For Quick Alerts
  ALLOW NOTIFICATIONS  
  For Daily Alerts

  7ನೇ ವಾರಕ್ಕೆ 'ಉರಿ ಸರ್ಜಿಕಲ್ ಸ್ಟ್ರೈಕ್' ಚಿತ್ರದ ಕಲೆಕ್ಷನ್ ಎಷ್ಟು?

  |

  ಉರಿ ದಾಳಿ ಬಗ್ಗೆ ಮೂಡಿಬಂದಿದ್ದ ಚಿತ್ರ ಉರಿ ಸರ್ಜಿಕಲ್ ಸ್ಟ್ರೈಕ್ ಜನವರಿ 11 ರಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಭಾರತೀಯ ಸೇನೆ ಯಾವ ರೀತಿ ಉಗ್ರರ ವಿರುದ್ಧ, ದೇಶದ್ರೋಹಿಗಳು ವಿರುದ್ಧ ಹೇಗೆ ಯುದ್ಧ ಮಾಡ್ತಾರೆ ಎಂಬುದನ್ನ ಉರಿ ಘಟನೆಯ ಹಿನ್ನೆಲೆ ಅದ್ಭುತವಾಗಿ ತೆರೆಮೇಲೆ ತಂದಿತ್ತು.

  ಉರಿ ಸಿನಿಮಾ ಒಂದು ಹಂತದ ಯಶಸ್ಸು ಕಂಡು ಸೈಲೆಂಟ್ ಆಗಿತ್ತು. ಆದ್ರೆ, ಪುಲ್ವಾಮಾ ದಾಳಿ ಬಳಿಕ ಮತ್ತೆ ಉರಿ ಚಿತ್ರದ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಜನರು ಉರಿ ಸರ್ಜಿಕಲ್ ಸ್ಟ್ರೈಕ್ ನೋಡಲು ಥಿಯೇಟರ್ ಕಡೆ ಹೆಜ್ಜೆಯಿಟ್ಟರು. ಇದರ ಪರಿಣಾಮ ಈಗ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡ್ತಿದೆ.

  'ಉರಿ' ಸಿನಿಮಾ ಚೆನ್ನಾಗಿದೆ ಅಂತಾವ್ರೆ, ಕಲೆಕ್ಷನ್ ಎಷ್ಟು ಗೊತ್ತಾ?

  100 ಕೋಟಿ ಬಿಸಿನೆಸ್ ಮಾಡಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಉರಿ ಮತ್ತೆ ಚುರುಕುಗೊಂಡಿದೆ. ಕಲೆಕ್ಷನ್ ನಲ್ಲಿ ಮತ್ತಷ್ಟು ವೇಗ ಕಂಡುಕೊಂಡಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. ಹಾಗಿದ್ರೆ, ಉರಿ ಸಿನಿಮಾ 8 ವಾರಗಳ ಬಳಿಕ ಎಷ್ಟು ಗಳಿಸಿದೆ? ಮುಂದೆ ಓದಿ....

  240 ಕೋಟಿ ದಾಟಿದ ಉರಿ ಗಳಿಕೆ

  240 ಕೋಟಿ ದಾಟಿದ ಉರಿ ಗಳಿಕೆ

  ಯಶಸ್ವಿ 50 ದಿನಗಳನ್ನ ಪೂರೈಸಿದ ಉರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಭೇಟೆ ಮುಂದುವರಿಸಿದೆ. ಸದ್ಯ 7ನೇ ವಾರ ಸಕ್ಸಸ್ ಫುಲ್ ಆಗಿ ಪ್ರರ್ದಶನ ಕಾಣ್ತಿರುವ ಈ ಚಿತ್ರ 240 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

  ವಾರದ ಲೆಕ್ಕಾಚಾರ ಹೇಗಿದೆ

  ವಾರದ ಲೆಕ್ಕಾಚಾರ ಹೇಗಿದೆ

  ವಾರದ ಲೆಕ್ಕಾಚಾರದಲ್ಲಿ ಉರಿ ಕಲೆಕ್ಷನ್ ನೋಡುವುದಾರೇ, ಮೊದಲ ವಾರ 71 ಕೋಟಿ, ಎರಡನೇ ವಾರ 62 ಕೋಟಿ, ಮೂರನೇ ವಾರ 37, ನಾಲ್ಕನೇ ವಾರ 29 ಕೋಟಿ, ಐದನೇ ವಾರ 18 ಕೋಟಿ, ಆರನೇ ವಾರ 11 ಕೋಟಿ, ಏಳನೇ ವಾರ 6 ಕೋಟಿ ಗಳಿಸಿದೆ.

  ನೈಜ ಘಟನೆಯ ಕಥೆ

  ನೈಜ ಘಟನೆಯ ಕಥೆ

  2016ರ ಸೆಪ್ಟೆಂಬರ್​ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.

  ಸರ್ಜಿಕಲ್ ಸ್ಟ್ರೈಕ್ 2 ಬಗ್ಗೆ ಸುದ್ದಿ ಇದೆ

  ಸರ್ಜಿಕಲ್ ಸ್ಟ್ರೈಕ್ 2 ಬಗ್ಗೆ ಸುದ್ದಿ ಇದೆ

  ಉರಿ ಸಿನಿಮಾ ಸಕ್ಸಸ್ ಆಯ್ತು. ಅಷ್ಟರಲ್ಲೇ ಪುಲ್ವಾಮಾ ದಾಳಿಯೂ ನಡೆದು ಹೋಗಿದೆ. ಅದಕ್ಕೆ ಪ್ರತಿಕಾರವಾಗಿ ಪಾಕ್ ಮೂಲದ ಉಗ್ರ ನೆಲೆಯ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಕೂಡ ಮಾಡಿದೆ. ಇದೀಗ, ಈ ಘಟನೆಯನ್ನ ಸರ್ಜಿಕಲ್ ಸ್ಟ್ರೈಕ್ 2 ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಬಾಲಿವುಡ್ ಮಂದಿ ಮುಂದಾಗಿದ್ದಾರೆ.

  English summary
  Uri surgical strike movie has crossed 50 days of running at the box office. The film will become the 10th highest grosser film over the day or two as it hits the Rs 240 crore mark.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X