»   » 'ಐರಾವತ' ಚಿತ್ರದ ನಾಯಕಿಗೆ ಜೀವ ಬೆದರಿಕೆ

'ಐರಾವತ' ಚಿತ್ರದ ನಾಯಕಿಗೆ ಜೀವ ಬೆದರಿಕೆ

Posted By:
Subscribe to Filmibeat Kannada
'ಐರಾವತ' ಚಿತ್ರದ ನಾಯಕಿಗೆ ಜೀವ ಬೆದರಿಕೆ | FIlmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಊರ್ವಶಿ ರೌಟೇಲಾಗೆ ಜೀವ ಬೆದರಿಕೆ ಬರುತ್ತಿದೆ. ಊರ್ವಶಿ ರೌಟೇಲಾ ಅಭಿನಯದ ಹಿಂದಿ ಸಿನಿಮಾ 'ಹೇಟ್ ಸ್ಟೋರಿ-4' ತೆರೆಕಂಡಿದ್ದು, ಈ ಚಿತ್ರದಲ್ಲಿ ಊರ್ವಶಿ ದ್ರೌಪದಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಚಿತ್ರದ ಸನ್ನಿವೇಶವೊಂದರಲ್ಲಿ ''ದ್ರೌಪದಿಗೆ ಐದು ಜನ ಪಾಂಡವರು ಇದ್ದರು. ಇಲ್ಲಿ ಇಬ್ಬರೇ ಇರೋದು'' ಎಂಬ ಡೈಲಾಗ್ ಹೇಳಲಾಗಿದೆ. ಇದು ಅಭಿಮಾನಿಗಳನ್ನ ಕೆರಳಿಸಿದೆ. ಇದನ್ನ ಖಂಡಿಸಿರುವ ಚಿತ್ರಪ್ರೇಮಿಗಳು ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಊರ್ವಶಿಗೆ ಬೆದರಿಕೆ ಕೂಡ ಹಾಕುತ್ತಿದ್ದಾರಂತೆ.

'ಹೇಟ್ ಸ್ಟೋರಿ 4' ಸಿನಿಮಾ ಮಾಡೆಲ್ ಒಬ್ಬಳು ತನ್ನ ಸಕ್ಸಸ್ ಗಾಗಿ ಸಹೋದರರನ್ನ ಹೇಗೆ ಬಳಸಿಕೊಳ್ಳುತ್ತಾಳೆ ಎಂಬ ಕಥೆ ಹೊಂದಿದೆ. ಈ ಕಥೆಯಲ್ಲಿ ಇಬ್ಬರು ನಟರ ಜೊತೆ ನಾಯಕಿ ಸಂಬಂಧ ಬೆಳೆಸುತ್ತಾಳೆ. ಈ ಸಂದರ್ಭದಲ್ಲಿ ಈ ಡೈಲಾಗ್ ಬರುತ್ತೆ.

ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಈ ನಟಿ ಹಾಲಿವುಡ್ ಚಿತ್ರವನ್ನೇ ರಿಜೆಕ್ಟ್ ಮಾಡಿದ್ದಾರೆ!

Urvashi Rautela getting death threats

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಊರ್ವಶಿ ''ಇದು ಒಂದು ರೀತಿ ದುರಂತ. ಈ ಆರೋಪ ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ಸಿನಿಮಾವನ್ನ ಕೇವಲ ಸಿನಿಮಾ ರೀತಿಯಲ್ಲಿ ನೋಡಿ. ಅದು ಯಾವುದೇ ವೈಯಕ್ತಿಕವಲ್ಲ. ಕಥೆಗೆ ಬೇಕಾಗುವಂತಹ ಸಂಭಾಷಣೆ ಬರೆಯಲಾಗುತ್ತೆ. ಇದು ಯಾರನ್ನ ಅವಹೇಳನ ಮಾಡುವ ಉದ್ದೇಶವಲ್ಲ. ದ್ರೌಪದಿ ಇತಿಹಾಸದಲ್ಲಿರುವ ಮಹಾನ್ ಸ್ತ್ರೀ. ಆಕೆ ಬಗ್ಗೆ ನಮಗೆ ಗೌರವವಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

''ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಆಯ್ತು ಈಗ ನಮ್ಮ ಚಿತ್ರಕ್ಕೆ ವಿವಾದ. ದಯವಿಟ್ಟು ಪ್ರೇಕ್ಷಕರು ಅರ್ಥ ಮಾಡಿಕೊಳ್ಳಬೇಕು. ತೆರೆಮೇಲೆ ಹೇಳುತ್ತಿರುವುದು ಕೇವಲ ಸಿನಿಮಾ ದೃಷ್ಟಿಯಲ್ಲಿ ಮಾತ್ರ. ಅದನ್ನ ಹಾಗೆ ಸ್ವೀಕರಿಸಿ. ಅದಕ್ಕೂ, ಇತಿಹಾಸಕ್ಕೂ ಸಂಬಂಧ ಕಲ್ಪಿಸುವುದು ಬೇಡ'' ಎಂದು ಊರ್ವಶಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ವಾವ್.! 'ಐರಾವತ' ಬೆಡಗಿಯ ಬೊಂಬಾಟ್ ಬೆಕ್ಕಿನ ನಡಿಗೆ.!

Urvashi Rautela getting death threats

ಇನ್ನುಳಿದಂತೆ 'ಹೇಟ್ ಸ್ಟೋರಿ-4' ಸಿನಿಮಾ ಮಾರ್ಚ್ 8 ರಂದು ಬಿಡುಗಡೆಯಾಗಿದೆ. ವಿಶಾಲ್ ಪಾಂಡ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಊರ್ವಶಿ ರೌಟೇಲಾ, ವಿವಾನ್, ಕಿರಣ್ ಮತ್ತು ಡಿಲ್ಲೋನ್ ಇಹಾನ್ ನಟಿಸಿದ್ದಾರೆ.

English summary
Urvashi Rautela on getting death threats for Hate Story 4. Reacting to the death threats regarding her character in Hate Story 4, actor Urvashi Rautela says that people need to understand that whatever actors say or do on screen is not a reflection of their personal opinions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada