For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಂ ಖಾತೆ ವಾಪಸ್ ಪಡೆದ ನಟಿ ಊರ್ಮಿಳಾ ಮಾತೋಂಡ್ಕರ್

  |

  ಶಿವಸೇನೆ ಪಕ್ಷದ ಸದಸ್ಯೆ ಹಾಗು ಸಿನಿಮಾ ನಟಿ ಊರ್ಮಿಳಾ ಮಾತೋಂಡ್ಕರ್ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಈ ಸಂಬಂಧ ಬುಧವಾರ ಮಹಾರಾಷ್ಟ್ರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

  ಗುರುವಾರ ನಟಿಯ ಇನ್ಸ್ಟಾಗ್ರಾಂ ಖಾತೆ ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ಊರ್ಮಿಳಾ ಮಾತೋಂಡ್ಕರ್ ತಾವು ಇನ್ಸ್ಟಾಗ್ರಾಂಗೆ ವಾಪಸ್ ಆಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

  'ಬಸಣ್ಣಿ' ಬೆಡಗಿ ತಾನ್ಯ ಹೋಪ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್?

  ''ನಾನು ಇನ್ಸ್ಟಾಗ್ರಾಂಗೆ ಮತ್ತೆ ವಾಪಸ್ ಬಂದಿದ್ದೇನೆ. ನನ್ನ ಖಾತೆ ವಾಪಸ್ ಪಡೆಯಲು ನನಗೆ ಸಹಾಯ ಮಾಡಿದ ಮುಂಬೈ ಪೊಲೀಸ್ ಮತ್ತು ಇನ್ಸ್ಟಾಗ್ರಾಂ ಸಿಬ್ಬಂದಿಗೆ ಧನ್ಯವಾದ. ನನ್ನ ಕೆಲವು ಪೋಸ್ಟ್‌ಗಳು ಮಿಸ್ ಆಗಿದೆ'' ಎಂದು ತಿಳಿಸಿದ್ದಾರೆ.

  ಡಿಸೆಂಬರ್ 16 ರಂದು ನಟಿಯ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ನಟಿಯ ಖಾತೆಯ ಅಡಿ ಬರಹ ಸಹ ಬದಲಾಗಿತ್ತು. ಯಾವುದೇ ಪೋಸ್ಟ್ ಗಳು ಪ್ರದರ್ಶನವಾಗುತ್ತಿರಲಿಲ್ಲ. ಈ ಬಗ್ಗೆ ಸೈಬರ್ ವಿಭಾಗದ ಡಿಸಿಪಿ ರಶ್ಮಿ ಕರಂದಿಕರ್ ಅವರಿಗೆ ದೂರು ನೀಡಿದ್ದರು.

  ಫೋಟೋ, ವಿಡಿಯೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ಡೈರೆಕ್ಟ್ ಮೆಸೇಜ್‌ಗೆ ಪ್ರತಿಕ್ರಿಯಿಸಿದ ನಂತರ ಅಕೌಂಟ್ ಹ್ಯಾಕ್ ಆಗಿದೆ ಎಂದು ನಟಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದರು.

  Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada

  2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಮುಂಬೈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಊರ್ಮಿಳಾ ಮಾತೋಂಡ್ಕರ್ ಇತ್ತೀಚಿಗಷ್ಟೆ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಶಿವಸೇನೆ ಭಾವುಟ ಹಿಡಿದಿದ್ದರು.

  English summary
  Actress and Politician Urmila Matondkar has recovered her Instagram account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X