮೇಲೂ ಚಿತ್ರಗಳನ್ನು ಬಿಡಿಸಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

  English summary
  Urfi Javed New Blade Dress Viral On Social Media,Know More
  Saturday, July 16, 2022, 22:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X