For Quick Alerts
  ALLOW NOTIFICATIONS  
  For Daily Alerts

  ಶಿವಸೇನೆ ಕೃಪಾಕಟಾಕ್ಷ: ಶಾಸಕಿ ಆಗಲಿದ್ದಾರೆ ಊರ್ಮಿಳಾ ಮತೋಡ್ಕರ್

  |

  ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ನಟಿ ಊರ್ಮಿಳಾ ಮತೋಡ್ಕರ್, ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರಾದರೂ ಅಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಈಗ ಅದೃಷ್ಟವೇ ಅವರನ್ನು ಹುಡುಕಿಕೊಂಡು ಬಂದಿದೆ.

  ಹೌದು, ರಂಗೀಲಾ ನಟಿ ಊರ್ಮಿಳಾ ಮತೋಡ್ಕರ್ ಈಗ ಶಾಸಕಿ ಆಗಲಿದ್ದಾರೆ. ಶಿವಸೇನಾ ಪಕ್ಷವು ಅವರನ್ನು ಎಂಎಲ್‌ಸಿಯಾಗಿ ನಾಮನಿರ್ದೇಶನ ಮಾಡಲಿದೆ.

  'ಊರ್ಮಿಳಾ ನೀಲಿ ಚಿತ್ರಗಳ ನಟಿ' ಎಂದು ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್

  ರಾಜ್ಯಪಾಲರ ಕೋಟಾದಡಿ ಊರ್ಮಿಳಾ ಮತೋಡ್ಕರ್ ಮಹಾರಾಷ್ಟ್ರದ ವಿಧಾನಪರಿಷತ್‌ಗೆ ಸದಸ್ಯೆಯಾಗಿ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲದೆ, ಊರ್ಮಿಳಾ ಮತೋಡ್ಕರ್ ಅವರನ್ನು ಶಿವಸೇನಾ ಪಕ್ಷದ ಪ್ರಮುಖ ವಕ್ತಾರೆಯನ್ನಾಗಿಯೂ ಪಕ್ಷವು ಆಯ್ಕೆ ಮಾಡಿದೆ.

  ಕಾಂಗ್ರೆಸ್‌ನಿಂದ ಚುನಾವಣೆ ಸ್ಪರ್ಧಿಸಿ ಸೋತಿದ್ದರು

  ಕಾಂಗ್ರೆಸ್‌ನಿಂದ ಚುನಾವಣೆ ಸ್ಪರ್ಧಿಸಿ ಸೋತಿದ್ದರು

  ಕಳೆದ ವರ್ಷವಷ್ಟೆ ಊರ್ಮಿಳಾ ಮತೋಡ್ಕರ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಪಕ್ಷ ಸೇರಿದ ಕೂಡಲೇ ಅವರಿಗೆ ಮುಂಬೈ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಅವರು ಸೋತು ಹೋದರು.

  ಆಂತರಿಕ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ

  ಆಂತರಿಕ ರಾಜಕೀಯಕ್ಕೆ ಬೇಸತ್ತು ರಾಜೀನಾಮೆ

  ಚುನಾವಣೆ ಸೋತ ನಂತರ ಸೆಪ್ಟೆಂಬರ್ 10, 2019 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು ಊರ್ಮಿಳಾ. ಪಕ್ಷದಲ್ಲಿ ಅತಿಯಾಗಿ ಆಂತರಿಕ ರಾಜಕಾರಣ ನಡೆಯುತ್ತಿದ್ದು, ಇದರಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು ಊರ್ಮಿಳಾ.

  ಮತ್ತೆ ಹೊಳೆಯುತ್ತಿದೆ ಊರ್ಮಿಳಾ ರಾಜಕೀಯ ಭವಿಷ್ಯ?

  ಮತ್ತೆ ಹೊಳೆಯುತ್ತಿದೆ ಊರ್ಮಿಳಾ ರಾಜಕೀಯ ಭವಿಷ್ಯ?

  ಇದೀಗ ಶಿವಸೇನಾ ಪಕ್ಷವು ಊರ್ಮಿಳಾ ಮತೋಡ್ಕರ್‌ ಅವರನ್ನು ಎಂಎಲ್‌ಸಿ ಅನ್ನಾಗಿ ಮಾಡುತ್ತಿದೆ. ಒಂದು ರೀತಿ ಇದು ಊರ್ಮಿಳಾ ಗೆ ಬಯಸದೇ ಬಂದ ಭಾಗ್ಯ. ಬಹುತೇಕ ಮಸುಕಾಗಿದ್ದ ಊರ್ಮಿಳಾ ರಾಜಕೀಯ ಭವಿಷ್ಯ ಈಗ ಮತ್ತೆ ಹೊಳೆಯಲು ಶುರುವಾಗಿದೆ.

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
   ಊರ್ಮಿಳಾರನ್ನು ನೀಲಿ ಚಿತ್ರ ನಟಿ ಎಂದಿದ್ದ ಕಂಗನಾ

  ಊರ್ಮಿಳಾರನ್ನು ನೀಲಿ ಚಿತ್ರ ನಟಿ ಎಂದಿದ್ದ ಕಂಗನಾ

  ಇತ್ತೀಚೆಗಷ್ಟೆ ಕಂಗನಾ ರಣೌತ್, ಊರ್ಮಿಳಾ ರನ್ನು 'ನೀಲಿ ಚಿತ್ರ ನಟಿ' ಎಂದು ಕರೆದಿದ್ದರು. ಊರ್ಮಿಳಾ ಹಾಗೂ ಕಂಗನಾ ನಡುವೆ ಟ್ವಿಟ್ಟರ್‌ನಲ್ಲಿ ಬಿಸಿ-ಬಿಸಿ ಸಂಭಾಷಣೆ ನಡೆದವು. ಊರ್ಮಿಳಾ ಸಹ ಕಂಗನಾ ರ ಬಗ್ಗೆ ಹೇಳಿಕೆ ನೀಡಿದ್ದರು. ನಂತರ ಈ ವಿಷಯ ತಣ್ಣಗಾಯಿತು.

  English summary
  Actress Urmila Matondkar nominated as MLC by Shiv Sena party. Last year she resigned Congress, now she nominated from Shiv Sena.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X